ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಅವರು ಹೊಸ ಕಾರು ಖರೀದಿಸಿದ್ದಾರೆ. ಐಷಾರಾಮಿ ಕಾರು ಖರೀದಿಸಿರುವ ರಾಕಿಂಗ್ ಸ್ಟಾರ್ಗೆ ಅಭಿಮಾನಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ.
ಯಶ್ ಖರೀದಿಸಿರುವ ಹೊಸ ರೇಂಜ್ ರೋವರ್ ಕಾರಿನ ಬೆಲೆ 4 ಕೋಟಿ ರೂಪಾಯಿ ಎಂಬುದು ಗಮನಿಸಬೇಕಾದ ಅಂಶ. ಹಲವು ಐಷಾರಾಮಿ ಸೌಲಭ್ಯಗಳು ಈ ಕಾರಿನಲ್ಲಿ ಇವೆ.
ಹೊಸ ಕಾರಿನಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ಅವರು ಸುತ್ತಾಡಿದ್ದಾರೆ. ಈ ಸಂಭ್ರಮದ ಕ್ಷಣದಲ್ಲಿ ಯಶ್ ಅವರ ಮಕ್ಕಳಾದ ಯಥರ್ವ್, ಆಯ್ರಾ ಕೂಡ ಪೋಸ್ ನೀಡಿದ್ದಾರೆ.
ಹಲವು ಬ್ರ್ಯಾಂಡ್ಗಳಿಗೆ ಯಶ್ ಪ್ರಚಾರ ರಾಯಭಾರಿ ಆಗಿದ್ದಾರೆ. ಅದಕ್ಕೆ ಅವರು ಕೋಟ್ಯಂತರ ರೂ. ಸಂಭಾವನೆ ಪಡೆಯುತ್ತಾರೆ. ಅದರಂತೆ ಅವರ ಲೈಫ್ ಸ್ಟೈಲ್ ಬದಲಾಗಿದೆ.
ರೇಂಜ್ ರೋವರ್ ಕಾರಲ್ಲಿ ಯಶ್-ರಾಧಿಕಾ ಸುತ್ತಾಡಿದ ವಿಡಿಯೋ ವೈರಲ್ ಆಗಿದೆ. ಇದರ ಬೆಲೆ ಎಷ್ಟು ಎಂದು ಕೂಡ ಅಭಿಮಾನಿಗಳು ಗೂಗಲ್ನಲ್ಲಿ ಹುಡುಕಾಡುತ್ತಿದ್ದಾರೆ.