ಕರ್ನಾಟಕದ ಕರಾವಳಿ ಮೂಲದ ಬೆಡಗಿ ಕೃತಿ ಶೆಟ್ಟಿ ಮುಂಬೈನಲ್ಲಿ ಜನಿಸಿ, ಟಾಲಿವುಡ್ನಲ್ಲಿ ಗುರುತಿಸಿಕೊಂಡಿದ್ದಾರೆ. ಹಿಂದಿ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಬೆಡಗಿಗೆ ದೊಡ್ಡ ಗೆಲುವು ನೀಡಿದ್ದು ತೆಲುಗಿನ ‘ಉಪ್ಪೆನ’
‘ಉಪ್ಪೆನ’ ಚಿತ್ರದ ಗೆಲುವು ನಟಿಗೆ ಅವಕಾಶಗಳ ಹೆಬ್ಬಾಗಿಲನ್ನೇ ತೆರೆಯಿತು. ನಂತರ ಸಾಲುಸಾಲು ಸ್ಟಾರ್ ನಟರೊಂದಿಗೆ ಕಾಣಿಸಿಕೊಂಡರು ಕೃತಿ.
ನಾನಿ ಹಾಗೂ ಸಾಯಿ ಪಲ್ಲವಿ ನಟನೆಯ ‘ಶ್ಯಾಮ್ ಸಿಂಗಾ ರಾಯ್’, ನಾಗಾರ್ಜುನ ಹಾಗೂ ನಾಗ ಚೈತನ್ಯ ನಟನೆಯ ‘ಬಂಗಾರ್ರಾಜು’ ಮೊದಲಾದ ಚಿತ್ರಗಳು ಕೃತಿಯನ್ನು ಬಹುಬೇಡಿಕೆಯ ನಟಿಯನ್ನಾಗಿಸಿತು.
ಪ್ರಸ್ತುತ ತಮಿಳು ಹಾಗೂ ತೆಲುಗಿನಲ್ಲಿ ಹಲವು ಚಿತ್ರಗಳಲ್ಲಿ ನಟಿ ಕಾಣಿಸಿಕೊಳ್ಳುತ್ತಿದ್ದಾರೆ. ಪರಿಣಾಮವಾಗಿ ನಟಿಯ ಅಭಿಮಾನಿ ಬಳಗ ದಿನದಿಂದ ದಿನಕ್ಕೆ ಏರುತ್ತಲೇ ಇದೆ.
ಇದೀಗ ಇನ್ಸ್ಟಾಗ್ರಾಂನಲ್ಲಿ ಕಡಿಮೆ ಅವಧಿಯಲ್ಲಿ ಅತ್ಯಧಿಕ ಫಾಲೋವರ್ಗಳನ್ನು ಪಡೆದಿದ್ದಾರೆ ಕೃತಿ ಶೆಟ್ಟಿ.
ಪ್ರಸ್ತುತ ಕೃತಿ ಶೆಟ್ಟಿ ಫಾಲೋವರ್ಗಳ ಸಂಖ್ಯೆ 30 ಲಕ್ಷ ದಾಟಿದೆ. ಈ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.
3 ಮಿಲಿಯನ್ ಫಾಲೋವರ್ಗಳು ಸಿಕ್ಕ ಬಗ್ಗೆ ಕೃತಿಯೇ ಪೋಸ್ಟ್ ಹಂಚಿಕೊಂಡಿದ್ದು ಸಂತಸ ವ್ಯಕ್ತಪಡಿಸಿದ್ದಾರೆ.
ಹೊಸ ಪೋಸ್ಟ್ ಮೂಲಕ ‘ಐ ಲವ್ ಯು ಆಲ್’ ಎಂದು ಎಲ್ಲಾ ಅಭಿಮಾನಿಗಳಿಗೆ ಪ್ರೀತಿ ತೋರಿದ್ದಾರೆ ಕೃತಿ.
Published On - 9:40 am, Tue, 12 April 22