1/6

ಹೊನ್ನಾಳಿ ತಾಲೂಕಿನ ಅರೆಹಳ್ಳಿ ಗ್ರಾಮದ ರೈತರ ತೋಟದ ಅಡಿಕೆ ಗಿಡದಲ್ಲಿ ಕಂಡು ಬಂದ ದೃಶ್ಯವಿದು. ನೈಸರ್ಗಿಕವಾಗಿ ಪೃಕೃತಿಯ ವಿಸ್ಮಯವನ್ನು ನೋಡಿ ಗ್ರಾಮಸ್ಥರು ಅಚ್ಚರಿ ಪಟ್ಟಿದ್ದಾರೆ.
2/6

ಅರೆಹಳ್ಳಿ ಗ್ರಾಮದಲ್ಲಿ ವೈ.ಜೆ.ಗಿರೀಶ್ ಎಂಬುವವರ ತೋಟದಲ್ಲಿ ದೃಶ್ಯ ಕಂಡು ಬಂದಿದೆ. ಪ್ರಕೃತಿಯ ಸೌಂದರ್ಯವೇ ಅಷ್ಟೊಂದು ಚಂದ. ಜೊತೆಗೆ ಎಲ್ಲರೂ ದಿಗ್ಬೆರಗಾಗುವಂತೆ ಗಣಪನ ರೂಪ ಅಡಿಕೆ ಗಿಡದಲ್ಲಿ ಕಂಡು ಬಂದಿರುವುದು ಅಚ್ಚರಿ ಮೂಡಿಸಿದೆ.
3/6

ಹಚ್ಚ ಹಸುರಿನ ಗದ್ದೆ. ತಂಪಾದ ವಾತಾವರಣ. ನೋಡಲು ರಮಣೀಯ ದೃಶ್ಯ. ಜೊತೆಗೆ ಅಡಿಕೆ ಗಿಡದಲ್ಲಿ ಮೂಡಿದ್ದ ಗಣಪನ ಮೂರ್ತಿ ನೋಡುವುದೇ ಸುಂದರ.
4/6

ಅಡಿಕೆ ಗಿಡದಲ್ಲಿ ಮೂಡಿದ ಗಣಪನನ್ನು ನೋಡಿ ಊರಿನ ಜನರು ಅಚ್ಚರಿಗೊಂಡಿದ್ದಾರೆ.
Lord Ganesha Idol shape created in Areca Tree and Honnali people excited to have sight
5/6

ಮೂರು ವರ್ಷದ ಅಡಿಕೆ ಗಿಡದಲ್ಲಿ ಗಣಪನ ಮೂರ್ತಿ ರಂಗೇರಿದೆ. ತೋಟಕ್ಕೆ ನೀರು ಬಿಡುವಾಗ ರೈತ ವೈ.ಜೆ.ಗಿರೀಶ್ ನೋಡಿ ಆಶ್ಚರ್ಯ ಚಕಿತರಾಗಿದ್ದಾರೆ. ವಿಸ್ಮಯದ ಜೊತೆಗೆ ಗಣೇಶದ ಚಿತ್ರ ಮರದಲ್ಲಿ ಮೂಡಿಸುವುದು ರೈತರ ಮನೆಯವರಿಗೆ ಸಂತೋಷ ತಂದಿದೆ.
6/6

ಅಡಿಕೆ ಗಿಡದಲ್ಲಿ ಕಂಡು ಬಂದ ಗಣಪನನ್ನ ನೋಡಲು ಸುತ್ತಲಿನ ಜನರ ಆಗಮಿಸಿದ್ದಾರೆ. ಗಣೇಶನನ್ನು ನೋಡಿ ಭಕ್ತಿ ಪರವಶರಾಗಿ ಗಣೇಶನಿಗೆ ಆರತಿ ಬೆಳಗಿ ಪೂಜಿಸಿದ್ದಾರೆ.