- Kannada News Photo gallery Meghana Raj Priyanka Upendra And other celebrities in Sumalatha Home ahead of Abhishke Aviva Marriage
ಅಭಿಷೇಕ್ ಮನೆಯಲ್ಲಿ ಮದುವೆ ಸಂಭ್ರಮ; ಮೇಘನಾ ರಾಜ್ ಸೇರಿ ಅನೇಕೆ ಸೆಲೆಬ್ರಿಟಿಗಳು ಭಾಗಿ
Abhishek Ambareesh-Aviva Marriage: ಮೇಘನಾ ರಾಜ್, ಪ್ರಿಯಾಂಕಾ ಉಪೇಂದ್ರ ಮೊದಲಾದ ಸೆಲೆಬ್ರಿಟಿಗಳು ಸುಮಲತಾ ಜೊತೆ ನಿಂತು ಪೋಸ್ ನೀಡಿದ್ದಾರೆ. ಈ ಫೋಟೋ ವೈರಲ್ ಆಗಿದೆ.
Updated on:Jun 03, 2023 | 1:18 PM

ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಬಿಡಪ ಮದುವೆಗೆ ಕ್ಷಣಗಣನೆ ಆರಂಭ ಆಗಿದೆ. ಜೂನ್ 5ರಂದು ಅದ್ದೂರಿಯಾಗಿ ಬೆಂಗಳೂರಿನಲ್ಲಿ ವಿವಾಹ ಕಾರ್ಯ ನಡೆಯಲಿದೆ. ಅದಕ್ಕೂ ಮೊದಲು ಹಲವು ಶಾಸ್ತ್ರಗಳನ್ನು ಮಾಡಲಾಗುತ್ತಿದೆ.

ಅಭಿಷೇಕ್ ತಾಯಿ ಸುಮಲತಾ ಅವರು ಚಿತ್ರರಂಗದ ಜೊತೆ ನಂಟು ಹೊಂದಿದ್ದಾರೆ. ಅಂಬರೀಷ್ ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆ ದೊಡ್ಡದು. ಅಭಿಷೇಕ್ ಕೂಡ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹೀಗಾಗಿ, ಅಭಿ ಮದುವೆಯಲ್ಲಿ ಸೆಲೆಬ್ರಿಟಿಗಳ ದಂಡು ನೆರೆದಿದೆ.

ಅಭಿಷೇಕ್ ಅಂಬರೀಷ್ ಅವರ ಮನೆಯಲ್ಲಿ ಈಗಾಗಲೇ ಮದುವೆ ಸಂಭ್ರಮ ಶುರುವಾಗಿದೆ. ಸಾಕಷ್ಟು ಸೆಲೆಬ್ರಿಟಿಗಳು ಈ ಮದುವೆಗೆ ಹಾಜರಿ ಹಾಕಲಿದ್ದಾರೆ.

ಮೇಘನಾ ರಾಜ್, ಪ್ರಿಯಾಂಕಾ ಉಪೇಂದ್ರ ಮೊದಲಾದ ಸೆಲೆಬ್ರಿಟಿಗಳು ಸುಮಲತಾ ಜೊತೆ ನಿಂತು ಪೋಸ್ ನೀಡಿದ್ದಾರೆ. ಈ ಫೋಟೋ ವೈರಲ್ ಆಗಿದೆ.

ಜೂನ್ 2ರಂದು ಮೆಹೆಂದಿ ಶಾಸ್ತ್ರ ನಡೆದಿದೆ. ಅಭಿಷೇಕ್ ಅಂಬರೀಷ್ ಅವರು ಕೈ ಮೇಲೆ ಅವಿವಾ, ಸುಮಲತಾ, ರೆಬೆಲ್ ಹಾಗೂ ಮಂಡ್ಯದ ಹೆಸರನ್ನು ಬರೆದುಕೊಂಡಿದ್ದಾರೆ.
Published On - 1:17 pm, Sat, 3 June 23




