ರೈತರೊಂದಿಗೆ ಗದ್ದೆಗೆ ಇಳಿದು ಭತ್ತದ ಪೈರು ನಾಟಿ ಮಾಡಿದ ಮಾಲೂರು ಶಾಸಕ ನಂಜೇಗೌಡ
ಬರಗೆಟ್ಟ ಕೋಲಾರ ಜಿಲ್ಲೆಯಲ್ಲಿ ಇತ್ತೀಚಿನ ಮುಂಗಾರು ಹಂಗಾಮಿನಲ್ಲಿ ಭರ್ಜರಿ ಮಳೆಯಾಗುತ್ತಿದೆ. ಪಾತಾಳಕ್ಕೆ ಕುಸಿದಿದ್ದ ಅಂತರ್ಜಲ ಮಟ್ಟ ಮೇಲೆ ಮೇಲಕ್ಕೆ ಉಕ್ಕಿಬರುತ್ತಿದೆ. ಇದರಿಂದ ನೀರಿಲ್ಲದೆ ಕಡುಕಷ್ಟ ಅನುಭವಿಸುವ ರೈತಾಪಿ ಜನ ಸಂತಸಗೊಂಡಿದ್ದಾರೆ. ಕೃಷಿಯನ್ನೇ ನೆಚ್ಚಿಕೊಂಡ ಜನ ಗದ್ದೆ-ತೋಟ-ಹೊಲಗಳಲ್ಲಿ ದುಡಿಯಲು ಮುಂದಾಗಿದ್ದಾರೆ. ಅದಕ್ಕೆ ಜನಪ್ರತಿನಿಧಿಗಳೂ ಸಹ ಸಾಥ್ ನೀಡಿರುವುದು ಸ್ವಾಗತಾರ್ಹವಾಗಿದೆ. ಅದರ ಒಂದು ಝಲಕ್ ಇಲ್ಲಿದೆ.