ಗೌತಮಿ ಕುಟುಂಬದಲ್ಲೊಬ್ಬರಾದ ಮ್ಯಾಕ್ಸ್​ ಮಂಜು; ಫೋಟೋ ವೈರಲ್

Updated on: Mar 27, 2025 | 8:28 AM

ಗೌತಮಿ ಜಾಧವ್ ಹಾಗೂ ಉಗ್ರಂ ಮಂಜು ಬಿಗ್ ಬಾಸ್ ಮನೆಯಲ್ಲಿ ಒಟ್ಟಿಗೆ ಇದ್ದರು. ಆ ಬಳಿಕ ಇಬ್ಬರ ಮಧ್ಯೆ ಕಿರಿಕ್ ಆಯಿತು. ಇಬ್ಬರೂ ಅನೇಕ ಬಾರಿ ಕಿತ್ತಾಡಿಕೊಂಡಿದ್ದು ಇದೆ. ಬಿಗ್ ಬಾಸ್​ನಿಂದ ಹೊರ ಬಂದ ಇವರ ಮಧ್ಯೆ ಒಳ್ಳೆಯ ಬಾಂಧವ್ಯ ಮೂಡಿದೆ.

1 / 5
ಗೌತಮಿ ಜಾಧವ್ ಹಾಗೂ ಉಗ್ರಂ ಮಂಜು ಮಧ್ಯೆ ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಕಿತ್ತಾಟ ನಡೆದಿತ್ತು. ಆರಂಭದಲ್ಲಿ ಉತ್ತಮ ಗೆಳೆಯರಾಗಿದ್ದ ಅವರು ನಂತರ ಕಿರಿಕ್ ಮಾಡಿಕೊಂಡರು. ಈಗ ಬಿಗ್ ಬಾಸ್​ನಿಂದ ಹೊರ ಬಂದ ಬಳಿಕ ಇವರ ಮಧ್ಯೆ ಇದ್ದ ಗೆಳೆತನ ಮುಂದುವರಿದಿದೆ.

ಗೌತಮಿ ಜಾಧವ್ ಹಾಗೂ ಉಗ್ರಂ ಮಂಜು ಮಧ್ಯೆ ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಕಿತ್ತಾಟ ನಡೆದಿತ್ತು. ಆರಂಭದಲ್ಲಿ ಉತ್ತಮ ಗೆಳೆಯರಾಗಿದ್ದ ಅವರು ನಂತರ ಕಿರಿಕ್ ಮಾಡಿಕೊಂಡರು. ಈಗ ಬಿಗ್ ಬಾಸ್​ನಿಂದ ಹೊರ ಬಂದ ಬಳಿಕ ಇವರ ಮಧ್ಯೆ ಇದ್ದ ಗೆಳೆತನ ಮುಂದುವರಿದಿದೆ.

2 / 5

ಗೌತಮಿ ಜಾಧವ್ ಅವರು ವನದುರ್ಗಿಯನ್ನು ಅಪಾರವಾಗಿ ನಂಬುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ವನ ದುರ್ಗ ದೇವಾಲಯ ಇದೆ. ಇಲ್ಲಿಗೆ ಅವರು ಅನೇಕ ಬಾರಿ ಭೇಟಿ ಕೊಟ್ಟಿದ್ದರು. ಈಗ ಮಂಜು ಹಾಗೂ ಗೌತಮಿ ಕುಟುಂಬ ಒಟ್ಟಾಗಿ ಇಲ್ಲಿಗೆ ತೆರಳಿದೆ.

3 / 5

ಉಗ್ರಂ ಮಂಜು ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ‘ಕುಟುಂಬ ಸಮೇತವಾಗಿ ವನದುರ್ಗ ತಾಯಿ ಆಶೀರ್ವಾದ ಪಡೆದ ಕ್ಷಣ’ ಎಂಬ ಕ್ಯಾಪ್ಶನ್ ನೀಡಿದ್ದು ಗಮನ ಸೆಳೆದಿದೆ.

4 / 5

ಮಂಜು ತಂದೆ ತಾಯಿ ಜೊತೆ ಗೌತಮಿ ಹಾಗೂ ಅವರ ಪತಿ ಅಭಿಷೇಕ್ ಪೋಸ್ ಕೊಟ್ಟಿದ್ದಾರೆ. ಈ ಫೋಟೋನೂ ಉಗ್ರಂ ಮಂಜು ಅವರು ಪೋಸ್ಟ್ ಮಾಡಿದ್ದಾರೆ. ಇದು ಇವರ ಮಧ್ಯೆ ಬೆಳೆದಿರುವ ಬಾಂಧವ್ಯಕ್ಕೆ ಸಾಕ್ಷಿ ಆಗಿದೆ.

5 / 5

ಉಗ್ರಂ ಮಂಜು ಅವರು ದೊಡ್ಡ ಮಟ್ಟದಲ್ಲಿ ಖ್ಯಾತಿ ಪಡೆದಿದ್ದಾರೆ. ಅವರ ನಟನೆಯನ್ನು ಅನೇಕರು ಮೆಚ್ಚಿಕೊಂಡಿದ್ದಾರೆ. ಅವರಿಗೆ ಬಿಗ್ ಬಾಸ್​ನಿಂದ ಜನಪ್ರಿಯತೆ ಹೆಚ್ಚಿದ್ದು, ಸಾಕಷ್ಟು ಆಫರ್​ಗಳು ಅವರನ್ನು ಹುಡುಕಿ ಬರುತ್ತಿವೆ.

Published On - 8:27 am, Thu, 27 March 25

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us