Homemade Lip Balms: ಚಳಿಗಾಲದಲ್ಲಿ ತುಟಿಯ ರಕ್ಷಣೆಯಾಗಿ ಮನೆಯಲ್ಲಿಯೇ ಲಿಪ್ ಬಾಮ್ ತಯಾರಿಸಿ
TV9 Web | Updated By: ಅಕ್ಷತಾ ವರ್ಕಾಡಿ
Updated on:
Dec 18, 2022 | 6:11 PM
ಚಳಿಗಾಲದಲ್ಲಿ ತ್ವಚೆಯ ಕಾಳಜಿ ವಹಿಸುವುದು ಅತ್ಯಂತ ಅಗತ್ಯವಾಗಿದೆ. ವಿಶೇಷವಾಗಿ ಚಳಿಗಾಲದಲ್ಲಿ ತುಟಿ ಹೆಚ್ಚಾಗಿ ಒಡೆದು ಹೋಗುತ್ತದೆ. ಆದ್ದರಿಂದ ಪ್ರತಿ ದಿನ ತುಟಿಗೆ ಲಿಪ್ ಬಾಮ್ ಹಚ್ಚುವುದು ಅಗತ್ಯವಾಗಿದೆ.
1 / 6
ಚಳಿಗಾಲದಲ್ಲಿ ತ್ವಚೆಯ ಕಾಳಜಿ ವಹಿಸುವುದು ಅತ್ಯಂತ ಅಗತ್ಯವಾಗಿದೆ. ವಿಶೇಷವಾಗಿ ಚಳಿಗಾಲದಲ್ಲಿ ತುಟಿ ಹೆಚ್ಚಾಗಿ ಒಡೆದು ಹೋಗುತ್ತದೆ. ಆದ್ದರಿಂದ ಪ್ರತಿ ದಿನ ತುಟಿಗೆ ಲಿಪ್ ಬಾಂಬ್ ಹಚ್ಚುವುದು ಅಗತ್ಯವಾಗಿದೆ. ಆದ್ದರಿಂದ ಮನೆಯಲ್ಲಿಯೇ ಲಿಪ್ ಬಾಮ್ ತಯಾರಿಸಿ.
2 / 6
ಬೀಟ್ರೂಟ್ ಲಿಪ್ ಬಾಮ್: ಎರಡು ಚಮಚ ಜೇನು ತುಪ್ಪ, ಒಂದು ಚಮಚ ವ್ಯಾಸ್ಲೀನ್ ಹಾಗೂ ತುರಿದ ಬೀಟ್ರೂಟ್ ನ ರಸವನ್ನು ಒಟ್ಟಿಗೆ ಸೇರಿಸಿ ಮಿಶ್ರಣ ಮಾಡಿ. ಇದಾದ ನಂತರ ಈ ಮಿಶ್ರಣವನ್ನು 20 ಸೆಕೆಂಡು ಬಿಸಿ ಮಾಡಿ. ನಂತರ ಒಂದು ಚಿಕ್ಕ ಟಿನ್ ಗೆ ಹಾಕಿ ಫ್ರೀಜ್ ನಲ್ಲಿ ಇಡಿ. ಇದನ್ನು ಪ್ರತಿ ದಿನ ತುಟಿಗೆ ಹಚ್ಚಿ.
3 / 6
ಸ್ಟಾಬೆರಿ ಲಿಪ್ ಬಾಮ್: ಮೊದಲಿಗೆ 6ರಿಂದ 7 ಹನಿಗಳಷ್ಟು ಸ್ಟ್ರಾಬೆರಿ ಪರಿಮಳ ತೈಲ ತೆಗೆದುಕೊಳ್ಳಿ. ಇದಕ್ಕೆ ಸ್ವಲ್ಪ ತೆಂಗಿನಎಣ್ಣೆ, ಜೇನು ತುಪ್ಪ, 3ಚಮಚ ಕೋಕೋ ಎಣ್ಣೆ ಸೇರಿಸಿ ಸ್ವಲ್ಪ ಬಿಸಿ ಮಾಡಿ. ನಂತರ ಒಂದು ಚಿಕ್ಕ ಟಿನ್ ಗೆ ಹಾಕಿ ಫ್ರೀಜ್ ನಲ್ಲಿ ಇಡಿ. ಇದನ್ನು ಪ್ರತಿ ದಿನ ತುಟಿಗೆ ಹಚ್ಚಿ.
4 / 6
ರೋಸ್ ಲಿಪ್ ಬಾಮ್: ಮೊದಲು 1/4 ಕಪ್ ಗುಲಾಬಿ ಎಸಳುಗಳನ್ನು ತೆಗೆದುಕೊಂಡು ಸ್ವಲ್ಪ ಹೊತ್ತು ನೀರಿನಲ್ಲಿ ಹಾಕಿ ಕುದಿಸಿ. ನಂತರ ಇದಕ್ಕೆ ಶಿಯಾ ಬಟರ್ ಸೇರಿಸಿ ಮಿಶ್ರಣ ಮಾಡಿ. ನಂತರ ಒಂದು ಚಿಕ್ಕ ಟಿನ್ ಗೆ ಹಾಕಿ ಫ್ರೀಜ್ ನಲ್ಲಿ ಇಡಿ. ಇದನ್ನು ಪ್ರತಿ ದಿನ ತುಟಿಗೆ ಹಚ್ಚಿ.
5 / 6
ಕೊಕೋ ಬಟರ್ ಲಿಪ್ ಬಾಮ್: ಮೊದಲು ಮಾರುಕಟ್ಟೆಯಲ್ಲಿ ಲಭ್ಯವಿರುವ ಜೇನು ಹನಿಗಳ ಮೇಣವನ್ನು ತೆಗೆದು ಕೊಂಡು ಅದನ್ನು ಬಿಸಿಗೆ ಕರಗಿಸಿ. ನಂತರ ಇದಕ್ಕೆ ಕೊಕೋ ಬಟರ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಇದಕ್ಕೆ ಸ್ವಲ್ಪ ತೆಂಗಿನ ಎಣ್ಣೆಯನ್ನು ಸೇರಿಸಿ. ನಂತರ ಒಂದು ಚಿಕ್ಕ ಟಿನ್ ಗೆ ಹಾಕಿ ಫ್ರೀಜ್ ನಲ್ಲಿ ಇಡಿ. ಇದನ್ನು ಪ್ರತಿ ದಿನ ತುಟಿಗೆ ಹಚ್ಚಿ.
6 / 6
ದ್ರಾಕ್ಷಿ ಲಿಪ್ ಬಾಮ್: ಶಿಯಾ ಬಟರ್, ಹರಳೆಣ್ಣೆ ಹಾಗೂ ತೆಂಗಿನ ಎಣ್ಣೆಯನ್ನು ತೆಗೆದುಕೊಂಡು ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ನಂತರ ಇದಕ್ಕೆ ದ್ರಾಕ್ಷಿ ಹಣ್ಣಿನ ಪ್ಲೇವರ್ ಹಾಕಿ. ನಂತರ ಒಂದು ಚಿಕ್ಕ ಟಿನ್ ಗೆ ಹಾಕಿ 30 ನಿಮಿಷಗಳ ಕಾಲ ಫ್ರೀಜ್ ನಲ್ಲಿ ಇಡಿ.
Published On - 6:11 pm, Sun, 18 December 22