AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧಾರವಾಡದಲ್ಲಿ ಪಂಚೆ, ಶರ್ಟು, ಸೀರೆ, ದಾವಣಿ ತೊಟ್ಟು ಮಿಂಚಿದ ಕಾನೂನು ವಿದ್ಯಾರ್ಥಿಗಳು

ಅವರೆಲ್ಲ ಕಾನೂನು ವಿದ್ಯಾರ್ಥಿಗಳು. ಪ್ರತಿದಿನ ಕಾನೂನು, ಸೆಕ್ಷನ್, ವಾದ-ಪ್ರತಿವಾದ ಅಂತೆಲ್ಲ ಶಿಕ್ಷಣ ಪಡೆಯುವವರು. ಆದರೆ, ಆ ಕಾಲೇಜಿನಲ್ಲಿ ಕಳೆದೊಂದು ವಾರದಿಂದ ಫನ್ ವೀಕ್ ಆಚರಿಸಲಾಗುತ್ತಿದೆ. ಅದರ ಅಂಗವಾಗಿ ಇಂದು(ಗುರುವಾರ) ನಡೆದ ದಿನ ವಿಲೇಜ್ ಡೇ. ಒಂದು ದಿನ ಎಲ್ಲ ವಿದ್ಯಾರ್ಥಿಗಳು ರೈತರ ಹೆಸರಿನಲ್ಲಿ ಸಾಂಪ್ರದಾಯಿಕ ದಿನವನ್ನು ಆಚರಿಸಿದ್ದಾರೆ. ಹೇಗಿತ್ತು ವಿಲೇಜ್ ಡೇ ಹವಾ ಅಂತೀರಾ? ಇಲ್ಲಿದೆ.

ಕಿರಣ್ ಹನುಮಂತ್​ ಮಾದಾರ್
|

Updated on: Aug 01, 2024 | 6:19 PM

Share
 ಧಾರವಾಡ ನಗರದ ಸರ್. ಸಿದ್ದಪ್ಪ ಕಂಬಳಿ ಕಾನೂನು ಕಾಲೇಜಿನ ವಿದ್ಯಾರ್ಥಿಗಳು, ಪಂಚೆ, ಶರ್ಟು, ಸೀರೆ, ಲಂಗಾ, ದಾವಣಿ ತೊಟ್ಟು ಸಾಂಪ್ರದಾಯಿಕ ವಸ್ತ್ರಗಳಲ್ಲಿ ಮಿಂಚಿದ್ದಾರೆ. ಈ ಕಾಲೇಜಿನಲ್ಲಿ ಕಳೆದೊಂದು ವಾರದಿಂದ ಫನ್ ವೀಕ್ ಆಚರಿಸಲಾಗುತ್ತಿದೆ. ಅದರ ಅಂಗವಾಗಿ ಇಂದು ವಿಲೇಜ್ ಡೇ ನಡೆದಿದೆ.

1 / 6
ಈ ದಿನ ಎಲ್ಲ ವಿದ್ಯಾರ್ಥಿಗಳು ತರಗತಿ ಹಾಗೂ ಅಭ್ಯಾಸವನ್ನು ಬದಿಗಿಟ್ಟು, ಸಾಂಪ್ರದಾಯಿಕ ಉಡುಗೆ ತೊಟ್ಟು ಸಂಭ್ರಮಿಸಿದರು. ಮೊದಲಿಗೆ ಕಾಲೇಜು ಮುಂಭಾಗದಲ್ಲಿ ತಳಿರು-ತೋರಣ ಕಟ್ಟಿ, ರಂಗೋಲಿ ಹಾಕಿ ಅಲಂಕಾರ ಮಾಡಿದ್ದರು.

2 / 6
ಬಳಿಕ ಕಾಲೇಜಿನಲ್ಲಿ ಗಣಪತಿ ಪೂಜೆ ಮಾಡಿ ಭಕ್ತಿಯನ್ನು ಮೆರೆದರು. ಈ ವೇಳೆ ಒಬ್ಬರಿಗಿಂತ ಒಬ್ಬರು ಗಮನ ಸೆಳೆಯುವ ರೀತಿಯಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟು ಸಂಭ್ರಮಿಸಿದರು.

3 / 6
ಅಲ್ಲದೇ ಕಾಲೇಜಿನಲ್ಲಿ ಟ್ರ್ಯಾಕ್ಟರ್ ಮತ್ತು ಚಕ್ಕಡಿಯನ್ನೂ ತೆಗೆದುಕೊಂಡು ಬಂದು, ವಿದ್ಯಾರ್ಥಿಗಳು ಅವುಗಳಲ್ಲಿ ಕುಳಿತು ಒಂದು ಸುತ್ತು ಹಾದು ಬಂದರು. ಇನ್ನು ಕಾಲೇಜಿನಲ್ಲಿ ವಿದ್ಯಾರ್ಥಿಗಳು ಆಚರಣೆ ಮಾಡಿದ ಈ ವಿಲೇಜ್ ಡೇ ಕಾರ್ಯಕ್ರಮದಲ್ಲಿ ಕಾಲೇಜಿನ ಸಿಬ್ಬಂದಿ ಕೂಡ ಭಾಗವಹಿಸಿದರು.

4 / 6
ಈ ದಿನವನ್ನು ರೈತರಿಗಾಗಿ ವಿದ್ಯಾರ್ಥಿಗಳು ಹಾಗೂ ಕಾಲೇಜು ಸಿಬ್ಬಂದಿ ಸಮರ್ಪಿಸಿದ್ದು ವಿಶೇಷವಾಗಿತ್ತು. ಹಳ್ಳಿಗರ ಹಾಗೂ ರೈತರ ಹೆಸರಿನಲ್ಲಿ ಈ ದಿನ ಎಲ್ಲ ವಿದ್ಯಾರ್ಥಿಗಳು ಸಾಂಪ್ರದಾಯಿಕ ದಿನ ಆಚರಿಸಿದ್ದು, ಖುಷಿ ತಂದಿತು ಎಂದು ವಿದ್ಯಾರ್ಥಿನಿಯರು ಅಭಿಪ್ರಾಯ ಹಂಚಿಕೊಂಡರು.

5 / 6
ಒಟ್ಟಾರೆ ಕಾನೂನು ಕಾಲೇಜಿನಲ್ಲಿ ನಡೆದ ‘ಫನ್ ವೀಕ್’ ವಿದ್ಯಾರ್ಥಿಗಳಿಗೆ ಹೊಸ ಬಗೆಯ ಜಗತ್ತಿನ ಪರಿಚಯ ಮಾಡಿಸಿದರೆ, ಇಂದು ನಡೆದ ವಿಲೇಜ್ ಡೇ ಮಾತ್ರ ಹಳ್ಳಿಗರ ಬದುಕನ್ನು ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಕೊಟ್ಟಿತು. ಕಾನೂನು ಓದುವ ಎಲ್ಲ ವಿದ್ಯಾರ್ಥಿಗಳು ಒಂದು ದಿನ ಗ್ರಾಮೀಣ ಸಂಪ್ರದಾಯದ ಉಡುಗೆ ಧರಿಸಿದ್ದು ಎಲ್ಲರ ಗಮನ ಸೆಳೆದಿದ್ದಂತೂ ನಿಜ.

6 / 6