ಮೇಘನಾ ಬ್ಯಾಚುಲರೇಟ್ ಪಾರ್ಟಿ ಮಾಡಿದ ‘ಸೀತಾ ರಾಮ’ ಗ್ಯಾಂಗ್
Meghana Shankarappa: ಮೇಘನಾ ಶಂಕರಪ್ಪ ಅವರು ಜಯಂತ್ ಕುಮಾರಸ್ವಾಮಿಯನ್ನು ವಿವಾಹ ಆಗುತ್ತಿದ್ದಾರೆ. ಈ ಫೋಟೋಗಳನ್ನು ಮೇಘನಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈಗ ಅವರ ಬ್ಯಾಚುಲರೇಟ್ ಪಾರ್ಟಿ ನಡೆದಿದೆ. ‘ಸೀತಾ ರಾಮ’ ಟೀಂ ಈ ಪಾರ್ಟಿಯನ್ನು ಆಯೋಜನೆ ಮಾಡಿತ್ತು ಅನ್ನೋದು ವಿಶೇಷ. ಆ ಫೋಟೋಗಳು ಇಲ್ಲಿವೆ.
1 / 5
‘ಸೀತಾ ರಾಮ’ ಧಾರಾವಾಹಿ ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿದೆ. ಈ ಧಾರಾವಾಹಿ ಎಲ್ಲರ ಗಮನ ಸೆಳೆಯುತ್ತಿದೆ. ಈಗ ‘ಸೀತಾ ರಾಮ’ ಧಾರಾವಾಹಿಯಲ್ಲಿ ನಟಿಸುತ್ತಿರುವ ಮೇಘನಾ ಅವರಿಗೆ ಕಂಗಣ ಭಾಗ್ಯ ಕೂಡಿ ಬಂದಿದೆ.
2 / 5
ಮೇಘನಾ ಶಂಕರಪ್ಪ ಅವರು ಜಯಂತ್ ಕುಮಾರಸ್ವಾಮಿ ಎಂಬುವವರನ್ನು ವಿವಾಹ ಆಗುತ್ತಿದ್ದಾರೆ. ಈ ಫೋಟೋಗಳನ್ನು ಮೇಘನಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈಗ ಅವರ ಬ್ಯಾಚುಲರೇಟ್ ಪಾರ್ಟಿ ನಡೆದಿದೆ.
3 / 5
‘ಸೀತಾ ರಾಮ’ ಧಾರಾವಾಹಿಯಲ್ಲಿ ನಟಿಸುತ್ತಿರುವ ಪೂಜಾ ಲೋಕೇಶ್, ಸಿಂಧು ರಾವ್, ವೈಷ್ಣವಿ ಗೌಡ ಅವರು ಒಟ್ಟಾಗಿ ಸೇರಿ ಮೇಘನಾ ಅವರ ಬ್ಯಾಚುಲೇರಟ್ ಪಾರ್ಟಿ ಮಾಡಿದ್ದಾರೆ. ಈ ಫೋಟೋಗಳು ಗಮನ ಸೆಳೆದಿವೆ.
4 / 5
ಧಾರಾವಾಹಿಯಲ್ಲಿ ಪೂಜಾ ಲೋಕೇಶ್ ವಿಲನ್. ವೈಷ್ಣವಿಯನ್ನು ಕಂಡರೆ ಅವರಿಗೆ ಆಗೋದಿಲ್ಲ. ಆದರೆ, ನಿಜ ಜೀವನದಲ್ಲಿ ಹಾಗಿಲ್ಲ. ಅವರ ಮಧ್ಯೆ ಒಳ್ಳೆಯ ಫ್ರೆಂಡ್ಶಿಪ್ ಇದೆ. ಈಗ ವೈಷ್ಣವಿ ಹಂಚಿಕೊಂಡಿರುವ ಫೋಟೋಗಳೇ ಇದಕ್ಕೆ ಸಾಕ್ಷಿ.
5 / 5
ರೆಸಾರ್ಟ್ ಒಂದರಲ್ಲಿ ಈ ಬ್ಯಾಚುಲರೇಟ್ ಪಾರ್ಟಿ ನಡೆದಿದೆ ಎನ್ನಲಾಗಿದೆ. ಸದ್ಯ ‘ಸೀತಾ ರಾಮ’ ಧಾರಾವಾಹಿ ಸಾಕಷ್ಟು ಟ್ವಿಸ್ಟ್ಗಳನ್ನು ಪಡೆದು ಸಾಗುತ್ತಿದೆ. ಈ ಧಾರಾವಾಹಿ ಅನೇಕರಿಗೆ ಇಷ್ಟ ಆಗಿದೆ. ಇವರ ಬಾಂಡಿಂಗ್ ನೋಡಿ ಜನರಿಗೆ ಇಷ್ಟ ಆಗಿದೆ.