
ಮಂತ್ರಾಲಯದ ರಾಯರ ಮಠಕ್ಕೆ ಮತ್ತೆ ಹರಿದುಬಂತು ಕೋಟಿ ಗಟ್ಟಲೆ ಕಾಣಿಕೆ

ಮಂತ್ರಾಲಯದಲ್ಲಿ ಕಳೆದ 34 ದಿನಗಳ ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದೆ.

ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದದಲ್ಲಿ ಕಳೆದ 34 ದಿನಗಳಲ್ಲಿ 3 ಕೋಟಿ 79 ಲಕ್ಷದ 62 ಸಾವಿರದ 469 ರೂಪಾಯಿ ಕಾಣಿಕೆ ಸಂಗ್ರಹವಾಗಿದೆ.

99 ಗ್ರಾಂ ಬಂಗಾರ,1 ಕೆ ಜಿ 940 ಗ್ರಾಂ ಬೆಳ್ಳಿ ವಸ್ತುಗಳು ಕಾಣಿಕೆ ರೂಪದಲ್ಲಿ ಬಂದಿವೆ

ಮಠದ ನೂರಾರು ಸಿಬ್ಬಂದಿ ಹುಂಡಿ ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು

ಮಂತ್ರಾಲಯ ರಾಯರ ಮಠದಲ್ಲಿನ ಹುಂಡಿಗಳಿಗೆ ಪ್ರಸಕ್ತ ತಿಂಗಳಲ್ಲಿ ದಾಖಲೆಯ ಮೊತ್ತದ ಕಾಣಿಕೆ ಭಕ್ತರಿಂದ ಬಂದಿದ್ದು, ಇದುವರೆಗೂ ಬಂದ ದೊಡ್ಡ ಮೊತ್ತ ಇದಾಗಿದೆ.