
ಇಂದು (ಜೂನ್ 5) ನಡೆದ ಅಭಿಷೇಕ್ ಅಂಬರೀಷ್-ಅವಿವಾ ಬಿಡಪ ಮದುವೆಗೆ ಆಗಮಿಸಿ ಕಿಚ್ಚ ಸುದೀಪ್ ಹಾಗೂ ಪ್ರಿಯಾ ದಂಪತಿ ವಿಶ್ ಮಾಡಿದ್ದಾರೆ.

ಅಭಿಷೇಕ್ ಅವರ ಹೆಗಲ ಮೇಲೆ ಕೈ ಹಾಕಿ ಸುದೀಪ್ ಪೋಸ್ ನೀಡಿದ್ದಾರೆ. ಅವಿವಾ ಪಕ್ಕ ಪ್ರಿಯಾ ಸುದೀಪ್ ನಿಂತಿದ್ದರು.

ಸುದೀಪ್ ಹಾಗೂ ಅಂಬರೀಷ್ ಮಧ್ಯೆ ಒಳ್ಳೆಯ ಒಡನಾಟ ಇತ್ತು. ಸುದೀಪ್ ಬಗ್ಗೆಯೂ ಅಂಬರೀಷ್ಗೆ ವಿಶೇಷ ಗೌರವ. ಈಗ ಗೆಳೆಯನ ಮದುವೆಗೆ ಬಂದು ಅವರು ವಿಶ್ ಮಾಡಿದ್ದಾರೆ.

ಸುದೀಪ್ ಅವರ ಆಗಮನದಿಂದ ಮದುವೆಯ ಕಳೆ ಹೆಚ್ಚಿದೆ. ಸ್ಟಾರ್ ದಂಪತಿ ನವ ಜೋಡಿಗೆ ಶುಭ ಹಾರೈಸಿದ್ದಾರೆ.

ಇಂದು ಮುಂಜಾನೆ 9.30 ಸುಮಾರಿಗೆ ಈ ಜೋಡಿ ವಿವಾಹ ಆಗಿದೆ. ಅನೇಕ ಸೆಲೆಬ್ರಿಟಿಗಳು ಈ ಮದುವೆಗೆ ಆಗಮಿಸಿ ವಿಶ್ ಮಾಡುತ್ತಿದ್ದಾರೆ.
Published On - 1:09 pm, Mon, 5 June 23