ಕೀರ್ತಿ ಸುರೇಶ್ ಪ್ರತಿಭಾವಂತ ನಟಿ. ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ. ನಟಿ ಮಹಿಳಾ ಪ್ರಧಾನ ಚಿತ್ರಗಳಲ್ಲಿ, ಪಾತ್ರಕ್ಕೆ ತೂಕವಿರುವ ಚಿತ್ರಗಳನ್ನು ಮಾತ್ರ ಅವರು ಆಯ್ದುಕೊಳ್ಳುತ್ತಾರೆ.
‘ಶೈಲಜಾ’ ಚಿತ್ರದಲ್ಲಿ ಬಣ್ಣಹಚ್ಚಿದ ನಂತರ ಬೆಳ್ಳಿತೆರೆಗೆ ಕಾಲಿಟ್ಟ ನಟಿ ಕಡಿಮೆ ಅವಧಿಯಲ್ಲಿಯೇ ಸ್ಟಾರ್ ನಟರಿಗೆ ನಾಯಕಿಯಾಗಿ ಕಾಣಿಸಿಕೊಂಡವರು.
ಟಾಲಿವುಡ್ ಜತೆಗೆ ತಮಿಳು ಚಿತ್ರರಂಗದಲ್ಲೂ ಕೀರ್ತಿಗೆ ಬೇಡಿಕೆ ಇದೆ. ಮಹಿಳಾ ಪ್ರಧಾನ ಪಾತ್ರಗಳ ಮೂಲಕ ತಮ್ಮದೇ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿದ್ದಾರೆ ನಟಿ.
ಆದರೆ ಕೀರ್ತಿ ಸುರೇಶ್ ಒಂದು ವಿಚಾರದಲ್ಲಿ ಉಳಿತ ನಟಿಯರಿಗಿಂತ ಭಿನ್ನ. ಹಲವು ನಟಿಯರು ಗ್ಲಾಮರಸ್ ಪಾತ್ರಗಳಿಗೆ ಆದ್ಯತೆ ನೀಡಿದರೆ ಕೀರ್ತಿ ಮಾತ್ರ ಪಾತ್ರಕ್ಕೆ ಮಹತ್ವವಿರುವ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ.
ಗ್ಲಾಮರಸ್ ಪಾತ್ರಗಳಲ್ಲಿ ಏಕೆ ಕಾಣಿಸಿಕೊಳ್ಳುವುದಿಲ್ಲ ಎಂದು ನಟಿ ಕಾರಣವನ್ನು ಬಹಿರಂಗಪಡಿಸಿದ್ದಾರೆ.
ಸಂದರ್ಶನವೊಂದರಲ್ಲಿ ಕೀರ್ತಿ ಮಾತನಾಡುತ್ತಾ, ‘‘ವೃತ್ತಿ ಜೀವನದ ಆರಂಭದಿಂದಲೂ ಪಾತ್ರ ಪ್ರಧಾನ ಚಿತ್ರಗಳಿಗೆ ಆದ್ಯತೆ ನೀಡುತ್ತೇನೆ. ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವುದಕ್ಕೆ ನನಗೆ ನಾನೇ ಮಿತಿ ಹಾಕಿಕೊಳ್ಳುತ್ತೇನೆ’’ ಎಂದಿದ್ದಾರೆ.
ಜತೆಗೆ ‘‘ಗ್ಲಾಮರಸ್ ಪಾತ್ರಗಳಿಂದ ದೂರ ಉಳಿಯುವ ನನ್ನ ಆಲೋಚನಾ ಕ್ರಮ ಹಾಗೂ ನಟನೆಯನ್ನು ಮೆಚ್ಚಿ ಅಭಿಮಾನಿಗಳು ಗೌರವಿಸುತ್ತಾರೆ ಎಂದು ಭಾವಿಸುತ್ತೇನೆ’’ ಎಂದಿದ್ದಾರೆ ಕೀರ್ತಿ ಸುರೇಶ್.
Published On - 10:20 am, Tue, 26 April 22