
ರಾಜಧಾನಿ ಬೆಂಗಳೂರಿನಲ್ಲಿ ಕುಂದಾಪುರ ಪ್ರತಿಷ್ಠಾನದ ವತಿಯಿಂದ ಕುಂದಾಪುರ ಕನ್ನಡ ಹಬ್ಬ ಆಚಾರಣೆ ಮಾಡಲಾಗುತ್ತಿದೆ. ಈ ಕುಂದಾಪುರ ಹಬ್ಬವನ್ನ ನಟ ರಿಷಬ್ ಶೆಟ್ಟಿ ಉದ್ಘಾಟನೆ ಮಾಡಿದ್ದಾರೆ. ಇನ್ನು ಈ ಕಾರ್ಯಕ್ರಮ ನಗರದ ಪ್ಯಾಲೇಸ್ ಗ್ರೌಂಡ್ನಲ್ಲಿ ನಡೆಯುತ್ತಿದ್ದು ಕುಂದಾಪುರವನ್ನೇ ಬೆಂಗಳೂರಿನಲ್ಲಿ ಮರು ಸೃಷ್ಟಿ ಮಾಡಿದಂತಿತ್ತು.

ಕುಂದಾಪುರ ಕನ್ನಡ ಹಬ್ಬದ ಸಲುವಾಗಿ ಸಾಂಸ್ಕೃತಿಕ, ಗ್ರಾಮೀಣ ಕ್ರೀಡಾಕೂಟ, ಆಹಾರ ಮೇಳ ನಡೆಯುತ್ತಿದ್ದು, ಬೆಂಗಳೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ಅತಿದೊಡ್ಡ ಜೋಡಾಟ ಯಕ್ಷಗಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಜೋಡಿಯ ಯಕ್ಷಗಾನವನ್ನ ನೋಡಿ ಕುಂದಾಪುರ ಮಂದಿ ಫುಲ್ ಖುಷ್ ಆದ್ರು.

ಇನ್ನು ಊರಿನ ಹಬ್ಬವನ್ನ ಬೆಂಗಳೂರಿನಲ್ಲಿ ನೋಡಿ, ಅದ್ಧೂರಿಯಾಗಿ ಆಚಾರಿಸುತ್ತಿರುವುದನ್ನ ನೋಡಿ ತುಂಬ ಖುಷಿಯಾಗುತ್ತಿದೆ. ಹಬ್ಬದ ಸಲುವಾಗಿ ಊರಿನ ಮಂದಿ ಎಲ್ಲರೂ ಒಟ್ಟಾಗಿ ಸೇರಿದ್ದೇವೆ. ತುಂಬ ಖುಷಿಯಾಗುತ್ತಿದೆ ಅಂತ ಸಂಗೀತ ನಿರ್ದೇಶಕ ರವಿ ಬಸ್ರೂರು ಹೇಳಿದರು.

ಕುಂದಾಪುರ ಹಬ್ಬ ಎರಡು ದಿನಗಳ ಕಾಲ ಇರಲಿದ್ದು, ನಿನ್ನೆ ಜೋಡಿ ಯಕ್ಷಗಾನ ಇದ್ರೆ, ಇಂದು ಬಯಲಾಟ-ಗ್ರಾಮೀಣ ಉತ್ಸವ, ಚಂಡೆ-ಜಂಬೆ ಜುಗಲ್ಬಂದಿ ಕಾರ್ಯಕ್ರಮ, ಮಂದರ್ತಿ ಶ್ರೀ ದುರ್ಗಾಪರಮೇಶ್ವರಿಯ ನೃತ್ಯಗಾಥೆ, ರವಿ ಬಸ್ರೂರ್ ನೈಟ್ಸ್, ವಿಶೇಷ ಸಂಗೀತ ಸಂಜೆ ಇದೆ.

ಒಟ್ನಲ್ಲಿ, ತಮ್ಮ ಊರಿನ ಹಬ್ಬವನ್ನ ಬೆಂಗಳೂರಿನಲ್ಲಿ ಆಚಾರಣೆ ಮಾಡುತ್ತಿದ್ದು, ತಮ್ಮ ಊರಿನ ಭಾಷೆ, ಊಟ, ಕ್ರೀಡೆ, ಯಕ್ಷಗಾನ ನೋಡಿಕೊಂಡು ಕುಂದಾಪುರ ಮಂದಿ ಎಂಜಾಯ್ ಮಾಡ್ತಿದ್ದು ತಮ್ಮ ಊರನ್ನ ನೆನಪಿಸಿಕೊಳ್ತಿದ್ದಾರೆ.