- Kannada News Photo gallery More than a hundred olive ridley sea turtle hatchlings in karwar, Here are the photos
ಕಾರವಾರ: ಕಡಲು ಸೇರಿದ ನೂರಕ್ಕೂ ಹೆಚ್ಚು ಆಲಿವ್ ರಿಡ್ಲಿ ಆಮೆ ಮರಿಗಳು; ಫೋಟೋಸ್ ಇಲ್ಲಿವೆ
ಉತ್ತರ ಕನ್ನಡ ಜಿಲ್ಲೆಯ ಕಡಲತೀರ ಅನೇಕ ಅಪರೂಪದ ಜೀವಸಂಕುಲಗಳ ವಾಸಸ್ಥಾನವಾಗಿದೆ. ಅದರಲ್ಲೂ ಅಳಿವಿನ ಅಂಚಿನಲ್ಲಿರುವ ಆಲಿವ್ ರಿಡ್ಲೆ(Olive Ridley) ಆಮೆಗಳು ಕಡಲತೀರವನ್ನ ಸಂತಾನೋತ್ಪತ್ತಿ ತಾಣವನ್ನಾಗಿಸಿಕೊಂಡು, ಇದೀಗ ನೂರಕ್ಕೂ ಹೆಚ್ಚು ಆಲಿವ್ ರಿಡ್ಲೆ ಆಮೆ ಮರಿಗಳು ಕಡಲು ಸೇರಿದವು.
Updated on:May 17, 2023 | 11:48 AM

ಉತ್ತರ ಕನ್ನಡ ಜಿಲ್ಲೆಯ ಕಡಲತೀರ ಅನೇಕ ಅಪರೂಪದ ಜೀವಸಂಕುಲಗಳ ವಾಸಸ್ಥಾನವಾಗಿದೆ. ಅದರಲ್ಲೂ ಅಳಿವಿನ ಅಂಚಿನಲ್ಲಿರುವ ಆಲಿವ್ ರಿಡ್ಲೆ(Olive Ridley) ಆಮೆಗಳು ಕಡಲತೀರವನ್ನ ಸಂತಾನೋತ್ಪತ್ತಿ ತಾಣವನ್ನಾಗಿಸಿಕೊಂಡಿವೆ.

ಇನ್ನೂ ಕರ್ನಾಟಕದ ಕಡಲತೀರ ಪ್ರದೇಶದಲ್ಲಿ ಮೂರು ಪ್ರಬೇಧದ ಆಮೆಗಳನ್ನ ನಾವು ಕಾಣಬಹುದು. ಗ್ರೀನ ಟರ್ಟಲ್, ಹಾಕ್ ಬಿಲ್ಡ್, ಆಲಿವ್ ರಿಡ್ಲಿ ಹೀಗೆ ಮೂರು ಪ್ರಬೇಧಗಳಿವೆ. ಅದರಲ್ಲಿ ಆಲಿವ್ ರಿಡ್ಲಿ ಆಮೆ ಉತ್ತರ ಕನ್ನಡ ಜಿಲ್ಲೆಯ ಕಡಲತೀರವನ್ನ ತನ್ನ ಸಂತಾನೋತ್ಪತ್ತಿ ತಾಣವನ್ನಾಗಿ ಆಯ್ಕೆ ಮಾಡಿಕೊಂಡಿದೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ತಿಳ್ಮಾತಿ ಬೀಚ್ (Tilmati Beach) ಬಳಿ ನೂರಕ್ಕೂ ಹೆಚ್ಚು ಆಲಿವ್ ರಿಡ್ಲಿ ಆಮೆ ಮರಿಗಳು ಕಡಲು ಸೇರಿದವು.

ತಿಂಗಳ ಹಿಂದೆ ಕಡಲತೀರದಲ್ಲಿ ಮೊಟ್ಟೆ ಇಟ್ಟು ಆಲಿವ್ ರಿಡ್ಲಿ ಆಮೆಗಳು ತೆರಳಿದ್ದವು, ಇದೀಗ ಮರಿ ಹಾಕಿವೆ.

ಅರಣ್ಯಾಧಿಕಾರಿಗಳು ಮೊಟ್ಟೆಗಳನ್ನು ಸಂರಕ್ಷಣೆ ಮಾಡಿ, ಆಮೆ ಮರಿಗಳನ್ನ ಕಡಲು ಸೇರಿಸಿದ್ದಾರೆ.

ಅಳಿವಿನ ಅಂಚಿನಲ್ಲಿರುವ ಆಲಿವ್ ರಿಡ್ಲಿ ಆಮೆಗಳನ್ನ ರಕ್ಷಣೆ ಮಾಡಿ, ಈ ಕುರಿತು ಜನರಿಗೆ ಜಾಗೃತಿ ಮೂಡಿಸಿ ಅರಣ್ಯಾಧಿಕಾರಿಗಳು ಕಡಲಿಗೆ ಬಿಟ್ಟಿದ್ದಾರೆ.

ಆರ್‌ಎಪ್‌ಓ ಪ್ರಮೋದ್ ನೇತೃತ್ವದಲ್ಲಿ ಈ ಕುರಿತು ಜಾಗೃತಿ ಮೂಡಿಸಿ, ಆಮೆ ಮರಿಗಳನ್ನ ಕಡಲು ಸೇರಿಸಿದರು.
Published On - 11:39 am, Wed, 17 May 23
