
ಬೆಂಗಳೂರು ಇಸ್ಕಾನ್ ದೇಗುಲ : ಬೆಂಗಳೂರಿನಲ್ಲಿರುವ ಈ ಇಸ್ಕಾನ್ ದೇಗುಲ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ ಈ ದೇಗುಲದಲ್ಲಿ ರಾಧೆಯ ಜೊತೆ ಇಲ್ಲಿ ಕೃಷ್ಣನನ್ನು ಕಾಣಬಹುದಾಗಿದೆ. ರಾಜ್ಯ ಹಾಗೂ ಹೊರರಾಜ್ಯಗಳಿಂದಲೂ ಇಲ್ಲಿಗೆ ಜನರು ಬರುತ್ತಾರೆ. ನೀವೇನಾದರೂ ಕೃಷ್ಣಜನ್ಮಾಷ್ಟಮಿಗೆ ಈ ಕೃಷ್ಣ ದೇಗುಲವನ್ನು ಹೋಗಲು ಬಯಸಿದರೆ ಇಲ್ಲಿಗೆ ಭೇಟಿ ನೀಡಬಹುದು.

ಉಡುಪಿಯ ಕೃಷ್ಣಮಠ : ದಕ್ಷಿಣ ಭಾರತದ ಪ್ರಮುಖ ಶ್ರೀಕೃಷ್ಣನ ದೇವಾಲಯಗಳಲ್ಲಿ ಒಂದು ಈ ಉಡುಪಿಯ ಕೃಷ್ಣ ಮಠ. ಈ ದೇವಾಲಯವನ್ನು 13 ನೇ ಶತಮಾನದಲ್ಲಿ ವೈಷ್ಣವ ಸಂತ ಶ್ರೀ ಮಧ್ವಾಚಾರ್ಯರು ಸ್ಥಾಪಿಸಿದರು. ಕೃಷ್ಣನಗರಿ ಉಡುಪಿಯಲ್ಲಿ ಅಷ್ಟಮಿಯನ್ನು ಬಹಳ ಅದ್ದೂರಿಯಾಗಿ ಆಚರಿಸಲಾಗುತ್ತದೆ. ವಿಟ್ಲಪಿಂಡಿಯಂದು ಇಲ್ಲಿಗೆ ರಾಜ್ಯ ಹೊರರಾಜ್ಯದಿಂದಲೂ ಇಲ್ಲಿಗೆ ಜನರು ಆಗಮಿಸುತ್ತಾರೆ.

ಹಿಮವತ್ ಗೋಪಾಲ ಸ್ವಾಮಿ: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿರುವ ಹಿಮವತ್ ಗೋಪಾಲ ಸ್ವಾಮಿಯ ದೇಗುಲವು 14ನೇ ಶತಮಾನದಲ್ಲಿ ನಿರ್ಮಾಣವಾಗಿದೆ. ಅಗಸ್ತ್ಯ ಋಷಿ ಮುನಿಗಳು ನಿರ್ಮಿಸಲಾದ ಈ ದೇವಾಲಯದಲ್ಲಿ ಕೃಷ್ಣ ನೃತ್ಯ ಭಂಗಿಯಲ್ಲಿರುವುದು ವಿಶೇಷ. ಈ ಬಾರಿಯ ಕೃಷ್ಣ ಜನ್ಮಾಷ್ಟಮಿಯಂದು ನೀವು ಈ ಗೋಪಾಲ್ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಬಹುದು.

ವೇಣುಗೋಪಾಲಸ್ವಾಮಿ ದೇವಸ್ಥಾನ : ಮೈಸೂರಿನಲ್ಲಿರುವ ಈ ವೇಣುಗೋಪಾಲಸ್ವಾಮಿ ದೇವಸ್ಥಾನವು 12ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಮೈಸೂರನ ಕೆಆಎಸ್ ಜಲಾಶಯದ ಬಳಿಯಿರುವ ಈ ದೇವಾಲಯ ಸುತ್ತ ಮುತ್ತಲಿನಲ್ಲಿ ಬೃಂದಾವನ ಗಾರ್ಡನ್ ಇದೆ. ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಜನ್ಮಾಷ್ಟಮಿಯ ಪೂಜೆ ವಿಶೇಷವಾಗಿ ನಡೆಯುತ್ತದೆ. ಕೃಷ್ಣ ಜನ್ಮಾಷ್ಟಮಿಯಂದು ಈ ದೇವಸ್ಥಾನಕ್ಕೆ ಭೇಟಿ ನೀಡಬಹುದಾಗಿದೆ.

ಗೋಪಾಲ ಕೃಷ್ಣ ದೇಗುಲ : ಮಂಗಳೂರಿನಲ್ಲಿರುವ ಈ ಗೋಪಾಲ ಕೃಷ್ಣ ದೇವಾಲಯವು ಪ್ರಸಿದ್ಧವಾಗಿದೆ. ಕೃಷ್ಣ ಜನ್ಮಾಷ್ಟಮಿಗೆ ಇಲ್ಲಿ ವಿಶೇಷವಾದ ಪೂಜೆ ಹಾಗೂ ಅದ್ದೂರಿ ಆಚರಣೆಯು ನಡೆಯುತ್ತದೆ. ಅಷ್ಟಮಿಯಂದು ಇಲ್ಲಿಗೆ ಸುತ್ತ ಮುತ್ತಲಿನ ಊರಿನವರು ಹಾಗೂ ಹೊರರಾಜ್ಯದಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ.