2014ರಲ್ಲಿ ಅವರ ಒಂದು ಕಾಲದ ಆಪ್ತರಾಗಿದ್ದ ನರೇಂದ್ರ ಮೋದಿ ಅವರನ್ನು ಪಕ್ಷದ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಹೆಸರಿಸಿದಾಗ, ಪಕ್ಷದೊಂದಿಗಿನ ಅವರ ಸಂಬಂಧವು ಹದಗೆಡಲು ಪ್ರಾರಂಭಿಸಿತು. 2014 ರ ಲೋಕಸಭೆ ಚುನಾವಣೆಯಲ್ಲಿ ಮೋದಿಯವರ ಗೆಲುವಿನ ನಂತರ ಅಡ್ವಾಣಿ ಅವರನ್ನು ಹಿನ್ನೆಲೆಗೆ ತಳ್ಳಲಾಯಿತು. ಅವರು ಬಿಜೆಪಿಯ ಮಾರ್ಗದರ್ಶಕ ಎಂಬ ಪಟ್ಟಕ್ಕೆ ಸೀಮಿತರಾದರು.