ರಾಯಚೂರು ಜಿಲ್ಲೆಯಲ್ಲಿ ಸುರಿದ ನಿರಂತರ ಮಳೆಯಿಂದ ಮಸ್ಕಿ ಜಲಾಶಯ ಭರ್ತಿಗೊಂಡಿದ್ದು, ಜಲಾಶಯದ ಎರಡು ಗೇಟ್ ಮೂಲಕ 300 ಕ್ಯೂಸೆಕ್ ನೀರು ಬಿಡುಗಡೆ. ಸದ್ಯ ಜಲಾಶಯಕ್ಕೆ 500 ಕ್ಯೂಸೆಕ್ ಒಳಹರಿವು ಕೂಡ ಆಗಿದೆ. ಮಸ್ಕಿ ಹಳ್ಳಕ್ಕೆ ನೀರು ಬಿಟ್ಟ ಹಿನ್ನೆಲೆ ಅಧಿಕಾರಿಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದ್ದು, ಹಳ್ಳದ ಪಾತ್ರದ ಜನ ಹಳ್ಳದಲ್ಲಿ ಇಳಿಯುವುದು, ಜಾನುವಾರುಗಳನ್ನು ಬಿಡದಂತೆ ಸೂಚಿಸಿದ್ದಾರೆ.