ಭೂಗತ ಪಾತಕಿಗಳಿಂದ ದಾಳಿಗೆ ಒಳಗಾದ ಬಾಲಿವುಡ್ ನಟರು: ಇಲ್ಲಿದೆ ಪಟ್ಟಿ

Updated on: Oct 21, 2026 | 1:54 PM

ಬಾಲಿವುಡ್​​ಗೆ ಹಲವು ದಶಕಗಳಿಂದಲೂ ಭೂತಕ ಪಾತಕಿಗಳ, ಮಾಫಿಯಾ ಜನರ ಕಾಟ ಇದ್ದೇ ಇದೆ. ಮೊದಲೆಲ್ಲ ದಾವೂದ್, ಚೋಟಾ ಶಕೀಲ್ ಇನ್ನೂ ಕೆಲವು ಮಾಫಿಯಾ ಪಾತಕಿಗಳು ಬಾಲಿವುಡ್​​ ಸೆಲೆಬ್ರಿಟಿಗಳ ಹೆದರಿಸಿ, ಬೆದರಿಸಿ ಮಾಡುತ್ತಿದ್ದರು. ಇತ್ತೀಚೆಗೆ ಬಿಷ್ಣೋಯಿ ಗ್ಯಾಂಗ್, ಬ್ರಾರ್ ಬ್ರದರ್ಸ್ ಇನ್ನಿತರೆ ಮಾಫಿಯಾದವರುಗಳು ಬಾಲಿವುಡ್​​ ನಲ್ಲಿ ಭಯೋತ್ಪಾದನೆ ಮಾಡುತ್ತಿದ್ದಾರೆ. ಇತ್ತೀಚೆಗಿನ ವರ್ಷಗಳಲ್ಲಿ ಮಾಫಿಯಾದವರಿಂದ ದಾಳಿಗೆ ತುತ್ತಾತ ಸೆಲೆಬ್ರಿಟಿಗಳ ಪಟ್ಟಿ ಇಲ್ಲಿದೆ...

1 / 9
ಕೆಲ ದಿನಗಳ ಹಿಂದಷ್ಟೆ (ಅಕ್ಟೋಬರ್ 18) ಮುಂಬೈನ ಜುಹು ಪ್ರದೇಶದಲ್ಲಿ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಗುಂಡು ಹಾರಿಸಲಾಯಿತು. ಅವರು ಅಪಾಯದಿಂದ ಪಾರಾದರು. ಸಲ್ಮಾನ್ ಖಾನ್ ಜೊತೆ ಕೆಲಸ ಮಾಡುವವರೆಲ್ಲ ಮುಂದಿನ ಗುರಿ ಎಂದು ಬಿಷ್ಣೋಯಿ ಗ್ಯಾಂಗ್ ಹೆಸರಿನಲ್ಲಿ ಹೊಣೆ ಹೊತ್ತು ಅನಿಲ್ ಪಂಡಿತ್ ಎಂಬಾತ ಪೋಸ್ಟ್ ಹಾಕಿದ. ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿಯನ್ನು ಬಂಧಿಸಲಾಗಿದೆ.

ಕೆಲ ದಿನಗಳ ಹಿಂದಷ್ಟೆ (ಅಕ್ಟೋಬರ್ 18) ಮುಂಬೈನ ಜುಹು ಪ್ರದೇಶದಲ್ಲಿ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಗುಂಡು ಹಾರಿಸಲಾಯಿತು. ಅವರು ಅಪಾಯದಿಂದ ಪಾರಾದರು. ಸಲ್ಮಾನ್ ಖಾನ್ ಜೊತೆ ಕೆಲಸ ಮಾಡುವವರೆಲ್ಲ ಮುಂದಿನ ಗುರಿ ಎಂದು ಬಿಷ್ಣೋಯಿ ಗ್ಯಾಂಗ್ ಹೆಸರಿನಲ್ಲಿ ಹೊಣೆ ಹೊತ್ತು ಅನಿಲ್ ಪಂಡಿತ್ ಎಂಬಾತ ಪೋಸ್ಟ್ ಹಾಕಿದ. ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿಯನ್ನು ಬಂಧಿಸಲಾಗಿದೆ.

2 / 9

ಬಾಲಿವುಡ್ ನಟ ಸಲ್ಮಾನ್ ಖಾನ್ ಮೇಲೆ ಸತತವಾಗಿ ದಾಳಿ ಯತ್ನಗಳು ನಡೆಯುತ್ತಲೇ ಇವೆ. 2024ರಲ್ಲಿ ಮುಂಬೈನ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ಹೊರಗೆ ಗುಂಡಿನ ದಾಳಿ ನಡೆಯಿತು, ಈ ಪ್ರಕರಣದಲ್ಲಿ ಆರು ಜನರನ್ನು ಬಂಧಿಸಲಾಯಿತು. ಬೆದರಿಕೆ ಪತ್ರಗಳು ಸಹ ಸಲ್ಮಾನ್ ಖಾನ್​​ಗೆ ಬಂದಿದ್ದವು. ಸಲ್ಮಾನ್ ಖಾನ್​​ಗೆ ವಿಶೇಷ ಭದ್ರತೆಯನ್ನು ನೀಡಲಾಗಿದೆ.

3 / 9

2025ರ ಸೆಪ್ಟೆಂಬರ್ 12ರ ಮುಂಜಾನೆ ಸುಮಾರು 3:45ಕ್ಕೆ ಉತ್ತರ ಪ್ರದೇಶದ ಬರೇಲಿಯಲ್ಲಿರುವ ದಿಶಾ ಅವರ ಕುಟುಂಬದ ಮನೆಯ ಹೊರಗೆ 8–10 ಗುಂಡುಗಳನ್ನು ಹಾರಿಸಲಾಯಿತು. ಆಗ ಮನೆಯಲ್ಲಿ ದಿಶಾ ಅವರ ತಂದೆ (ನಿವೃತ್ತ ಡಿಎಸ್‌ಪಿ ಜಗದೀಶ್ ಸಿಂಗ್ ಪಟಾನಿ), ತಾಯಿ ಮತ್ತು ಸಹೋದರಿ ಖುಷ್ಬೂ ಇದ್ದರು. ಸಂತ ಪ್ರೇಮಾನಂದ ಮಹಾರಾಜ್ ಮತ್ತು ಅನಿರುದ್ಧಾಚಾರ್ಯ ಮಹಾರಾಜ್ ಬಗ್ಗೆ ದಿಶಾ ಮತ್ತು ಅವರ ಸಹೋದರಿ ಆಡಿದ ಮಾತುಗಳಿಗೆ ಪ್ರತೀಕಾರ ಎಂದು ಗೋಲ್ಡಿ ಬ್ರಾರ್ ಹೆಸರಿನ ಪೋಸ್ಟ್ ಹೇಳಿತು.

4 / 9

ಸಲ್ಮಾನ್ ಖಾನ್ ಅವರ ಆಪ್ತರಾಗಿದ್ದ ಮಾಜಿ ಸಚಿವ ಬಾಬಾ ಸಿದ್ದೀಕಿ ಅವರನ್ನು 2024ರ ಅಕ್ಟೋಬರ್ 12ರ ರಾತ್ರಿ ಬಾಂದ್ರಾದಲ್ಲಿ ಮೂವರು ಬಂದೂಕುಧಾರಿಗಳು ಗುಂಡಿಕ್ಕಿ ಕೊಂದರು. ಈ ಪ್ರಕರಣದಲ್ಲಿ ಗ್ಯಾಂಗ್‌ಗೆ ಸಂಬಂಧಿಸಿದ ಹಲವರನ್ನು ಬಂಧಿಸಲಾಗಿದೆ.

5 / 9

ಕೆನಡಾದಲ್ಲಿರುವ ಕಪಿಲ್ ಶರ್ಮಾ ಅವರ ‘ಕ್ಯಾಪ್ಸ್ ಕೆಫೆ’ ಮೇಲೆ 2025ರಲ್ಲಿ ಹಲವು ಬಾರಿ ಗುಂಡಿನ ದಾಳಿ ನಡೆಯಿತು. ಕಪಿಲ್ ಶರ್ಮಾಗೆ ಹಫ್ತಾಗಾಗಿ ಒತ್ತಾಯಿಸಲಾಗಿತ್ತು ಎನ್ನಲಾಗಿದೆ. ಜೊತೆಗೆ ಅವರು ಸಲ್ಮಾನ್ ಖಾನ್ ಅನ್ನು ಶೋಗೆ ಆಹ್ವಾನಿಸಿದ್ದಕ್ಕಾಗಿ ಈ ದಾಳಿ ನಡೆಸಲಾಗಿದೆಯಂತೆ.

6 / 9

ಇದೇ ವರ್ಷ ಜನವರಿ 31ರಂದು ಬಾಲಿವುಡ್ ನಿರ್ದೇಶಕ, ನಿರ್ಮಾಪಕ ರೋಹಿತ್ ಶೆಟ್ಟಿ ಅವರ ಮುಂಬೈ ಮನೆಯ ಹೊರಗೆ ಬಂದೂಕುಧಾರಿಗಳು ಐದು ಸುತ್ತು ಗುಂಡು ಹಾರಿಸಿದರು. ಇದರ ಹೊಣೆಯನ್ನು ಬಿಷ್ಣೋಯಿ ಗ್ಯಾಂಗ್ ನಂತರ ಹೊತ್ತುಕೊಂಡಿತು. ಇದು ಇಡೀ ಬಾಲಿವುಡ್‌ಗೆ ಎಚ್ಚರಿಕೆ ಎಂದು ಗ್ಯಾಂಗ್ ಹೇಳಿತ್ತು.

7 / 9

ಪಂಜಾಬಿ ಗಾಯಕರಾದ ವ್ಯಾಂಕೂವರ್‌ನಲ್ಲಿರುವ ಗಿಪ್ಪಿ ಗ್ರೆವಾಲ್ ಮತ್ತು ಎಪಿ ಧಿಲ್ಲೋನ್ ಮನೆಗಳ ಬಳಿ ಗುಂಡಿನ ದಾಳಿಗಳು ನಡೆದಿದ್ದು, ಇವರಿಂದಲೂ ಸಹ ಗ್ಯಾಂಗಿನವರು ಹಣಕ್ಕಾಗಿ ಒತ್ತಾಯ ಮಾಡಿದ್ದರು.

8 / 9

ಕರಣ್ ಜೋಹರ್​​ಗೆ ಸಹ ಹಣ ಕೊಡುವಂತೆ ಒತ್ತಾಯಿಸಿ ಬೆದರಿಕೆ ಹಾಕಲಾಗಿತ್ತು. ದಿಲ್ಜೀತ್ ದುಸ್ಸಾಂಜ್, ಖ್ಯಾತ ಪಂಚಾಜಿ ಗಾಯಕ ದಿಲ್ಜೀತ್ ದೊಸ್ಸಾಂಜ್​​ಗೂ ಸಹ ಬೆದರಿಕೆ ಬಂದಿತ್ತು. ಅವರಿಗೆ ಮಾತ್ರವಲ್ಲದೆ ಹನಿ ಸಿಂಗ್​​ ಹಾಗೂ ಬಾದ್​​ಶಾಗೂ ಸಹ ಬೆದರಿಕೆ ಬಂದಿತ್ತು.

9 / 9

ಬಾಲಿವುಡ್ ನಟ ರಣವೀರ್ ಸಿಂಗ್ ಅವರ ಮ್ಯಾನೇಜರ್‌ಗೆ ₹10 ಕೋಟಿ ಸುಲಿಗೆ ಬೇಡಿಕೆಯ ವಾಯ್ಸ್ ನೋಟ್ ಬಂದಿದ್ದು, ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಟ ಆಮಿರ್ ಖಾನ್ ಅವರಿಗೆ 2026ರ ಜುಲೈನಲ್ಲಿ ಬಿಷ್ಣೋಯ್ ಗ್ಯಾಂಗ್ ಸಂಪರ್ಕ ಹೇಳಿಕೊಂಡವರಿಂದ ಬೆದರಿಕೆ ಬಂದಿದೆ ಎಂದು ವರದಿಯಾಗಿದೆ.

Published On - 1:45 pm, Wed, 21 October 26

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us