ಜಗದೀಶ್ ಕಟ್ಟಿದ ಸುಳ್ಳಿನ ಮಹಲನ್ನು ಕೆಡವಿದ ಮೋಕ್ಷಿತಾ ಪೈ

Updated on: Oct 08, 2024 | 11:50 AM

ಜಗದೀಶ್​ ಮಾಡುವ ತಂತ್ರ, ಕುತಂತ್ರಗಳು ಒಂದೆರಡಲ್ಲ. ಬಿಗ್​ ಬಾಸ್​ ಆಟಕ್ಕಾಗಿ ಅವರು ಯಾವ ರೀತಿ ಬೇಕಾದರೂ ಬಣ್ಣ ಬದಲಾಯಿಸುತ್ತಾರೆ. ಆದರೆ ಇದಕ್ಕೆಲ್ಲ ಮೋಕ್ಷಿತಾ ಸೊಪ್ಪು ಹಾಕಿಲ್ಲ.

1 / 5
ಜಗದೀಶ್ ಅವರು ಬಿಗ್ ಬಾಸ್ ಮನೆಯಲ್ಲಿ ಮೈಂಡ್​ಗೇಮ್ ಆಡುತ್ತಿದ್ದಾರೆ. ಒಬ್ಬರ ವಿರುದ್ಧ ಮತ್ತೊಬ್ಬರನ್ನು ಎತ್ತಿ ಕಟ್ಟುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಈ ಕಾರಣಕ್ಕೆ ಅವರು ಸಾಕಷ್ಟು ಚರ್ಚೆ ಆಗಿದ್ದೂ ಇದೆ. ಈಗ ಜಗದೀಶ್ ಕಟ್ಟಿದ ಸುಳ್ಳಿನ ಮಹಲು ಕೆಳಕ್ಕೆ ಬಿದ್ದಿದೆ.

ಜಗದೀಶ್ ಅವರು ಬಿಗ್ ಬಾಸ್ ಮನೆಯಲ್ಲಿ ಮೈಂಡ್​ಗೇಮ್ ಆಡುತ್ತಿದ್ದಾರೆ. ಒಬ್ಬರ ವಿರುದ್ಧ ಮತ್ತೊಬ್ಬರನ್ನು ಎತ್ತಿ ಕಟ್ಟುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಈ ಕಾರಣಕ್ಕೆ ಅವರು ಸಾಕಷ್ಟು ಚರ್ಚೆ ಆಗಿದ್ದೂ ಇದೆ. ಈಗ ಜಗದೀಶ್ ಕಟ್ಟಿದ ಸುಳ್ಳಿನ ಮಹಲು ಕೆಳಕ್ಕೆ ಬಿದ್ದಿದೆ.

2 / 5

ಬಿಗ್ ಬಾಸ್ ಮನೆಯಲ್ಲಿ ನೀಡಲಾದ ಕಲುಷಿತ ನೀರಿನಿಂದ ಭೇದಿ ಆಗಿದೆ ಎಂದು ಜಗದೀಶ್ ಅವರು ಆರೋಪಿಸಿದ್ದಾರೆ. ಇದು ಪಕ್ಕಾ ಪ್ಲ್ಯಾನ್ ಮಾಡಿ ಮಾಡಿರೋ ಕುಂತಂತ್ರ. ಆದರೆ, ಇದಕ್ಕೆ ಮೋಕ್ಷಿತಾ ಸೊಪ್ಪು ಹಾಕಿಲ್ಲ.

3 / 5

‘ನಿಮಗೆ ಭೇದಿ ಆಯ್ತಾ? ನನಗೆ ಆ ರೀತಿ ಏನು ಆಗೇ ಇಲ್ವಲ್ಲ ಸರ್’ ಎಂದರು ಮೋಕ್ಷಿತಾ. ಇದನ್ನು ಕೇಳಿ ಜಗದೀಶ್​​ಗೆ ಸಿಟ್ಟೇ ಬಂದು ಹೋಯ್ತು. ‘ನೀವೇನು ಸತ್ಯ ಹರಿಚಂದ್ರನಾ? ಒಂದು ಸುಳ್ಳು ಹೇಳಿ’ ಎಂದು ಕೋರಿದರು.

4 / 5

ನಂತರ ಕ್ಯಾಪ್ಟನ್ ಹಂಸ ಎದುರು ಪ್ರತಿಭಟನೆ ಮಾಡೋಕೆ ಶುರು ಮಾಡಿದರು ಜಗದೀಶ್. ತಮಗೆ ಭೇದಿ ಆಗಿದೆ, ಅದಕ್ಕೆ ನೀವು ಕೊಟ್ಟ ನೀರು ಕಾರಣ ಎಂದರು. ಇದನ್ನು ಹೇಳುವಾಗ ಮೋಕ್ಷಿತಾ ಅವರು ನಗುತ್ತಿದ್ದರು. ಇದರಿಂದ ಜಗದೀಶ್ ಹೇಳುತ್ತಿರೋ ವಿಚಾರದಲ್ಲಿ ಸತ್ಯ ಇಲ್ಲ ಎಂಬುದು ಗೊತ್ತಾಗಿದೆ.

5 / 5

ಮೋಕ್ಷಿತಾ ಅವರು ತಮ್ಮ ಕ್ಯೂಟ್ ಲುಕ್ ಮೂಲಕ ‘ಬಿಗ್ ಬಾಸ್’ ಮನೆಯಲ್ಲಿ ಗಮನ ಸೆಳೆಯುತ್ತಿದ್ದಾರೆ. ಈ ಬಾರಿ ಸ್ವರ್ಗ vs ನರಕ ಎನ್ನುವ ಕಾನ್ಸೆಪ್ಟ್ ಇದ್ದು, ಮೋಕ್ಷಿತಾ ಅವರು ನರಕದಲ್ಲಿ ಇದ್ದಾರೆ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us