ಹಿಂದಿನ ಕಾಲದಲ್ಲಿ ಸಂವಹನಕ್ಕೆ ಪಾರಿವಾಳಗಳೇ ಯಾಕೆ ಬಳಕೆ ಆಗುತ್ತಿದ್ದವು? ಕುತೂಹಲಕಾರಿ ಮಾಹಿತಿ ಇಲ್ಲಿದೆ

| Updated By: ganapathi bhat

Updated on: Nov 16, 2021 | 6:40 PM

ಮೊದಲು ಪಾರಿವಾಳಗಳ ಮೂಲಕವೇ ದೂರದೂರಿನ ಪತ್ರ ವ್ಯವಹಾರ, ಸಂವಹನ ನಡೆಯುತ್ತಿತ್ತು ಎಂದು ನಾವು ತಿಳಿದಿದ್ದೇವೆ. ಕಬೂತರ್ ಜಾ ಎಂಬ ಹಾಡೇ ಇದೆ. ಆದರೆ, ಯಾಕೆ ಪಾರಿವಾಳವೇ ಈ ಕೆಲಸ ಮಾಡುತ್ತಿತ್ತು. ಇತರ ಪಕ್ಷಿಗಳು ಯಾಕೆ ಈ ಕೆಲಸ ಮಾಡುತ್ತಿರಲಿಲ್ಲ ಎಂಬುದು ಪ್ರಶ್ನೆಯಾಗಿ ಕಾಡುತ್ತದೆ.

1 / 6
ಹಳೆಯ ಸಿನಿಮಾ ಅಥವಾ ಯಾವುದೇ ಕಾರ್ಯಕ್ರಮಗಳಲ್ಲಿ ಪಾರಿವಾಳಗಳ ಮೂಲಕ ಸಂದೇಶ ರವಾನೆ ಮಾಡುತ್ತಿದ್ದದ್ದನ್ನು ನೀವು ನೋಡಿರಬಹುದು. ಇಂದಿನ ಕಾಲದಲ್ಲಿ ವಾಟ್ಸಾಪ್ ಮುಂತಾದ ಸೌಕರ್ಯಗಳು ಸಂದೇಶ ಕಳಿಸಲು ಲಭ್ಯವಿದೆ. ಆದರೆ, ಮೊದಲು ಪಾರಿವಾಳಗಳ ಮೂಲಕವೇ ದೂರದೂರಿನ ಪತ್ರ ವ್ಯವಹಾರ, ಸಂವಹನ ನಡೆಯುತ್ತಿತ್ತು ಎಂದು ನಾವು ತಿಳಿದಿದ್ದೇವೆ. ಕಬೂತರ್ ಜಾ ಎಂಬ ಹಾಡೇ ಇದೆ. ಆದರೆ, ಯಾಕೆ ಪಾರಿವಾಳವೇ ಈ ಕೆಲಸ ಮಾಡುತ್ತಿತ್ತು. ಇತರ ಪಕ್ಷಿಗಳು ಯಾಕೆ ಈ ಕೆಲಸ ಮಾಡುತ್ತಿರಲಿಲ್ಲ ಎಂಬುದು ಪ್ರಶ್ನೆಯಾಗಿ ಕಾಡುತ್ತದೆ. ಈ ಪ್ರಶ್ನೆಯ ಹಿಂದೆ ಹಲವು ಕತೆಗಳು ಇವೆ. ಜೊತೆಗೆ ವೈಜ್ಞಾನಿಕ ಕಾರಣಗಳು ಕೂಡ ಇದೆ.

2 / 6
ಪಾರಿವಾಳಗಳು ತಮ್ಮ ನೆಲೆಯನ್ನು ಹುಡುಕಿ ಪ್ರಯಾಣ ಮಾಡುವಲ್ಲಿ ಹಾಗೂ ಇದ್ದ ಸ್ಥಳಕ್ಕೆ ಮರಳಿ ಬರುವ ವಿಚಾರದಲ್ಲಿ ಚಾಕಚಕ್ಯತೆ ಉಳ್ಳ ಪಕ್ಷಿಗಳು. ಎಲ್ಲಿಯೇ ಹೋಗಿರಲಿ ಆದರೆ ಮರಳಿ ಮತ್ತೆ ಅದೇ ಸ್ಥಳಕ್ಕೆ ಪಾರಿವಾಳಗಳು ಹಿಂದೆ ಬರುತ್ತವೆ. ಹೀಗಾಗಿ ಶತಮಾನಗಳ ಹಿಂದೆ ಪಾರಿವಾಳಗಳನ್ನೇ ಪತ್ರ ಸಂದೇಶ ಕಳಿಸಿಕೊಡಲು ಬಳಸಲಾಗುತ್ತಿತ್ತು.

3 / 6
ಪಾರಿವಾಳಗಳು ಸುರಕ್ಷಿತ ಸಂವಹನ ಮಾಧ್ಯಮಗಳು ಎಂದು 2,000 ವರ್ಷಗಳ ಹಿಂದೆಯೇ ನಿರ್ಧಾರ ಮಾಡಲಾಗಿತ್ತು. ಜೂಲಿಯಸ್ ಸೀಸರ್ ರೋಮ್​ಗೆ ತನ್ನ ಸಂದೇಶವನ್ನು ಪಾರಿವಾಳಗಳ ಮೂಲಕವೇ ಕಳುಹಿಸಿದ ಎಂದು ಹೇಳಲಾಗಿದೆ. ನೆಪೋಲಿಯನ್ ಕೂಡ ಹೀಗೇ ಮಾಡಿದ್ದ ಎನ್ನಲಾಗಿದೆ.

4 / 6
ನೇಷನಲ್ ಅಕಾಡೆಮಿ ಆಫ್ ಸೈಯನ್ಸಸ್​ನ ಸಂಶೋಧನಾ ಪತ್ರಿಕೆ ಒಂದರಲ್ಲಿ ಹೇಳಿರುವಂತೆ ಪಾರಿವಾಳಗಳ ಕಿವಿಯ ಸಮೀಪ ಒಂದು ಐರನ್ ರಿಚ್ (ಕಬ್ಬಿಣದ ಅಂಶ) ಹೆಚ್ಚಿರುವ ಅಂಗ ಇದೆ. ಇದರಿಂದ ಪಾರಿವಾಳಗಳಲ್ಲಿ ಅಯಸ್ಕಾಂತೀಯ ಗುಣ ಅಥವಾ ಶಕ್ತಿ ಇರುವ ಬಗ್ಗೆಯೂ ಹೇಳಲಾಗಿದೆ.

5 / 6
ಪಾರಿವಾಳಗಳು ಹೇಗೆ ಕೆಲಸ ಮಾಡುತ್ತವೆ ಎಂಬ ಬಗ್ಗೆ ಸಾಕಷ್ಟು ವಿಚಾರಗಳಿವೆ. ಅದರಲ್ಲಿ ಒಂದು ವಿಷನ್ ಬೇಸ್ಡ್ ಥಿಯರಿ. ಸಾಕು ಪಾರಿವಾಳಗಳಲ್ಲಿ ಹಾಗೂ ಇತರ ಹಕ್ಕಿಗಳ ಕಣ್ಣಿನ ರೆಟಿನಾದಲ್ಲಿ ಕೂಡ ಕ್ರಿಪ್ಟೊಕ್ರೋಮ್ ಎಂಬ ಅಂಶ ಇರುತ್ತದೆ. ಇದು ಹಕ್ಕಿಗಳಿಗೆ ಭೂಮಿಯ ಮ್ಯಾಗ್ನೆಟಿಕ್ ಫೀಲ್ಡ್ ನೋಡಲು ಸಹಾಯ ಮಾಡುತ್ತದೆ ಎನ್ನಲಾಗಿದೆ.

6 / 6
ಪಾರಿವಾಳವು ಮ್ಯಾಗ್ನೆಟಿಕ್ ಶಕ್ತಿಯ ಮೂಲಕವೇ ಮನೆಗೆ ಮತ್ತೆ ಹಿಂತಿರುಗುತ್ತದೆ. ಮ್ಯಾಗ್ನೆಟಿಕ್ ಪಾರ್ಟಿಕಲ್​​ನ ನಿರ್ದೇಶನದ ಮೂಲಕ ಬರುತ್ತದೆ. ಪ್ರಕೃತಿಯಲ್ಲಿ ಮ್ಯಾಗ್ನೆಟಿಕ್ ಪಾರ್ಟಿಕಲ್​ಗಳು ಮಾಗ್ನೆಟೊಟಾಕ್ಟಿಕ್ ಬ್ಯಾಕ್ಟಿರಿಯಾ ಎಂಬುದರಿಂದ ಕಂಡುಬರುತ್ತದೆ. ಇದು ಮ್ಯಾಗ್ನೆಟಿಕ್ ಪಾರ್ಟಿಕಲ್ ಜನರೇಟ್ ಮಾಡುತ್ತದೆ ಹಾಗೂ ಭೂಮಿಯ ಮ್ಯಾಗ್ನೆಟಿಕ್ ಫೀಲ್ಡ್​ ಲೈನ್​ನಲ್ಲಿ ಇರುತ್ತದೆ.