
ನಟಿ ಮಿಲನಾ ನಾಗರಾಜ್ ಅವರು ಆಗಾಗ ಪತಿ ಡಾರ್ಲಿಂಗ್ ಕೃಷ್ಣ ಜೊತೆ ವಿದೇಶ ಪ್ರಯಾಣ ಮಾಡುತ್ತಾರೆ. ಈಗ ಅವರು ಸಮಯ ಮಾಡಿಕೊಂಡು ಫ್ರಾನ್ಸ್ಗೆ ಹಾರಿದ್ದಾರೆ.

ಐಫೆಲ್ ಟವರ್ ಎದುರು ಮಿಲನಾ ನಾಗರಾಜ್ ಅವರು ಪೋಸ್ ನೀಡಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮಿಲನಾ ನಾಗರಾಜ್ ಅವರು ಕೆಂಪು ಬಣ್ಣದ ಡ್ರೆಸ್ ತೊಟ್ಟಿದ್ದಾರೆ. ಈ ಫೋಟೋಗೆ ಲಕ್ಷಾಂತರ ಲೈಕ್ಸ್ ಬಂದಿದೆ. ಫ್ಯಾನ್ಸ್ ಇದಕ್ಕೆ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಇತ್ತೀಚೆಗೆ ಮಿಲನಾ ನಾಗರಾಜ್ ಅವರ ಪತಿ ಡಾರ್ಲಿಂಗ್ ಕೃಷ್ಣ ಅವರು ‘ಲವ್ ಮಾಕ್ಟೇಲ್ 3’ ಘೋಷಣೆ ಮಾಡಿದ್ದರು. ಇದಕ್ಕೆ ಅನೇಕರಿಂದ ಟೀಕೆ ವ್ಯಕ್ತವಾಗಿತ್ತು.

ಐಫೆಲ್ ಟವರ್ ಎದುರು ಮಿಲನಾ ನಾಗರಾಜ್