ಬಿಗ್ ಬಾಸ್ ಮನೆಯಲ್ಲಿ ಕಾವ್ಯಶ್ರೀ ಗೌಡ ಅವರು ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ಮಾತನಾಡುವ ಮಂಡ್ಯ ಭಾಷೆ ಅನೇಕರಿಗೆ ಇಷ್ಟ ಆಗುತ್ತಿದೆ.
ಈಗ ಬಿಗ್ ಬಾಸ್ ಮನೆಯಲ್ಲಿ ನಡೆದ ಒಂದು ಘಟನೆ ಎಲ್ಲರ ಅಚ್ಚರಿಗೆ ಕಾರಣ ಆಗಿದೆ. ‘ನೀವು ಮೊದ್ಲು ಕಳ್ಳತನ ಮಾಡ್ತಿದ್ರಾ?’ ಎಂದು ಅರುಣ್ ಸಾಗರ್ ಅವರು ಕಾವ್ಯಶ್ರೀಗೆ ಪ್ರಶ್ನೆ ಮಾಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಪ್ರಶಾಂತ್ ಸಂಬರ್ಗಿ ಅವರ ಸೂಟ್ಕೇಸ್ ಲಾಕ್ ಆಗಿತ್ತು. ಇದಕ್ಕೆ ಪಾಸ್ವರ್ಡ್ ಇತ್ತು. ಇದನ್ನು ಓಪನ್ ಮಾಡಿಕೊಟ್ಟಿದ್ದಾರೆ ಕಾವ್ಯಾ.
ಕಾವ್ಯಾಗೆ ಪಾಸ್ವರ್ಡ್ ಗೊತ್ತಿರಲಿಲ್ಲ. ಆದಾಗ್ಯೂ ಅವರು ಪಾಸ್ವರ್ಡ್ ತೆಗೆದುಕೊಟ್ಟಿದ್ದಾರೆ. ಇದನ್ನು ನೋಡಿ ಅಚ್ಚರಿಗೊಂಡಿದ್ದಾರೆ ಅರುಣ್ ಸಾಗರ್.
‘ನಿನ್ನನ್ನು ಕಳ್ಳತನಕ್ಕೆ ಕರೆದುಕೊಂಡು ಹೋದರೆ ವರ್ಕೌಟ್ ಆಗುತ್ತದೆ. ನೀವು ಮೊದ್ಲು ಕಳ್ಳತನ ಮಾಡ್ತಿದ್ರಾ?’ ಎಂದು ಪ್ರಶ್ನೆ ಮಾಡಿದ್ದಾರೆ ಅರುಣ್ ಸಾಗರ್.