AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Onam 2021: 10 ದಿನದ ಓಣಂ ಹಬ್ಬದ ವೇಳೆ ಆಚರಿಸುವ ಇತರೆ ಕಾರ್ಯಕ್ರಮಗಳು ನಿಮಗೆ ಗೊತ್ತೇ?

ಓಣಂ ಕೇರಳ ರಾಜ್ಯದಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬವಾಗಿದೆ. ಓಣಂ ಹಬ್ಬವನ್ನು 10 ದಿನಗಳವರೆಗೆ ಆಚರಿಸಲಾಗುತ್ತದೆ. ಆಗಸ್ಟ್ 12ರಿಂದ ಓಣಂ ಆರಂಭವಾಗಿದ್ದು ಆಗಸ್ಟ್ 23ಕ್ಕೆ ಓಣಂ ಕೊನೆಗೊಳ್ಳುತ್ತೆ. ಓಣಂ ಹಬ್ಬದ 10 ದಿನಗಳು ಅನೇಕ ವಿಶೇಷ ಚಟುವಟಿಕೆಗಳನ್ನು ಮಾಡಲಾಗುತ್ತೆ. ಅದರ ಬಂದು ತುಣುಕು ಇಲ್ಲಿದೆ.

TV9 Web
| Updated By: Skanda

Updated on: Aug 13, 2021 | 6:54 AM

ಪೂಕಳಂ (Pookalam): ಪೂಕಳಂ ಎಂದರೆ ರಂಗೋಲಿ. ಮನೆಯ ಸದಸ್ಯರೆಲ್ಲ ಸೇರಿ ತಮ್ಮ ಮನೆ ಬಳಿ ಸಿಗುವ ವಿವಿಧ ಬಗೆಯ ಬಣ್ಣ ಬಣ್ಣದ ಹೂವುಗಳನ್ನು ತಂದು ಮನೆಯ ಮುಂದೆ ಸುಂದರವಾದ ದೊಡ್ಡ ಹೊವಿನ ರಂಗೋಲಿಯನ್ನು ಬಿಡಿಸುತ್ತಾರೆ. ಚಿಕ್ಕವರಿಂದ ಹಿಡಿದು ದೊಡ್ಡವರ ವರೆಗೆ ಎಲ್ಲರೂ ಸಂತೋಷ, ಸಂಭ್ರಮದಿಂದ ಪೂಕಳಂ ಬಿಡಿಸುತ್ತಾರೆ. ಹಾಗೂ ಈ ವೇಳೆ ಸಾಂಪ್ರದಾಯಿಕ ಹಾಡುಗಳನ್ನು ಹಾಡುತ್ತಾರೆ.

Kerala Onam Celebration 2021 know how malayalis celebrate 10 days of onam

1 / 9
ಹುಲಿ ನೃತ್ಯ (Puli Kali): ಇದು ಓಣಂ ಹಬ್ಬದಲ್ಲಿ ಹಮ್ಮಿಕೊಳ್ಳಲಾಗುವ ಜಾನಪದ ನೃತ್ಯ. ಇದನ್ನು ಪುಲಿ ಕಲಿ ಎಂದು ಕರೆಯುತ್ತಾರೆ. ಪುಲಿ ಎಂದರೆ ಹುಲಿ ಎಂದರ್ಥ. ಮತ್ತು ಕಲಿ ಎಂದರೆ ನೃತ್ಯ ಎಂಬರ್ಥವನ್ನು ಸೂಚಿಸುತ್ತದೆ. ಪುರುಷರು ಹುಲಿಯ ವೇಷವನ್ನು ಧರಿಸಿ, ಪ್ರತೀ ಮನೆಯ ಮುಂದೆ ಬಂದು ನೃತ್ಯವನ್ನು ಮಾಡುತ್ತಾರೆ. ಇನ್ನು ಇದೇ ರೀತಿಯ ನೃತ್ಯವನ್ನು ಮಂಗಳೂರಿನಲ್ಲೂ ನಾವು ಇದೇ ನೃತ್ಯವನ್ನು ನೋಡಬಹುದು.

Kerala Onam Celebration 2021 know how malayalis celebrate 10 days of onam

2 / 9
ಹಗ್ಗ ಜಗ್ಗಾಟ(Vadam Vali): ಹಗ್ಗ ಜಗ್ಗಾಟವನ್ನು ಮಲಯಾಳಂ ಭಾಷೆಯಲ್ಲಿ ವಾಡಂ ವಾಲಿ ಎಂದು ಕರೆಯಲಾಗುತ್ತದೆ. ವಾಡಂ ಎಂದರೆ ಹಗ್ಗ ಎಂದರ್ಥ. ಹಾಗೂ ವಾಲಿ ಎಂದರೆ ಎಳೆಯುವುದು ಎಂದರ್ಥ. ಇದನ್ನು ಓಣಂ ಹಬ್ಬದ ಪ್ರಮುಖ ಭಾಗವಾಗಿ ಆಚರಿಸಲಾಗುತ್ತದೆ. ಓಣಂ ಹಬ್ಬದ ಹಗ್ಗ ಜಗ್ಗಾಟದಲ್ಲಿ ಎಲ್ಲಾ ವಯಸ್ಸಿನ ಪುರುಷ ಮತ್ತು ಮಹಿಳೆಯರು ಭಾಗವಹಿಸುತ್ತಾರೆ.

3 / 9
ವಲ್ಲಂ ಕಲಿ(Vallam Kali): ವಲ್ಲಂ ಕಲಿ ಕೇರಳದಲ್ಲಿ ಆಚರಿಸಲಾಗುವ ಬೋಟ್‌ ರೇಸ್‌. ವಲ್ಲಂ ಕಲಿ ಓಣಂ ನ ಪ್ರಮುಖ ಆಕರ್ಷಣೆಯಾಗಿರುವುದರಿಂದ ಈ ಆಟವನ್ನು ನೋಡಲು ವಿದೇಶದಿಂದ ಕೂಡ ಜನರು ಆಗಮಿಸುತ್ತಾರೆ. ವಲ್ಲಂ ಕಲಿಯಲ್ಲಿ ದೋಣಿಗಳನ್ನು ಸುಂದರವಾದ ಹೂವುಗಳಿಂದ ಅಲಂಕರಿಸಿ, ದೋಣಿಯ ನಡುವೆ ರೇಸ್‌ ಸ್ಪರ್ಧೆಯನ್ನು ಇಡಲಾಗುತ್ತದೆ.

4 / 9
ಕುಮ್ಮಟ್ಟಿ ಕಲಿ (Kummattikali): ಕುಮ್ಮಟ್ಟಿ ಕಲಿಯನ್ನು ಮಾಸ್ಕ್‌ ಡಾನ್ಸ್‌ ಎಂದೂ ಸಹ ಕರೆಯಲಾಗುತ್ತದೆ. ಇದಕ್ಕೆ 150 ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ಕುಮ್ಮಟ್ಟಿ ಕಲಿ ಒಂದು ರೀತಿಯ ನೃತ್ಯವಾಗಿದ್ದು, ಇದರಲ್ಲಿ ನರ್ತಕರು ಮರದಿಂದ ಮಾಡಿದ ವರ್ಣರಂಜಿತ ಮುಖವಾಡವನ್ನು ಮತ್ತು ಹುಲ್ಲಿನಿಂದ ತಯಾರಿಸಿದ ಉಡುಪುಗಳನ್ನು ಧರಿಸಿಕೊಂಡು ನೃತ್ಯ ಮಾಡುತ್ತಾರೆ.

5 / 9
ಓಣಾಥಲ್ಲು(Onathallu): ಕೇರಳದಲ್ಲಿ ಓಣಂ ಹಬ್ಬದಂದು ಓಣಾಥಲ್ಲು ಆಚರಿಸಲಾಗುತ್ತದೆ. ಇದು ಸಾಂಪ್ರದಾಯಿಕ ಸಮರ ಕಲೆಯಾಗಿದೆ. ಯೋಧ ಕುಲವೆಂದೇ ಗುರುತಿಸಿಕೊಂಡ ನಾಯರ್‌ ಸಮುದಾಯದ ಪುರುಷರು ಅನೇಕ ಶತಮಾನಗಳ ಹಿಂದಿನಿಂದಲೂ ನಡೆದುಕೊಂಡು ಬಂದ ಸಾಂಪ್ರದಾಯಿಕ ಯುದ್ಧ ತಂತ್ರಗಳನ್ನು ಈ ವೇಳೆ ಪ್ರದರ್ಶಿಸುತ್ತಾರೆ. ನಿಜವಾದ ಯುದ್ಧಭೂಮಿಯಲ್ಲಿ ನಾವು ಯುದ್ಧವನ್ನು ಮಾಡುತ್ತಿರುವಂತೆ ಪರುಷರು ಯುದ್ಧ ಕಲೆಯನ್ನು ತೋರಿಸುತ್ತಾರೆ.

6 / 9
ತುಂಬಿ ತುಲ್ಲಾಲ್‌ (Thumbi Thullal): ತುಂಬಿ ತುಲ್ಲಾಲ್‌ ಓಣಂ ನಲ್ಲಿ ಆಯೋಜಿಸಲಾಗುವ ಸಾಂಪ್ರದಾಯಿಕ ಜಾನಪದ ನೃತ್ಯ. ಓಣಂ ಹಬ್ಬದ ದಿನ ಕೇರಳ ಮಹಿಳೆಯರು ತಮ್ಮ ಸಾಂಪ್ರದಾಯಿಕ ಉಡುಪು, ಮಲ್ಲಿಗೆ ಹೂವು, ಚಿನ್ನಾಭರಣಗಳನ್ನು ಧರಿಸಿ ನೃತ್ಯವನ್ನು ಪ್ರದರ್ಶಿಸುತ್ತಾರೆ.

7 / 9
ತಿರುವತಿರಕಲಿ (Thiruvathirakali): ಇದು ಕೂಡ ಕೇರಳದ ಸಂಪ್ರದಾಯಿಕ ನೃತ್ಯವಾಗಿದೆ. ಮಹಿಳೆಯರು ಸಂಪ್ರದಾಯಿಕ ಉಡುಗೆಯೊಂದಿಗೆ ನೃತ್ಯವನ್ನು ಪ್ರದರ್ಶಿಸುತ್ತಾರೆ. ಆದ್ರೆ ಈ ನೃತ್ಯ ಮಾಡುವಾಗ ಗುಂಪಿನ ಮಧ್ಯದಲ್ಲಿ ದೀಪವನ್ನಿಟ್ಟುಕೊಂಡು ನೃತ್ಯ ಮಾಡುತ್ತಾರೆ. ಈ ನೃತ್ಯದಲ್ಲಿ ಕೇವಲ ಮಹಿಳೆಯರು ಮಾತ್ರವಲ್ಲ, ಯುವಕರಿಂದ ಹಿಡಿದು ವೃದ್ಧರವರೆಗೂ ಪಾಲ್ಗೊಳ್ಳುತ್ತಾರೆ.

8 / 9
ಓಣಸಡ್ಯ(Onasadya): ಓಣಸಡ್ಯ ಎಂಬುದೂ ತಿರುಓಣಂ ದಿನದಂದು ಮಾಡುವ ವಿಶೇಷ ಭೋಜನ. ಹೊಸ ಬೆಳೆಗಳನ್ನು ತಂದು ಈ ದಿನ ಆಹಾರವನ್ನು ತಯಾರಿಸಲಾಗುತ್ತದೆ. ಈ ಊಟವು ರಾಜ ಮನೆತನದ ವೈಭೋಗದ ಊಟವಾಗಿದ್ದು, ಮೂರು ಬಗೆಯ ಪಾಯಸ ಸೇರಿದಂತೆ ನಾನಾ ರೀತಿಯ ಖಾದ್ಯಗಳನ್ನು ತಯಾರಿಸಲಾಗುತ್ತದೆ. ರಾಜ ಮಾಹಾಬಲಿಯ ಸಂತೋಷ ಮತ್ತು ಸಮೃದ್ಧಿಯುತ ಜೀವನವನ್ನು ಈ ಊಟ ನೆನಪಿಸುತ್ತದೆ.

9 / 9
Follow us
ಹೀಗೂ ಉಂಟೆ... ಅಳತೆ ಮೀರಿದ ಬ್ಯಾಟ್ ಬಳಸಲು ರವೀಂದ್ರ ಜಡೇಜಾ ಸರ್ಕಸ್

Daily Devotional: ಮಂಗಳವಾರ ಹಾಗೂ ಶುಕ್ರವಾರ ಹಣವನ್ನು ಕೊಡಬಹುದಾ?

Daily Horoscope: ವೃಷಭ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭಫಲ

ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ

ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ

ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು

ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್

ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...

ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ

ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್