
ನಿರ್ಮಾಪಕ ಬೋನಿ ಕಪೂರ್, ಅವರ ಪತ್ನಿ ಶ್ರೀದೇವಿ ಮತ್ತು ಲತಾ ಮಂಗೇಶ್ಕರ್ ಈ ಫೋಟೋದಲ್ಲಿ ಇದ್ದಾರೆ. ಈ ಅಪರೂಪದ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಬೋನಿ ಕಪೂರ್ ಅವರು ಲತಾಜೀ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

ಸಲ್ಮಾನ್ ಖಾನ್ ಅವರ ಅನೇಕ ಸಿನಿಮಾಗಳ ಹಾಡಿಗೆ ಲತಾ ಮಂಗೇಶ್ಕರ್ ಧ್ವನಿ ಆಗಿದ್ದರು. ಸಮಾರಂಭವೊಂದರ ವೇದಿಕೆಯಲ್ಲಿ ಲತಾ ಜೊತೆ ಕ್ಲಿಕ್ಕಿಸಿಕೊಂಡಿದ್ದ ಫೋಟೋವನ್ನು ಸಲ್ಮಾನ್ ಖಾನ್ ಅವರು ಈಗ ಶೇರ್ ಮಾಡಿಕೊಂಡಿದ್ದಾರೆ. ಆ ಮೂಲಕ ಲತಾಜೀ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

‘ವಿದಾಯಗಳು ಲತಾ ದೀದಿ. ನಿಮ್ಮನ್ನು ಭೇಟಿ ಮಾಡಿದ ಕ್ಷಣ ಮತ್ತು ನಿಮ್ಮ ಸುಮಧುರ ಮಾತುಗಳು ಸದಾ ಕಾಲ ನೆನಪಿನಲ್ಲಿ ಇರುತ್ತವೆ ಹಲವು ತಲೆಮಾರಿನ ಜನರು ನಿಮ್ಮ ಹಾಡುಗಳಿಂದ ಕಲಿಯುವುದು ಇದೆ. ನಮ್ಮ ಹೃದಯದಲ್ಲಿ ನೀವು ಶಾಶ್ವತವಾಗಿ ಇರುತ್ತೀರಿ’ ಎಂದು ಕಪಿಲ್ ಶರ್ಮಾ ಟ್ವೀಟ್ ಮಾಡಿದ್ದಾರೆ.

‘ಇಡೀ ಜಗತ್ತು ದುಃಖದಲ್ಲಿದೆ. ನೀವು ನಮ್ಮನ್ನು ಬಿಟ್ಟು ಹೋದ್ರಿ ಎಂಬುದನ್ನು ನಂಬೋಕೆ ಆಗುತ್ತಿಲ್ಲ. ನಿಮ್ಮನ್ನು ನಾವು ಮಿಸ್ ಮಾಡಿಕೊಳ್ಳುತ್ತೇವೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ನಟ ಧರ್ಮೇಂದ್ರ ಟ್ವೀಟ್ ಮಾಡಿದ್ದಾರೆ. ಸನ್ನಿ ಡಿಯೋಲ್ ಕೂಡ ಲತಾಜೀ ಜೊತೆಗಿನ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ಲತಾ ಮಂಗೇಶ್ಕರ್ ಜೊತೆಗೆ ತಾವಿರುವ ಫೋಟೋವನ್ನು ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರು ಪೋಸ್ಟ್ ಮಾಡಿದ್ದಾರೆ. ‘ಪ್ರೀತಿ, ಗೌರವ ಮತ್ತು ಪ್ರಾರ್ಥನೆಗಳು’ ಎಂದು ಆ ಫೋಟೋಗೆ ಅವರು ಕ್ಯಾಪ್ಷನ್ ನೀಡಿದ್ದಾರೆ.