AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Maharaja Trophy 2024: ಸಿಕ್ಸ್ ಸಿಡಿಸಿಯೇ ಹೊಸ ದಾಖಲೆ ಬರೆದ ಎಲ್​ಆರ್ ಚೇತನ್

Maharaja Trophy 2024: ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಕರ್ನಾಟಕದ ಯುವ ದಾಂಡಿಗ ಚೇತನ್ ರೇವಣ್ಣ ಅವರ ಸಿಡಿಲಬ್ಬರ ಮುಂದುವರೆದಿದೆ. ಕೇವಲ ಮೂರು ಸೀಸನ್​ಗಳ ಮೂಲಕವೇ ಎಲ್​ಆರ್​ಸಿ 50 ಸಿಕ್ಸ್​ಗಳನ್ನು ಸಿಡಿಸಿ ಕರ್ನಾಟಕ ಟಿ20 ಲೀಗ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಈ ಬಾರಿಯ ಐಪಿಎಲ್​ಗೂ ಎಂಟ್ರಿ ಕೊಡುವ ವಿಶ್ವಾಸದಲ್ಲಿದ್ದಾರೆ.

ಝಾಹಿರ್ ಯೂಸುಫ್
|

Updated on: Aug 18, 2024 | 1:31 PM

Share
ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಸಿಕ್ಸ್ ಸಿಡಿಸಿಯೇ ಯುವ ಸ್ಟೋಟಕ ದಾಂಡಿಗ ಎಲ್​ಆರ್ ಚೇತನ್ ಹೊಸ ದಾಖಲೆ ನಿರ್ಮಿಸಿದ್ದಾರೆ. ಅದು ಸಹ 24 ಪಂದ್ಯಗಳ ಮೂಲಕ ಎಂಬುದು ವಿಶೇಷ. ಅಂದರೆ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ 50 ಸಿಕ್ಸ್​ಗಳನ್ನು ಬಾರಿಸಿದ ಮೊದಲ ಬ್ಯಾಟರ್ ಎಂಬ ದಾಖಲೆ ಚೇತನ್ ಪಾಲಾಗಿದೆ.

1 / 5
ಗುಲ್ಬರ್ಗ ಮಿಸ್ಟಿಕ್ಸ್ ಹಾಗೂ ಬೆಂಗಳೂರು ಬ್ಲಾಸ್ಟರ್ಸ್ ಪರ ಒಟ್ಟು 24 ಪಂದ್ಯಗಳನ್ನಾಡಿರುವ ಎಲ್​ಆರ್ ಚೇತನ್ ಈವರೆಗೆ 50 ಸಿಕ್ಸ್​ಗಳನ್ನು ಬಾರಿಸಿದ್ದಾರೆ. ಈ ಮೂಲಕ ಕರ್ನಾಟಕ ಟಿ20 ಲೀಗ್​ನ ಸಿಕ್ಸರ್ ಸರದಾರರ ಪಟ್ಟಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡದ ಆರಂಭಿಕ ದಾಂಡಿಗ ಅಗ್ರಸ್ಥಾನ ಅಲಂಕರಿಸಿದ್ದಾರೆ.

2 / 5
ಮಹಾರಾಜ ಟಿ20 ಟೂರ್ನಿಯ ಸೀಸನ್-1 ರಲ್ಲಿ ಒಟ್ಟು 26 ಸಿಕ್ಸ್​ಗಳನ್ನು ಬಾರಿಸಿದ್ದ ಎಲ್​ಆರ್ ಚೇತನ್, 2023 ರಲ್ಲಿ 19 ಸಿಕ್ಸ್​ಗಳನ್ನು ಸಿಡಿಸಿದ್ದರು. ಇನ್ನು ಬಾರಿಯ ಟೂರ್ನಿಯ ಮೊದಲೆರಡು ಪಂದ್ಯಗಳಲ್ಲೇ 5 ಸಿಕ್ಸ್​ಗಳನ್ನು ಸಿಡಿಸಿ ಅಬ್ಬರಿಸಿದ್ದಾರೆ. ಈ ಮೂಲಕ ಮಹಾರಾಜ ಟಿ20 ಟೂರ್ನಿಯ ಸಿಕ್ಸರ್ ಕಿಂಗ್ ಎನಿಸಿಕೊಂಡಿದ್ದಾರೆ.

3 / 5
ಹಾಗೆಯೇ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ 700+ ರನ್ ಕಲೆಹಾಕಿದ ಬ್ಯಾಟರ್​ಗಳ ಪಟ್ಟಿಯಲ್ಲೂ ಯುವ ದಾಂಡಿಗ ಕಾಣಿಸಿಕೊಂಡಿದ್ದಾರೆ. 2022 ರ ಸೀಸನ್​ನಲ್ಲಿ 11 ಪಂದ್ಯಗಳಿಂದ ಚೇತನ್ ಒಟ್ಟು 447 ರನ್ ಕಲೆಹಾಕಿದ್ದರು. ಇನ್ನು 2023ರ ಸೀಸನ್​ನಲ್ಲಿ 11 ಪಂದ್ಯಗಳಿಂದ 309	ರನ್ ಬಾರಿಸಿದ್ದಾರೆ. ಹಾಗೆಯೇ ಈ ಬಾರಿ ಬೆಂಗಳೂರು ಬ್ಲಾಸ್ಟರ್ಸ್ ಪರ ಆಡುತ್ತಿರುವ ಚೇತನ್ ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ.

4 / 5
ದೇಶೀಯ ಅಂಗಳದಲ್ಲಿ ಸ್ಪೋಟಕ ಬ್ಯಾಟಿಂಗ್​ನೊಂದಿಗೆ ಸಂಚಲನ ಸೃಷ್ಟಿಸಿರುವ 24 ವರ್ಷದ ಎಲ್​ಆರ್​ ಚೇತನ್ ಅವರಿಗೆ ಈವರೆಗೆ ಐಪಿಎಲ್​​ನಲ್ಲಿ ಚಾನ್ಸ್ ಸಿಕ್ಕಿಲ್ಲ ಎಂಬುದೇ ಅಚ್ಚರಿ. ಅದರಲ್ಲೂ ಕಳೆದ ಎರಡು ಸೀಸನ್​ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರೂ ಯುವ ದಾಂಡಿಗನ ಖರೀದಿಗೆ ಆರ್​ಸಿಬಿ ಆಸಕ್ತಿವಹಿಸಿರಲಿಲ್ಲ. ಇದೀಗ ಸಿಕ್ಸರ್​ಗಳ ಮೂಲಕವೇ ಗಮನ ಸೆಳೆದಿರುವ ಎಲ್​​ಆರ್​ ಚೇತನ್ ಈ ಬಾರಿಯ ಮೆಗಾ ಹರಾಜಿನ ಮೂಲಕ ಐಪಿಎಲ್​ಗೆ ಎಂಟ್ರಿ ಕೊಡುವ ವಿಶ್ವಾಸದಲ್ಲಿದ್ದಾರೆ.

5 / 5
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ

ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?

ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ

ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ

ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ

ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ