ತಾವು ಕಲಿತ ಸರ್ಕಾರಿ ಕಾಲೇಜಿಗೆ ಕಾಯಕಲ್ಪ ನೀಡಿದ ಕೋಲಾರ ಎಸ್​ಪಿ ಡಿ.ದೇವರಾಜ್

ಕೋಲಾರದ ಸ್ವತಂತ್ರ್ಯ ಪೂರ್ವದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿ ಡಿ.ದೇವರಾಜ್, ಅದೇ ಜಿಲ್ಲೆಯ ಎಸ್​ಪಿಯಾಗಿ ಬಂದಿದ್ದಲ್ಲದೆ ತಾನು ಓದಿ ಆ ಕಾಲೇಜನ್ನು ಶುಚಿಗೊಳಿಸಿದ್ದಾರೆ.

TV9 Web
| Updated By: Rakesh Nayak Manchi

Updated on: Nov 20, 2022 | 3:43 PM

ಕೋಲಾರ ನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಬಾಲಕರ ಪ್ರಥಮ ದರ್ಜೆ ಕಾಲೇಜು 1931ರಲ್ಲಿ ಆರಂಭವಾಗಿದೆ.  ಸ್ವತಂತ್ರ್ಯ ಪೂರ್ವದಲ್ಲಿ ಹಾಗೂ ಸ್ವತಂತ್ರ್ಯಾ ನಂತರವೂ ಈ ಕಾಲೇಜಿನಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿ ಇಂದು ದೇಶ ಹಾಗೂ ವಿದೇಶಗಳಲ್ಲೂ ಉನ್ನತ ಸ್ಥಾನದಲ್ಲಿದ್ದಾರೆ. ಇಷ್ಟೆಲ್ಲಾ ಜನರಿಗೆ ದಾರಿದೀಪವಾದ ಈ ಕಾಲೇಜಿನ ಸ್ಥಿತಿ ಮಾತ್ರ ಇಂದಿಗೆ ಶೋಚನೀಯವಾಗಿದೆ.

Kolar SP who is also an alumnus of the same college where the college was cleaned kolar news in kannada

1 / 6
ಹಳೆಯ ಕಟ್ಟಡ ಹಾಗೂ ಕಾಲೇಜಿನ ಕಾಂಪೌಂಡ್​ ಬೀಳುವ ಹಂತದಲ್ಲಿತ್ತು, ಇಂಥ ಪರಿಸ್ಥಿತಿಯಲ್ಲಿದ್ದ ಕಾಲೇಜಿನ ಕಾಂಪೌಂಡ್​ಗೆ ಕಾಯಕಲ್ಪ ಕೊಡುವ ಜೊತೆಗೆ ಕಾಲೇಜಿನಲ್ಲಿ ಶ್ರಮದಾನದ ಮೂಲಕ ಕಾಲೇಜನ್ನು ಶುಚಿಗೊಳಿಸುವ ಕೆಲಸವನ್ನು ಇದೇ ಕಾಲೇಜಿನಲ್ಲಿ ಓದಿ, ಕೋಲಾರದ ಎಸ್​ಪಿಯಾಗಿ ಬಂದಿರುವ ಡಿ.ದೇವರಾಜ್​ ಮಾಡಿದ್ದಾರೆ.

Kolar SP who is also an alumnus of the same college where the college was cleaned kolar news in kannada

2 / 6
Kolar SP who is also an alumnus of the same college where the college was cleaned kolar news in kannada

ನೂರಾರು ಎನ್​ಎಸ್​ಎಸ್​​, ಎಸ್​ಸಿಸಿ ಹಾಗೂ ಸೇವಾದಳದ ವಿದ್ಯಾರ್ಥಿಗಳು ಸೇರಿ ಹಲವು ಸಂಘಟನೆಗಳ ಮುಖಂಡರ ಜೊತೆಗೆ ಬಂದ ದೇವರಾಜ್​ ಕಾಲೇಜನ್ನು ಕೆಲವೇ ಗಂಟೆಗಳಲ್ಲಿ ಶುಚಿಗೊಳಿಸಿದ್ದಾರೆ. ಅಷ್ಟೇ ಅಲ್ಲದೆ ಕೆಲವೊಂದು ಕಂಪನಿಗಳಿಗೆ ಮನವಿ ಮಾಡಿ ಸಿಎಸ್​ಆರ್​ ಅನುದಾನದಲ್ಲಿ ಕಾಲೇಜಿನ ಕಾಂಪೌಂಡ್​ ಕಟ್ಟಡವನ್ನು ಹೊಸದಾಗಿ ನಿರ್ಮಿಸುವ ಕೆಲಸ ಮಾಡಿದ್ದಾರೆ.

3 / 6
Kolar SP who is also an alumnus of the same college where the college was cleaned kolar news in kannada

ಕೋಲಾರ ಜಿಲ್ಲೆಗೆ ಕಳೆದ ಒಂದು ವರ್ಷದ ಹಿಂದೆ ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿ ಅಧಿಕಾರ ವಹಿಸಿಕೊಂಡ ನಂತರ ದೇವರಾಜ್​ ಕೇವಲ ಪೊಲೀಸ್​ ಇಲಾಖೆಯಲ್ಲಿ ಶಿಸ್ತು ಮತ್ತು ಉತ್ತಮ ಆಡಳಿತ ಕೊಡುವ ಜೊತೆಗೆ ತಮ್ಮೂರು ತಾವು ಹುಟ್ಟಿ ಬೆಳೆದ ಜಿಲ್ಲೆಯಲ್ಲಿ ಹಲವು ಸಮಾಜಪರ ಕಾರ್ಯಗಳನ್ನು ಮಾಡುವ ಮೂಲಕ ಗುರುತಿಸಿಕೊಂಡಿದ್ದು, ತಾವು ಓದಿದ ಕಾಲೇಜಿಗೆ ತಮ್ಮದೇ ಆದ ಏನಾದರು ಕೊಡುಗೆ ನೀಡಬೇಕು ಅನ್ನೋ ಕಾರಣಕ್ಕೆ ವಿಶೇಷ ಕಾಳಜಿ ವಹಿಸಿ ಕಾಲೇಜಿಗೆ ಕಾಯಕಲ್ಪ ಕೊಡುವ ಕೆಲಸ ಮಾಡುತ್ತಿದ್ದಾರೆ.

4 / 6
Kolar SP who is also an alumnus of the same college where the college was cleaned kolar news in kannada

ಸದ್ಯ ಬಡವರು ಹಾಗೂ ಕೂಲಿ ಕಾರ್ಮಿಕರ ಮಕ್ಕಳು ಓದುವ ಈ ಕಾಲೇಜಿನ ಅಭಿವೃದ್ಧಿ ಕೆಲಸಗಳನ್ನು ಮಾಡುವ ಜೊತೆಗೆ ತಾವೇ ಸ್ವತ: ಶ್ರಮದಾನದ ಮೂಲಕ ಶುಚಿಗೊಳಿಸುವ​ ಕೆಲಸಕ್ಕೆ ಇಳಿದ ಎಸ್​ಪಿ ದೇವರಾಜ್​ ಅವರ ಕಾರ್ಯಕ್ಕೆ ಸ್ಥಳೀಯರು ಹಾಗೂ ಕಾಲೇಜು ಉಪನ್ಯಾಸಕರು ಕೂಡಾ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

5 / 6
Kolar SP who is also an alumnus of the same college where the college was cleaned kolar news in kannada

ಒಟ್ಟಾರೆ ತಾವು ಓದಿದ ಕಾಲೇಜು, ತಾವು ಈ ಸ್ಥಾನಕ್ಕೆ ಬರಲು ನೆರವಾದ ಕಾಲೇಜಿನ ದುಸ್ಥಿತಿ ಕಂಡು ಅದಕ್ಕೆ ಕಾಯಕಲ್ಪ ಕೊಡಲು ಮುಂದಾದ ಎಸ್​ಪಿ ದೇವರಾಜ್​ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ. ಅಷ್ಟೇ ಅಲ್ಲದೆ ಇದು ಇತರ ಅಧಿಕಾರಿಗಳಿಗೂ ಮಾದರಿಯಾಗಿದೆ. ಎಲ್ಲರೂ ದೇವರಾಜ್​ ಅವರಂತೆ ತಾವು ಓದಿದ ಶಾಲೆ ಹಾಗೂ ಕಾಲೇಜುಗಳೀಗೆ ತಮ್ಮದೇ ಆದ ನೆರವನ್ನು ನೀಡಿದರೆ ಸರ್ಕಾರಿ ಶಾಲಾ ಕಾಲೇಜುಗಳು ಅಭಿವೃದ್ಧಿ ಹೊಂದುವುದರಲ್ಲಿ ಅನುಮಾನವಿಲ್ಲ. (ವರದಿ: ರಾಜೇಂದ್ರಸಿಂಹ, ಟಿವಿ9 ಕೋಲಾರ)

6 / 6
Follow us