
ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಮದುವೆಗೆ ಕ್ಷಣಗಣನೆ ಆರಂಭ ಆಗಿದೆ. ಜೂನ್ 5ರಂದು ಅದ್ದೂರಿಯಾಗಿ ಇವರ ಮದುವೆ ನೆರವೇರಲಿದೆ. ಮದುವೆಗೂ ಮುನ್ನ ಹಲವು ಶಾಸ್ತ್ರಗಳು ನಡೆದಿವೆ.

ಮೆಹಂದಿ ಶಾಸ್ತ್ರದ ಕಾರ್ಯಕ್ರಮಗಳು ಬಹಳ ಅದ್ದೂರಿಯಾಗಿ ನೆರವೇರಿದೆ. ಈ ವೇಳೆ ಅವಿವಾ ಅವರು ಫೋಟೋಗೆ ಪೋಸ್ ನೀಡಿದ್ದಾರೆ.

ಅಭಿಷೇಕ್ ಹಾಗೂ ಅವಿವಾ ಕಳೆದ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಇಬ್ಬರೂ ಪರಸ್ಪರ ಪರಿಚಯಗೊಂಡು, ನಂತರ ಇಬ್ಬರ ಮಧ್ಯೆ ಪ್ರಿತಿ ಮೊಳೆಯಿತು. ಈಗ ಇವರು ಮದುವೆ ಆಗುತ್ತಿದ್ದಾರೆ.

ಕಾಸ್ಟ್ಯೂಮ್ ಡಿಸೈನರ್ ಆಗಿ ಫ್ಯಾಷನ್ ಕ್ಷೇತ್ರದಲ್ಲಿ ಅವಿವಾ ಬ್ಯುಸಿ ಆಗಿದ್ದಾರೆ. ಇವರಿಗೂ ದೊಡ್ಡ ಅಭಿಮಾನಿ ಬಳಗ ಇದೆ.

ಭಾರತದ ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿಡಪ ಅವರ ಮಗಳು ಅವಿವ ಬಿಡಪ. ಅವಿವ ಕೂಡ ತಂದೆಯಂತೆ ಫ್ಯಾಷನ್ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ.