ಕೋಟೆನಾಡು ಚಿತ್ರದುರ್ಗದಲ್ಲಿ ಗಾಳಿಪಟ ಹಬ್ಬ; ಮಕ್ಕಳಿಗೆ ಸಾಥ್ ನೀಡುವ ಮೂಲಕ ಬಾಲ್ಯ ನೆನೆದ ಪೋಷಕರು, ಶಿಕ್ಷಕರು

|

Updated on: Jul 28, 2024 | 5:14 PM

ಆಷಾಡ ಮಾಸದಲ್ಲಿ ಅತಿ ಹೆಚ್ಚು ಗಾಳಿ ಬೀಸುತ್ತದೆ. ಹೀಗಾಗಿ ಮಕ್ಕಳು ಆಷಾಡದಲ್ಲಿ ಗಾಳಿಪಟ ಹಾರಾಟ ಮಾಡುವುದು ಸಹಜ ಸಂಗತಿ. ಇದೀಗ ಕೋಟೆನಾಡು ಚಿತ್ರದುರ್ಗದಲ್ಲಿ ಗಾಳಿಪಟ ಹಬ್ಬವನ್ನೇ ಆಚರಿಸಲಾಗಿದೆ. ಶಿಕ್ಷಕರು ಮತ್ತು ಪೋಷಕರು ಮಕ್ಕಳಿಗೆ ಸಾಥ್ ನೀಡುವ ಮೂಲಕ ಬಾಲ್ಯ ನೆನೆದಿದ್ದಾರೆ. ಈ ಕುರಿತು ಒಂದು ಝಲಕ್ ಇಲ್ಲಿದೆ.

1 / 6
ಬಣ್ಣ ಬಣ್ಣದ ಗಾಳಿಪಟಗಳನ್ನಿಡಿದು ಬರುತ್ತಿರುವ ಮಕ್ಕಳು. ಆಕಾಶದೆತ್ತರಕ್ಕೆ ಗಾಳಿಪಟ ಹಾರಿ ಸಂಭ್ರಮಿಸುತ್ತಿರುವ ವಿದ್ಯಾರ್ಥಿಗಳು. ಮಕ್ಕಳ ಜತೆ ಗಾಳಿಪಟ ಹಾರಿಸುತ್ತ ಬಾಲ್ಯಕ್ಕೆ ಜಾರಿ ಶಿಕ್ಷಕರು, ಪೋಷಕರು. ಈ ದೃಶ್ಯಗಳು ಕಂಡು ಬಂದಿದ್ದು
ಕೋಟೆನಾಡು ಚಿತ್ರದುರ್ಗ ನಗರದ ಜಯದೇವ ಕ್ರೀಡಾಂಗಣದಲ್ಲಿ.

ಬಣ್ಣ ಬಣ್ಣದ ಗಾಳಿಪಟಗಳನ್ನಿಡಿದು ಬರುತ್ತಿರುವ ಮಕ್ಕಳು. ಆಕಾಶದೆತ್ತರಕ್ಕೆ ಗಾಳಿಪಟ ಹಾರಿ ಸಂಭ್ರಮಿಸುತ್ತಿರುವ ವಿದ್ಯಾರ್ಥಿಗಳು. ಮಕ್ಕಳ ಜತೆ ಗಾಳಿಪಟ ಹಾರಿಸುತ್ತ ಬಾಲ್ಯಕ್ಕೆ ಜಾರಿ ಶಿಕ್ಷಕರು, ಪೋಷಕರು. ಈ ದೃಶ್ಯಗಳು ಕಂಡು ಬಂದಿದ್ದು ಕೋಟೆನಾಡು ಚಿತ್ರದುರ್ಗ ನಗರದ ಜಯದೇವ ಕ್ರೀಡಾಂಗಣದಲ್ಲಿ.

2 / 6
ಹೌದು, ಎಸ್​ಆರ್​​ಎಸ್ ಸಂಸ್ಥೆ ಕಿಟೆ ಡೇ ಹೆಸರಿನಲ್ಲಿ ಗಾಳಿಪಟ ಹಬ್ಬವನ್ನೇ ಆಚರಿಸಿತು. ನೂರಾರು ವಿದ್ಯಾರ್ಥಿಗಳು ಈ ಹಬ್ಬದಲ್ಲಿ ಭಾಗಿಯಾಗಿ ಸಂಭ್ರಮಿಸಿದ್ರು. ಗಾಳಿಪಟದಂತೆ ಮಕ್ಕಳು ಎತ್ತರಕ್ಕೆ ಏರಬೇಕೆಂಬ ಸಂದೇಶ ಈ ಆಚರಣೆಯಲ್ಲಿದೆ ಎಂದು ಶಿಕ್ಷಕರು ಹೇಳಿದರು.

3 / 6
ಇನ್ನು ಆಕಾಶದೆತ್ತರಕ್ಕೆ ಗಾಳಿಪಟಗಳನ್ನು ಹಾರಿಸುತ್ತ ಕುಣಿದು ಕುಪ್ಪಳಿಸಿದ್ರು. ಮಕ್ಕಳಿಗೆ ಶಿಕ್ಷಕರು ಮತ್ತು ಪೋಷಕರು ಸಾಥ್ ನೀಡಿದರು. ಆ ಮೂಲಕ ತಮ್ಮ ಬಾಲ್ಯವನ್ನು ನೆನೆದು ಮಕ್ಕಳ ಜತೆಗೆ ಮಕ್ಕಳಾದರು. ಮಕ್ಕಳು ಮತ್ತು ಪೋಷಕರು ಗಾಳಿಪಟ ಹಬ್ಬದಲ್ಲಿ ಮಿಂದೆದ್ದು ಖುಷಿಪಟ್ಟರು.

4 / 6
ಅಂತೆಯೇ ಮಕ್ಕಳಿಗೆ ಈರೀತಿಯ ಚಟುವಟಿಕೆಗಳ ಅಗತ್ಯತೆ ಇದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ರು. ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗ ನಗರದ ಜಯದೇವ ಕ್ರೀಡಾಂಗಣದಲ್ಲಿಂದು ಗಾಳಿಪಟಗಳೇ ಆಕಾಶದಲ್ಲಿ ಬಣ್ಣದ ಚಿತ್ತಾರ ಬಿಡಿಸಿದ್ದವು.

5 / 6
ಚಿಣ್ಣರು ಸೂತ್ರದಾರ ಹಿಡಿದು ಗಾಳಿಪಟದ ಏರಿಳಿತ ಕಂಡು ಏಂಜಾಯ್ ಮಾಡಿದ್ರು. ಮಕ್ಕಳ ಜತೆಗೆ ಶಿಕ್ಷಕರು ಮತ್ತು ಪೋಷಕರು ಸಹ ಮಕ್ಕಳಾಗಿ ಬಾಲ್ಯವ ನೆನೆದು ಪುಳಿಕತರಾದರು.

6 / 6
ಒಟ್ಟಿನಲ್ಲಿ ಕೋಟೆನಾಡು ಚಿತ್ರದುರ್ಗದಲ್ಲಿ ಗಾಳಿಪಟ ಹಬ್ಬವನ್ನೇ ಆಚರಿಸಲಾಗಿದ್ದು, ಶಿಕ್ಷಕರು ಮತ್ತು ಪೋಷಕರು ಮಕ್ಕಳಿಗೆ ಸಾಥ್ ನೀಡುವ ಮೂಲಕ ಬಾಲ್ಯ ನೆನೆದಿದ್ದಾರೆ.