Kannada News Photo gallery Ashwini Puneeth Rajkumar releases 4th edition of Appu Biography Neene Rajakumara by Dr Sharanu Hullur
Puneeth Rajkumar Biography: ‘ನೀನೇ ರಾಜಕುಮಾರ’; ಅಪ್ಪು ಬಯೋಗ್ರಫಿಯ 4ನೇ ಆವೃತ್ತಿ ಬಿಡುಗಡೆ ಮಾಡಿದ ಅಶ್ವಿನಿ ಪುನೀತ್ ರಾಜ್ಕುಮಾರ್
Puneeth Rajkumar | Neene Rajakumara Book: ಪುನೀತ್ ರಾಜ್ಕುಮಾರ್ ಅವರ ಬಾಲ್ಯದಿಂದ ನಿಧನದವರೆಗಿನ ಬದುಕನ್ನು ಲೇಖಕ ಶರಣು ಹುಲ್ಲೂರು ಕಟ್ಟಿಕೊಟ್ಟಿದ್ದಾರೆ. ಈ ಪುಸ್ತಕ ಈಗ ನಾಲ್ಕನೇ ಮುದ್ರಣ ಕಂಡಿದೆ.
Ashwini Puneeth Rajkumar releases 4th edition of Appu Biography Neene Rajakumara by Dr Sharanu Hullur
1 / 6
Ashwini Puneeth Rajkumar releases 4th edition of Appu Biography Neene Rajakumara by Dr Sharanu Hullur
2 / 6
15 ಮಾರ್ಚ್, 2022ರಂದು ಮೊದಲ ಬಾರಿಗೆ ಈ ಪುಸ್ತಕವನ್ನು ಕಿಚ್ಚ ಸುದೀಪ್ ಅವರು ಬಿಡುಗಡೆ ಮಾಡಿದ್ದರು. ಆನಂತರ ಈ ಪುಸ್ತಕವು ಅಮೆಜಾನ್, ಸಪ್ನಾ ಸೇರಿದಂತೆ ಹಲವು ಕಡೆ ಟಾಪ್ ಪಟ್ಟಿಯಲ್ಲಿ ದಾಖಲಾಗಿತ್ತು.
3 / 6
‘ನೀನೇ ರಾಜಕುಮಾರ’ ಈವರೆಗೂ ಸತತ ನಾಲ್ಕು ಮುದ್ರಣಗಳನ್ನು ಕಂಡು ಇನ್ನೂ ದಾಖಲೆ ರೀತಿಯಲ್ಲೇ ಮಾರಾಟವಾಗುತ್ತಿದೆ. ಅಲ್ಲದೇ, ಈ ಪುಸ್ತಕದೊಂದಿಗೆ ಪುನೀತ್ ಅವರ ಸಹಿ ಇರುವಂತಹ ಫೋಟೋ ಮತ್ತು ಬುಕ್ ಮಾರ್ಕ್ ಕೂಡ ಉಚಿತವಾಗಿ ಕೊಡಲಾಗುತ್ತಿದೆ.
4 / 6
ಈ ವರ್ಷದಲ್ಲಿ ಕನ್ನಡದಲ್ಲಿ ಬಂದ ಬಯೋಗ್ರಫಿಯಲ್ಲಿ ಹೆಚ್ಚು ಮಾರಾಟವಾದ ಪುಸ್ತಕ ಎನ್ನುವ ಹೆಗ್ಗಳಿಕೆ ‘ನೀನೇ ರಾಜಕುಮಾರ’ ಪುಸ್ತಕದ್ದು. ಪುನೀತ್ ಅವರ ಬಾಲ್ಯದಿಂದ ನಿಧನದವರೆಗೂ ಅವರ ಬದುಕನ್ನು ಲೇಖಕರು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ.
5 / 6
ಪುನೀತ್ ಅವರ ಸಿನಿಮಾ, ಸಮಾಜಸೇವೆ, ಜೀವನದಲ್ಲಿ ನಡೆದ ಘಟನೆಗಳು ಮತ್ತು ಕನ್ನಡ ಸಿನಿಮಾ ರಂಗದ ಸಂಕ್ಷಿಪ್ತ ಚರಿತ್ರೆ ಕೂಡ ಈ ಪುಸ್ತಕದಲ್ಲಿದೆ. ಅಲ್ಲದೇ, ಅಪರೂಪದ ಫೋಟೋಗಳನ್ನು ನೋಡಬಹುದಾಗಿದೆ.