ಲೋಕಸಭಾ ಚುನಾವಣೆ: ಶಿವಮೊಗ್ಗದಲ್ಲಿ ಮೋದಿ ಹವಾ ಹೇಗಿತ್ತು ನೋಡಿ
ಮೂರನೇ ಬಾರಿ ಗದ್ದುಗೆ ಏರಲು ತಯಾರಿಯಲ್ಲಿರುವ ಪ್ರಧಾನಿ ಮೋದಿ ಮೊನ್ನೆ ರಾಜ್ಯಕ್ಕೆ ಆಗಮಿಸಿದ್ದಾರೆ. ಇಂದು ಶಿವಮೊಗ್ಗದಲ್ಲಿ ಚುನಾವಣಾ ರ್‍ಯಾಲಿ ಮಾಡಿ ಬಳಿಕ ಮತದಾರರನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ. ಪ್ರಧಾನಿ ಮೋದಿಯನ್ನು ನೋಡಲು ಜನರು ದೊಡ್ಡ ದೊಡ್ಡ ಕಟ್ಟಡ, ಫ್ಲೈಓವರ್ ಮೇಲೆ ಕಾದು ಕುಳಿತ್ತಿದ್ದರು.
1 / 6
ಲೋಕಸಭಾ ಚುನಾವಣಾ ಕಣ ರಂಗೇರುತ್ತಿದೆ. ಬಿಜೆಪಿ ಅಬ್ಬರದ ಪ್ರಚಾರ ಆರಂಭಿಸಿದೆ. ರಾಜ್ಯದ ಬಿಜೆಪಿ ಅಭ್ಯರ್ಥಿಗಳ ಪರ ಪ್ರಧಾನಿ ಮೋದಿ ಅಖಾಡಕ್ಕಿಳಿದಿದ್ದರು. ಮಲೆನಾಡ ಹೆಬ್ಬಾಗಿಲು, ಶಿವಮೊಗ್ಗಕ್ಕೆ ಎಂಟ್ರಿಕೊಟ್ಟಿದ್ದ ಪ್ರಧಾನಿ ಮೋದಿ, 5 ಜಿಲ್ಲೆಗಳನ್ನ ಟಾರ್ಗೆಟ್ ಮಾಡಿ ಮತಯಾಚಿಸಿದ್ದಾರೆ.
2 / 6
ಅಲ್ಲಮಪ್ರಭು ಮೈದಾನದಲ್ಲಿ ಬಿಜೆಪಿ ಬೃಹತ್ ಸಮಾವೇಶ ಹಮ್ಮಿಕೊಂಡಿತ್ತು. ವಿಮಾನದ ಮೂಲಕ ಶಿವಮೊಗ್ಗ ಏರ್ಪೋರ್ಟ್ಗೆ ಆಗಮಿಸಿದ ಮೋದಿ, ಬಳಿಕ ತೆರೆದ ವಾಹನದಲ್ಲಿ ವೇದಿಕೆಗೆ ಆಗಮಿಸಿದರು. ಶಿವಮೊಗ್ಗ, ಉಡುಪಿ-ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಪರ ಮೋದಿ ಕ್ಯಾಂಪೇನ್ ಮಾಡಿದರು.
3 / 6
ಸಮಾವೇಶದ ಉದ್ದಕ್ಕೂ ಮೋದಿ, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಸುಳ್ಳು ಹೇಳುವುದೇ ಕಾಂಗ್ರೆಸ್ ಅಜೆಂಡಾ. ಜನ್ರನ್ನ ಲೂಟಿ ಮಾಡಿ, ತಮ್ಮ ಜೇಬು ತುಂಬಿಸಿಕೊಳ್ಳೋದು ಕಾಂಗ್ರೆಸ್ನ ಗುರಿ. ಕರ್ನಾಟಕವನ್ನ ಎಟಿಎಂ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಶ್ಯಾಡೋ ಸಿಎಂ, ಸೂಪರ್ ಸಿಎಂ, ವೈಟಿಂಗ್ ಸಿಎಂಗಳ ಮಧ್ಯೆ ದೆಹಲಿಯಲ್ಲಿ ಕಲೆಕ್ಷನ್ ಮಂತ್ರಿ ಕೂಡಾ ಇದ್ದಾರೆ ಅಂತ ಗುಡುಗಿದ್ದರು.
4 / 6
ಇನ್ನು ಪ್ರಧಾನಿ ಮೋದಿ ಬರುತ್ತಾರೆಂದು ಕಣ್ಣಾಯಿಸಿದಷ್ಟು ದೂರ ಜನರ ದಂಡೇ ಸೇರಿತ್ತು. ಎಲ್ಲೆಲ್ಲೂ ಕೇಸರಿ ಕಲರವ. ಮೋದಿ ಮೋದಿ ಅನ್ನೋ ಘೋಷಣೆ ಹಾಕಿದರು. ತಮ್ಮ ನೆಚ್ಚಿನ ನಾಯಕನನ್ನು ನೋಡಲು ಜನರು ದೊಡ್ಡ ದೊಡ್ಡ ಕಟ್ಟಡ, ಫ್ಲೈಓವರ್ ಮೇಲೆ ಸೇರಿದ್ದರು.
5 / 6
ಕೇವಲ ರ್‍ಯಾಲಿಯಲ್ಲಿ ಮಾತ್ರ ಜನರು ಸೇರದೆ ಇತ್ತ ಸಮಾವೇಶದಲ್ಲಿ ಕೂಡ ಪ್ರಧಾನಿ ಮೋದಿ ಮಾತು ಕೇಳಲು ಸಾಕಷ್ಟು ಜನರು ನೆರೆದಿದ್ದು ಹೀಗೆ.
6 / 6
ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರನ್ನು ಸನ್ಮಾನಿಸಲಾಗಿದ್ದು, ಶ್ರೀಕೃಷ್ಣನ ಮೂರ್ತಿಯನ್ನು ಉಡುಗೊರೆಯಾಗಿ ನೀಡಲಾಗಿದೆ.
Published On - 7:59 pm, Mon, 18 March 24