- Kannada News Photo gallery Kolar elephant care center at dodda ayur village with Wildlife Rescue and Rehabilitation Center NGO help
ಕೋಲಾರ ಸಮೀಪ ದೊಡ್ಡಅಯ್ಯೂರು ಗ್ರಾಮದಲ್ಲಿ ಆನೆಗಳ ಆರೈಕೆ ಹೇಗೆ ನಡೆಯುತ್ತಿದೆ? ಚಿತ್ರಗಳಲ್ಲಿ ವೀಕ್ಷಿಸಿ
Kolar Wildlife Rescue and Rehabilitation Center: ಅವೆಲ್ಲಾ ತಮ್ಮ ಜೀವನದಲ್ಲಿ ಬೇರೆಯವರಿಗಾಗಿ ಸತತವಾಗಿ ದುಡಿದು ನೊಂದು ಬೆಂದು ಗಾಯಗೊಂಡಿರುವ ಪ್ರಾಣಿಗಳು. ಅಂಥ ಪ್ರಾಣಿಗಳನ್ನು ಕರೆ ತಂದು ಸಂತೈಸುತ್ತಾ, ಆರೈಕೆ ಮಾಡುತ್ತಾ, ಹೊಸ ಚೈತನ್ಯ ತುಂಬುವ ಕೆಲಸ ಮಾಡಲಾಗುತ್ತಿದೆ. ರಾಜ್ಯದಲ್ಲೇ ಮೊದಲಿಗೆ ಇಂಥಾದೊಂದು ಆರೈಕೆ ಕೇಂದ್ರ ಇರೋದಾದರೂ ಎಲ್ಲಿ, ಅಲ್ಲಿ ಆರೈಕೆ ಪಡೆದುಕೊಳ್ಳುತ್ತಿರುವ ಪ್ರಾಣಿ ಯಾವುದು? ಇಲ್ಲಿದೆ ಒಂದು ವರದಿ.
Updated on: Jan 04, 2023 | 3:22 PM

ಇಲ್ಲಿ ಕೃತಕವಾಗಿ ಒಂದು ಕೆರೆ ನಿರ್ಮಾಣ, ಬಿದುರು ಬೆಳೆಸುವುದು, ಹುಲ್ಲು ಬೆಳೆಸುವುದು ಸೇರಿ ಹಲವು ಇನ್ನಷ್ಟು ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎನ್ನುತ್ತಾರೆ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲ.

ಷವರ್ ಬಾತ್ ಮಾಡುತ್ತಿರುವ ಆನೆಗಳು, ಆನೆಗಳಿಗೆ ಆರೈಕೆ ಮಾಡುತ್ತಿರುವ ಮಾವುತರು, ಮೈಮೇಲೆ ನೀರು ಹಾಕಿಕೊಂಡು, ಮಣ್ಣು ಹಾಕಿಕೊಂಡು ಎಂಜಾಯ್ ಮಾಡುತ್ತಿರುವ ಆನೆ, ಇದೆಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೋಲಾರ ತಾಲ್ಲೂಕು ದೊಡ್ಡಅಯ್ಯೂರು ಗ್ರಾಮದ ಬಳಿ ನಿರ್ಮಾಣ ಮಾಡಿರುವ ಆನೆ ಆರೈಕೆ ಕೇಂದ್ರದಲ್ಲಿ. (ವರದಿ: ರಾಜೇಂದ್ರ ಸಿಂಹ, ಟಿವಿ 9, ಕೋಲಾರ)

ಈ ಮೂಲಕ ಅರಣ್ಯದಲ್ಲಿ ಸ್ವಚ್ಚಂದವಾಗಿ ಬದುಕು ನಡೆಸಬೇಕಿದ್ದ ಆನೆಗಳು ಸದ್ಯ ಬಂಧಿಯಾಗಿ ಹಲವು ಕಷ್ಟ ನೋವುಗಳನ್ನು ಅನುಭವಿಸಿ ಇಂದು ರೋಗ ಪೀಡಿತವಾಗಿವೆ.

ಇಲ್ಲಿರುವ ಆನೆಗಳನ್ನು ನೋಡಿಕೊಳ್ಳುವ ಒಟ್ಟು 9 ಜನ ಸಿಬ್ಬಂದಿಗಳಿದ್ದು ಇಬ್ಬರು ವೈದ್ಯರು ಮತ್ತು ಐದು ಜನ ಮಾವುತರು, ಇಬ್ಬರು ಮೇಲ್ವಿಚಾರಕರು ಸೇರಿ ಭದ್ರತಾ ಸಿಬ್ಬಂದಿಗಳು ಇದ್ದಾರೆ.

ಮುಖ್ಯವಾಗಿ ಅನಿಶಾ ಮತ್ತು ದುರ್ಗಾ ಆನೆಗಳು ಆರ್ಥ್ರೈಟಿಸ್ ಹಾಗೂ ಡಯಾಬಿಟೀಸ್ ಕಾಯಿಲೆಯಿಂದ ಬಳಲುತ್ತಿವೆ. ಹಾಗಾಗಿ ವಾರಕ್ಕೆ ಎರಡು ಮೂರು ಬಾರಿ ವೈದ್ಯರು ಸಹ ಬಂದು ಪರೀಕ್ಷೆ ನಡೆಸಿ ಅವರ ಸಲಹೆ ಮೇರೆಗೆ ಔಷದಿ ಹಾಗೂ ಚಿಕಿತ್ಸೆ ನೀಡಲಾಗುತ್ತಿದೆ.

ದಿನಕ್ಕೆರಡು ಬಾರಿ ಆನೆಗಳಿಗೆ ಸ್ನಾನ, ಶವರ್ ಬಾತ್, ಬೆಳಗ್ಗೆ-ಸಂಜೆ ವಾಕಿಂಗ್ ಮಾಡಿಸಲಾಗುತ್ತದೆ.

ಆನೆಗಳಿಗೆ ಹುಲ್ಲು, ಭತ್ತ, ಕೊಬ್ಬರಿ, ಮುದ್ದೆ ಸೇರಿ ಪೌಷ್ಠಿಕಾಂಶಯುಕ್ತ ಆಹಾರವನ್ನು ನೀಡಲಾಗುತ್ತದೆ.

ಹಲವು ಕಂಪನಿಗಳ ಸಿಎಸ್ಆರ್ ನಿಧಿ, ದಾನಿಗಳು ಹೀಗೆ ಹಲವರ ನೆರವಿನಿಂದ ಎನ್ಜಿಓ ಆನೆಗಳ ಹಾರೈಕೆಯನ್ನು ಮಾಡುತ್ತಿದೆ. ಆನೆಗಳಿಗೆ ನಿತ್ಯ ಪೌಷ್ಠಿಕವಾದ ಆಹಾರ ನೀಡುವುದು, ನಿಯಮಿತ ವ್ಯಾಯಾಮವಾಗಿ ಬೆಳಿಗ್ಗೆ ಹಾಗೂ ಸಂಜೆ ವಾಕಿಂಗ್ ಮಾಡಿಸಲಾಗುತ್ತಿದೆ.

ಆನೆ ಆರೈಕೆ ಕೇಂದ್ರಕ್ಕೆ ಬೇಕಾಗಿರುವ ಮೂಲಭೂತ ಸೌಲಭ್ಯಗಳನ್ನು ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಮಾಡಿ ಕೊಟ್ಟಿದ್ದು, ಆನೆ ಆರೈಕೆ ಕೇಂದ್ರದ ನಿರ್ವಹಣೆಯನ್ನು WRRC ಎನ್ಜಿಓ ಮಾಡಲಾಗುತ್ತಿದೆ.

ಇಲ್ಲಿ ಕೃತಕವಾಗಿ ಒಂದು ಕೆರೆ ನಿರ್ಮಾಣ, ಬಿದುರು ಬೆಳೆಸುವುದು, ಹುಲ್ಲು ಬೆಳೆಸುವುದು ಸೇರಿ ಹಲವು ಇನ್ನಷ್ಟು ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎನ್ನುತ್ತಾರೆ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲ.

ಇಂಥ ಸಮಯದಲ್ಲಿ ಈ ಆನೆಗಳನ್ನು ಸಂತೋಷದಿಂದ ನೋಡಿಕೊಳ್ಳಲು ಏನೆಲ್ಲಾ ಬೇಕೋ ಆ ಎಲ್ಲಾ ವ್ಯವಸ್ಥೆಯನ್ನು ಮಾಡುವ ಮೂಲಕ ಆನೆಗಳಿಗೆ ಮರು ಜೀವನ ಕೊಡಲಾಗುತ್ತಿದೆ ಎನ್ನುತ್ತಾರೆ ಶೀಲಾರಾವ್ , WRRC.

ಹೌದು ಅರಣ್ಯ ಇಲಾಖೆ ವಿಶೇಷವಾಗಿ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಆನೆಗಳ ಆರೈಕೆ ಕೇಂದ್ರವನ್ನು ಸ್ಥಾಪನೆ ಮಾಡಿದೆ. ದೊಡ್ಡಅಯ್ಯೂರು ಗ್ರಾಮದ ಬಳಿ ಸುಮಾರು 20 ಎರಕೆ ಪ್ರದೇಶದಲ್ಲಿ WRRC (ವೈಲ್ಡ್ ಲೈಫ್ ರೆಸ್ಕ್ಯೂ ಅಂಡ್ ರಿಹ್ಯಾಬ್ಲಟೇಷನ್ ಸೆಂಟರ್ -Wildlife Rescue and rehabilitation Center) ಖಾಸಗಿ ಎನ್ಜಿಓ ಸಹಯೋಗದೊಂದಿಗೆ ಆನೆ ಆರೈಕೆ ಕೇಂದ್ರ ಸ್ಥಾಪನೆ ಮಾಡಿದೆ.

ಸದ್ಯ ಆನೆಗಳ ಆರೈಕೆ ಕೇಂದ್ರದಲ್ಲಿ ಗೌರಿ, ದುರ್ಗಾ, ಜಾನುಮಣಿ ಹಾಗೂ ಅನಿಶಾ ಎಂಬ ನಾಲ್ಕು ಆನೆಗಳಿಗೆ. ಅನಿಶಾ ತಮಿಳುನಾಡಿನಿಂದ ಬಂದಿದ್ರೆ, ದುರ್ಗಾ ಬೆಂಗಳೂರಿನಿಂದ ಕರೆತರಲಾಗಿದೆ. ಗೋವಾದಿಂದ ಜಾನುಮಣಿ ಕರೆತಂದಿದ್ರೆ, ನಂಜನಗೂಡಿನಿಂದ ಗೌರಿಯನ್ನು ಕರೆತರಲಾಗಿದೆ.

ಪ್ರಮುಖವಾಗಿ ದೇವಾಲಯಗಳು, ರೆಸಾರ್ಟ್ ಸೇರಿದಂತೆ ಹಲವೆಡೆ ಇದ್ದು ವಯಸ್ಸಾಗಿ ಅಥವಾ ಹಲವು ಕಾಯಿಲೆಗಳಿಗೆ ತುತ್ತಾಗಿದ್ದ ಆನೆಗಳನ್ನು ಕರೆ ತಂದು ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸದ್ಯ ಆನೆ ಆರೈಕೆ ಕೇಂದ್ರದಲ್ಲಿ ನಾಲ್ಕು ಆನೆಗಳಿದ್ದು ಸದ್ಯದಲ್ಲೇ ಮತ್ತಷ್ಟು ಆನೆಗಳು ಬರುವ ಸಾಧ್ಯತೆ ಇದೆ. ಹಾಗಾಗಿ ಇಲ್ಲಿ ಹತ್ತು ಆನೆಗಳಿಗೆ ಬೇಕಾಗುಷ್ಟು ಮನೆ ಹಾಗೂ ಸೌಲಭ್ಯಗಳನ್ನು ಅರಣ್ಯ ಇಲಾಖೆ ನಿರ್ಮಾಣ ಮಾಡುತ್ತಿದೆ.

ರಾಜ್ಯದಲ್ಲೇ ಮೊದಲಿಗೆ ಇಂಥಾದೊಂದು ಆರೈಕೆ ಕೇಂದ್ರ ಇರೋದಾದರೂ ಎಲ್ಲಿ, ಅಲ್ಲಿ ಆರೈಕೆ ಪಡೆದುಕೊಳ್ಳುತ್ತಿರುವ ಪ್ರಾಣಿ ಯಾವುದು? ಇಲ್ಲಿದೆ ಒಂದು ವರದಿ.

ಅವೆಲ್ಲಾ ತಮ್ಮ ಜೀವನದಲ್ಲಿ ಬೇರೆಯವರಿಗಾಗಿ ಸತತವಾಗಿ ದುಡಿದು ನೊಂದು ಬೆಂದು ಗಾಯಗೊಂಡಿರುವ ಪ್ರಾಣಿಗಳು. ಅಂಥ ಪ್ರಾಣಿಗಳನ್ನು ಕರೆ ತಂದು ಸಂತೈಸುತ್ತಾ, ಆರೈಕೆ ಮಾಡುತ್ತಾ, ಹೊಸ ಚೈತನ್ಯ ತುಂಬುವ ಕೆಲಸ ಮಾಡಲಾಗುತ್ತಿದೆ.

ಸದ್ಯ ಆನೆಗಳ ಆರೈಕೆ ಕೇಂದ್ರದಲ್ಲಿ ಗೌರಿ, ದುರ್ಗಾ, ಜಾನುಮಣಿ ಹಾಗೂ ಅನಿಶಾ ಎಂಬ ನಾಲ್ಕು ಆನೆಗಳಿಗೆ. ಅನಿಶಾ ತಮಿಳುನಾಡಿನಿಂದ ಬಂದಿದ್ರೆ, ದುರ್ಗಾ ಬೆಂಗಳೂರಿನಿಂದ ಕರೆತರಲಾಗಿದೆ. ಗೋವಾದಿಂದ ಜಾನುಮಣಿ ಕರೆತಂದಿದ್ರೆ, ನಂಜನಗೂಡಿನಿಂದ ಗೌರಿಯನ್ನು ಕರೆತರಲಾಗಿದೆ.




