- Kannada News Photo gallery Karwar dahinkala festival was held in a grand manner Uttara kannada news in kannada
ಅದ್ದೂರಿಯಾಗಿ ನಡೆದ ದಹಿಂಕಾಲ ಉತ್ಸವ, ಸಹಸ್ರಾರು ಭಕ್ತರ ಮಧ್ಯ ಪಲಕ್ಕಿ ಮೇಲೆ ಬಂದ ಶ್ರೀ ವೆಂಕಟರಮಣ
ಅಂಕೋಲದಲ್ಲಿ ನಡೆದ ದಹಿಂಕಾಲ ಉತ್ಸವ ಕರಾವಳಿ ಸಂಸ್ಕೃತಿಗೆ ಕೈಗನ್ನಡಿಯಂತಿತ್ತು. ಹೆಜ್ಜೆ ಹೆಜ್ಜೆಗೂ ನಾಡ ಸಂಸ್ಕೃತಿ ವೈಭವ ಮನೆ ಮಾಡಿತ್ತು. ಸಹಸ್ರಾರು ಸಂಖ್ಯೆ ಭಕ್ತರ ಮಧ್ಯ ದೈವದ ಪಲಕ್ಕಿ ಮೆವಣಿಗೆ ನಡೆಯಿತು.
Updated on:Nov 20, 2022 | 3:00 PM

Karwar dahinkala festival was held in a grand manner Uttara kannada news in kannada

Karwar dahinkala festival was held in a grand manner Uttara kannada news in kannada

ದಹಿಂಕಾಲ ಉತ್ಸವ ಅಂದರೆ ಇದು ಅನಾದಿಕಾಲದಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ. ಅಂಕೋಲ ನಗರದಲ್ಲಿ ಬಂಡಿ ಬಜಾರ ಕಟ್ಟೆಯ ಮೇಲೆ ಶ್ರೀ ವೆಂಕಟರಮಣ ದೇವರನ್ನು ಪ್ರತಿಷ್ಟಾಪಿಸಿ ದೇವರ ಮುಂದೆ ಒಂದು ಸಮಾಜದವರು ನರ್ತನ ಮಾಡುವ ಸಂಪ್ರದಾಯವಿತ್ತು. ಈ ಸಂಪ್ರದಾಯವನ್ನು ತೊಡೆದು ಹಾಕಲು 7 ದಶಕಗಳ ಹಿಂದೆ ಸಂಕಲ್ಪತೊಟ್ಟ ನಾಮಧಾರಿ ಸಮಾಜದವರು ನರ್ತನ ಸಂಪ್ರದಾಯವನ್ನು ನಿಷೇಧಿಸಿ ಪೌರಾಣಿಕ ಯಕ್ಷಗಾನವನ್ನು ಪ್ರದರ್ಶಿಸುವದರ ಮೂಲಕ ಸಾಮಾಜಿಕ ಕೊಡುಗೆಯಾಗಿ ನೀಡಿದರು.

ಈ ಒಂದು ಸುಸಂದರ್ಭಕ್ಕೆ ಹಾಲು ಮೊಸರಾಗುವ ಕಾಲ ( ದಹಿ ಎಂದರೆ ಮೊಸರು) ಎಂದು ಕಲ್ಪಿಸಿ ದಹಿಂಕಾಲ ಉತ್ಸವದ ರೂಢಿ ಆಚರಣೆಗೆ ಬಂತು. ಹಾಗೆ ಹೆಪ್ಪಿಟ್ಟ ಹಾಲು ಮೊಸರಾದಂತೆ ಸಮಾಜದಲ್ಲೀನ ಬದಲಾವಣೆಯು ಮರಳಿ ಹಿಂದಕ್ಕೆ ಹೋಗದಂತೆ ಪ್ರಗತಿಶೀಲರಾಗಬೇಕು ಎಂಬುದು ದಹಿಂಕಾಲದ ಬೀಜ್ ಮಂತ್ರವಾಗಿದೆ. ಅದೇ ಸಂಪ್ರದಾಯ ಇಲ್ಲಿವರಗೆ ನಡೆದು ಕೊಂಡು ಬಂದಿದೆ.

ಈ ಉತ್ಸವಕ್ಕೆ ಬೇರೆ ಬೇರೆ ಜಿಲ್ಲೆಗಳಿಂದ ಸಹಸ್ರಾರು ಭಕ್ತರು ಆಗಮಿಸಿ ಅದ್ದೂರಿಯಾಗಿ ಉತ್ಸವವನ್ನ ಆಚರಿಸುತ್ತಾರೆ. ಸಾಮಾನ್ಯವಾಗಿ ದಹಿಂಕಾಲ ಉತ್ಸವ ನಡೆಯದೇ ತಾಲೂಕಿನ ಯಕ್ಷಪಟುಗಳು ಕಾಲಿಗೆ ಗೆಜ್ಜೆ ಕಟ್ಟುವುದಿಲ್ಲ. ಸಾಮಾಜಿಕ ಅನಿಷ್ಟ ಪದ್ಧತಿ ತೊಡೆದು ಹಾಕಲು ಕಾಲಿಗೆ ಗೆಜ್ಜೆ ಕಟ್ಟಿದ ಯಕ್ಷಪಟುಗಳು ತಮ್ಮ ಹರಕೆಯಂತೆ ಮೊದಲು ದಹಿಂಕಾಲ ಉತ್ಸವದಲ್ಲಿ ದೇವರ ಮುಂದೆ ತಮ್ಮ ಕುಣಿತದ ಹೆಜ್ಜೆ ಹಾಕಿ ತಮ್ಮ ಕಲೆಯನ್ನು ಮೊದಲು ದೇವರಿಗೆ ಸಮರ್ಪಿಸಿ ನಂತರ ಇತರಡೆ ಯಕ್ಷರಂಗಕ್ಕೆ ಕಾಲಿಡುತ್ತಾರೆ.

ಒಟ್ಟಿನಲ್ಲಿ ದಶಕಗಳ ಕಾಲದಿಂದ ಅದ್ದೂರಿಯಾಗಿ ನಡೆಯುತ್ತಿರುವ ನಾಮಧಾರಿ ಸಮಾಜದ ದಹಿಂಕಾಲ ಉತ್ಸವ ಈ ವರ್ಷ ಬಹಳ ಅರ್ಥಪೂರ್ಣವಾಗಿ ಜರುಗಿತು. ಇನ್ನೂ ದೇವರ ಮೆರವಣಿಗೆ ಉದ್ದಕ್ಕೂ ಕಾಂತಾರ ಸಿನಿಮಾದ ಸ್ತಬ್ಧ ಚಿತ್ರ ನೋಡುಗರ ಹುಬ್ಬೆರುವಂತೆ ಮಾಡಿದ್ದಮಂತು ಸತ್ಯ. (ವರದಿ: ವಿನಾಯಕ ಬಡಿಗೇರ, ಟಿವಿ9 ಕಾರವಾರ)
Published On - 2:59 pm, Sun, 20 November 22




