ಲಂಡನ್ನಲ್ಲಿ ‘ರಂಗಪ್ರವೇಶ’ ಮಾಡಿದ ಮಹೇಶ್ ಬಾಬು ಪುತ್ರ ಗೌತಮ್
ಸ್ಟಾರ್ ನಟ ಮಹೇಶ್ ಬಾಬು ಪುತ್ರಿ ಈಗಾಗಲೇ ಜಾಹೀರಾತುಗಳಲ್ಲಿ ನಟಿಸಲು ಆರಂಭಿಸಿದ್ದಾರೆ. ಒಳ್ಳೆಯ ಡ್ಯಾನ್ಸರ್ ಸಹ. ಇದೀಗ ಮಹೇಶ್ ಬಾಬು ಪುತ್ರ ದೂರದ ಲಂಡನ್ನಲ್ಲಿ ಮೊದಲ ಬಾರಿಗೆ ‘ರಂಗ ಪ್ರವೇಶ’ ಮಾಡಿದ್ದಾರೆ.
1 / 7
ಮಹೇಶ್ ಬಾಬು ಹಾಗೂ ನಮ್ರತಾ ಶಿರೋಡ್ಕರ್ ದಂಪತಿಯ ಇಬ್ಬರು ಮಕ್ಕಳು ಸಹ ಎಳವೆಯಲ್ಲಿಯೇ ಮನರಂಜನಾ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದಾರೆ.
2 / 7
ಮಹೇಶ್ ಬಾಬು ಪುತ್ರಿ ಸಿತಾರಾ ಈಗಾಗಲೇ ಕೆಲವು ಜಾಹೀರಾತುಗಳಲ್ಲಿ ನಟಿಸಿದ್ದಾರೆ, ಒಳ್ಳೆಯ ಡ್ಯಾನ್ಸರ್ ಆಗಿರುವ ಸಿತಾರಾ ರಿಯಾಲಿಟಿ ಶೋಗಳಲ್ಲಿ ಪ್ರದರ್ಶನ ನೀಡಿದ್ದಾರೆ.
3 / 7
ಇದೀಗ ಮಹೇಶ್ ಬಾಬು ಪುತ್ರ ಗೌತಮ್ ಸಹ ನಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಲಂಡನ್ನಲ್ಲಿ ‘ರಂಗಪ್ರವೇಶ’ ಮಾಡಿದ್ದಾರೆ.
4 / 7
ಲಂಡನ್ನ ಪ್ರಸಿದ್ಧ ರಂಗಮಂದಿರದಲ್ಲಿ ‘ರೋಮಿಯೋ ಜೂಲಿಯೆಟ್’ ನಾಟಕವನ್ನು ಪ್ರದರ್ಶಿಸಲಾಗಿದ್ದು, ಗೌತಮ್ ಅದರಲ್ಲಿ ಪಾತ್ರವಹಿಸಿದ್ದಾರೆ.
5 / 7
‘ಜಾಯ್ ಆಫ್ ಡ್ರಾಮಾ’ ಹೆಸರಿನ ರಂಗತಂಡದ ಬೇಸಿಗೆ ಶಿಬಿರದಲ್ಲಿ ಭಾಗಿಯಾಗಿ ಗೌತಮ್ ಈ ನಾಟಕದಲ್ಲಿ ನಟಿಸಿದ್ದಾರೆ. ನಾಟಕವನ್ನು ವೈಶಾಲಿ ಚಕ್ರವರ್ತಿ ನಿರ್ದೇಶಿಸಿದ್ದಾರೆ.
6 / 7
ಪುತ್ರನ ಮೊದಲ ರಂಗ ಪ್ರದರ್ಶನವನ್ನು ನೋಡಲು ಮಹೇಶ್ ಬಾಬು, ನಮ್ರತಾ ಶಿರೋಡ್ಕರ್ ಮತ್ತು ಸಿತಾರಾ ಲಂಡನ್ಗೆ ತೆರಳಿದ್ದರು.
7 / 7
ಮಗನ ಮೊದಲ ರಂಗಪ್ರದರ್ಶನದ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನಮ್ರತಾ, ಹಲವು ಚಿತ್ರಗಳನ್ನು ಸಹ ಶೇರ್ ಮಾಡಿದ್ದಾರೆ.