
ಪ್ಯಾನ್ ಇಂಡಿಯಾ ಜಮಾನಾದಲ್ಲಿ ಕನ್ನಡದಲ್ಲಿ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ರೆಡಿಯಾಗುತ್ತಿದೆ.

'ಮಾರ್' ಹೆಸರಿನ ಪ್ಯಾನ್ ಇಂಡಿಯಾ ಸಿನಿಮಾ ಆರಂಭವಾಗಿದ್ದು ಇದು ಭಾರಿ ಬಜೆಟ್ ಸಿನಿಮಾ ಅಂತೆ.

'ಮಾರ್' ಸಿನಿಮಾ ಮೂಲಕ ವಿಜಯ್ ವೆಂಕಟೇಶ್ ಹೀರೋ ಆಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ.

ಸಿನಿಮಾದ ಹೀರೋ ಇಂಟ್ರೊಡಕ್ಷನ್ ಹಾಡು ಇದೀಗ ಬಿಡುಗಡೆ ಆಗಿದೆ. ಮುಹೂರ್ತದ ಬದಲಿಗೆ ನೇರವಾಗಿ ಹಾಡು ಬಿಡುಗಡೆ ಮಾಡಿದೆ ಚಿತ್ರತಂಡ.

’ಮಾರ್’ ಸಿನಿಮಾವನ್ನು ಅನಿಲ್ ವೆಂಕಟರಾಜು ನಿರ್ದೇಶನ ಮಾಡಲಿದ್ದಾರೆ.

'ಮಾರ್' ಸಿನಿಮಾದ ಮೊದಲ ಹಾಡನ್ನು ಯುವನಟ ಶ್ರೇಯಸ್ ಮಂಜು ಬಿಡುಗಡೆ ಮಾಡಿ ಶುಭ ಕೋರಿದ್ದಾರೆ.

’ಮಾರ್’ ಸಿನಿಮಾದಲ್ಲಿ ನಟಿಸಿರುವ ವಿಜಯ್ ವೆಂಕಟೇಶ್ ಅವರೇ ಈ ಸಿನಿಮಾದ ನಿರ್ಮಾಪಕರು ಸಹ.