ನಟಿ ಮೇಘನಾ ರಾಜ್ ಅವರಿಗೆ ಇಂದು (ಮೇ 3) ಬರ್ತ್ಡೇ ಸಂಭ್ರಮ. ಅವರಿಗೆ ಎಲ್ಲ ಕಡೆಗಳಿಂದ ಬರ್ತ್ಡೇ ವಿಶ್ ಬರುತ್ತಿದೆ. ಈ ವಿಶೇಷ ದಿನದಂದು ಅವರು ಪತಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ.
ಮೇಘನಾ ರಾಜ್ ಅವರು ಪತಿ ಚಿರಂಜೀವಿ ಸರ್ಜಾ ಫೋಟೋನ ಶೇರ್ ಮಾಡಿಕೊಂಡಿದ್ದಾರೆ. ಹುಟ್ಟುಹಬ್ಬದ ದಿನ ಪತಿ ಇಲ್ಲ ಎನ್ನುವ ನೋವು ಅವರನ್ನು ಕಾಡಿದೆ.
ಮೇಘನಾ ರಾಜ್ ಅವರ ಪತಿ ಚಿರಂಜೀವಿ 2020ರಲ್ಲಿ ಮೃತಪಟ್ಟರು. ಇದು ಅವರಿಗೆ ಶಾಕ್ ತಂದಿತ್ತು. ಈ ಸಾವನ್ನು ಯಾರೂ ಊಹಿಸಿರಲಿಲ್ಲ. ಇದಾದ ಬಳಿಕ ಮೇಘನಾ ರಾಜ್ ಅವರು ಚಿತ್ರರಂಗದಿಂದ ದೂರ ಉಳಿದರು.
ಮಗು ರಾಯನ್ ರಾಜ್ ಸರ್ಜಾ ಜನಿಸಿದ ನಂತರದಲ್ಲಿ ಮೇಘನಾ ಅವರ ಬದುಕಲ್ಲಿ ಖುಷಿ ಮೂಡಿದೆ. ಹೀಗಾಗಿ, ಅವರು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ‘ತತ್ಸಮ ತದ್ಭವ’ ಎಂದು ಚಿತ್ರಕ್ಕೆ ಹೆಸರು ಇಡಲಾಗಿದೆ.
ಚಿರಂಜೀವಿ ಸರ್ಜಾ ಮೃತಪಟ್ಟ ಬಳಿಕ ಅವರ ಸಹೋದರ ಧ್ರುವ ಸರ್ಜಾ ಕಣ್ಣೀರಲ್ಲಿ ಕೈತೊಳೆದರು. ಅವರು ಈಗ ಕೊಂಚ ಚೇತರಿಸಿಕೊಂಡಿದ್ದಾರೆ.