ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಅವರು ಪಡ್ಡೆಗಳ ಕಣ್ಣು ಕುಕ್ಕುತ್ತಿದ್ದಾರೆ. ಅವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ದಿನದಿನವೂ ಅವರ ಫ್ಯಾನ್ ಫಾಲೋಯಿಂಗ್ ಹೆಚ್ಚುತ್ತಿದೆ.
ಜಾನ್ವಿ ಕಪೂರ್ ಅವರಿಗೆ ಫೋಟೋಗಳ ಬಗ್ಗೆ ಹೆಚ್ಚು ಕ್ರೇಜ್ ಇದೆ. ಬಣ್ಣ ಬಣ್ಣದ ಬಟ್ಟೆ ಧರಿಸಿ ಅವರು ಫೋಟೋಶೂಟ್ ಮಾಡಿಸುತ್ತಾರೆ. ಅಭಿಮಾನಿಗಳಿಗಾಗಿ ಹೊಸ ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಾರೆ.
ಜಾನ್ವಿ ಕಪೂರ್ ಅವರು ನಟನೆಗಿಂತಲೂ ಹೆಚ್ಚಾಗಿ ಗ್ಲಾಮರ್ ಮೂಲಕವೇ ಕಣ್ಣು ಕುಕ್ಕುತ್ತಿದ್ದಾರೆ. ಅವರು ಪೋಸ್ ನೀಡುವ ಪರಿ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಅವರ ಪೋಸ್ಟ್ಗೆ ನಾನಾ ಬಗೆಯ ಕಮೆಂಟ್ಗಳು ಬರುತ್ತಿವೆ.
ಸಿನಿಮಾ ವಿಚಾರದಲ್ಲಿ ಜಾನ್ವಿ ಕಪೂರ್ ಅವರಿಗೆ ಇನ್ನೂ ಹೇಳಿಕೊಳ್ಳುವಂತಹ ಗೆಲುವು ಸಿಕ್ಕಿಲ್ಲ. ಸ್ಟಾರ್ ಕಿಡ್ ಎಂಬ ಕಾರಣಕ್ಕೆ ಅವರಿಗೆ ಅವಕಾಶಗಳು ಹರಿದುಬರುತ್ತಿವೆ. ಸದ್ಯ ಅವರ ಕೈಯಲ್ಲಿ ಹಲವು ಆಫರ್ಗಳಿವೆ.
ಜಾನ್ವಿ ಕಪೂರ್ ಅವರದ್ದು ಫಿಲ್ಮಿ ಹಿನ್ನೆಲೆಯ ಕುಟುಂಬ. ಅವರ ವೃತ್ತಿಜೀವನಕ್ಕೆ ತಂದೆ ಬೋನಿ ಕಪೂರ್ ಅವರು ಬೆಂಬಲವಾಗಿ ನಿಂತಿದ್ದಾರೆ. ಆದರೂ ಒಂದು ದೊಡ್ಡ ಯಶಸ್ಸಿಗಾಗಿ ಜಾನ್ವಿ ಕಾದಿದ್ದಾರೆ.