ಈ ವಾರ ಬಿಡುಗಡೆ ಆಗಲಿವೆ ಸಖತ್ ಸಿನಿಮಾಗಳು, ಇಲ್ಲಿದೆ ಪಟ್ಟಿ

Updated on: Jul 10, 2025 | 2:46 PM

Movies releasing: ಮತ್ತೊಂದು ಶುಕ್ರವಾರ ಬಂದಿದೆ. ಚಿತ್ರಮಂದಿರಗಳಿಗೆ ಹೊಸ ಸಿನಿಮಾಗಳು ದಾಂಗುಡಿ ಇಟ್ಟಿವೆ. ಈ ವಾರ ಕನ್ನಡದಲ್ಲಿ ಕೆಲವೇ ಸಿನಿಮಾಗಳು ಬಿಡುಗಡೆ ಆಗಲಿಕ್ಕಿವೆ ಸ್ಟಾರ್ ನಟರ ಸಿನಿಮಾಗಳು ಅಲ್ಲವಾದರೂ ನಿರೀಕ್ಷೆ ಹುಟ್ಟಿಸಿರುವ ಕೆಲ ಸಿನಿಮಾಗಳು ಈ ವಾರ ತೆರೆಗೆ ಬರಲಿವೆ. ಇನ್ನು ಪರ ಭಾಷೆಯ ಕೆಲವು ಒಳ್ಳೆಯ ಸಿನಿಮಾಗಳೂ ಸಹ ಈ ವಾರ ಬಿಡುಗಡೆ ಆಗಲಿದ್ದು, ಇಲ್ಲಿದೆ ನೋಡಿ ಪಟ್ಟಿ...

1 / 5
ಕಾಟನ್​ಪೇಟೆ ಗೇಟ್ ಹೆಸರಿನ ಆಕ್ಷನ್ ಥ್ರಿಲ್ಲರ್ ಸಿನಿಮಾ ಒಂದು ಈ ವಾರ ಬಿಡುಗಡೆ ಆಗುತ್ತಿದೆ. ಸಿನಿಮಾ ಅನ್ನು ವೈ ರಾಜ್​ಕುಮಾರ್ ನಿರ್ದೇಶಿಸಿದ್ದಾರೆ. ಇದರ ಜೊತೆಗೆ ‘ಲಕ್ಷ್ಯ’ ಮತ್ತು ‘ಜಾವಾ ಕಾಫಿ’ ಹೆಸರಿನ ಸಿನಿಮಾ ಸಹ ಇದೇ ವಾರ ಬಿಡುಗಡೆ ಆಗುತ್ತಿದೆ.

2 / 5
ರಾಷ್ಟ್ರಪ್ರಶಸ್ತಿ ವಿಜೇತ ಮಂಸೋರೆ ನಿರ್ದೇಶನ ಮಾಡಿರುವ ‘ದೂರ ತೀರ ಯಾನ’ ಸಿನಿಮಾ ಇದೇ ಶುಕ್ರವಾರ ಬಿಡುಗಡೆ ಆಗುತ್ತಿದೆ. ಸಿನಿಮಾದ ಟ್ರೈಲರ್ ನಿರೀಕ್ಷೆ ಹುಟ್ಟಿಸುವಂತಿದೆ. ನಟ ಸುದೀಪ್ ಸಹ ಟ್ರೈಲರ್ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ.

3 / 5
ಸಿನಿಮಾರಂಗದವರ ಕತೆಯನ್ನು ಹೇಳುವ ‘ಫಸ್ಟ್ ಡೇ ಫಸ್ಟ್ ಶೋ’ ಹೆಸರಿನ ಸಿನಿಮಾ ಈ ವಾರ ಬಿಡುಗಡೆ ಆಗುತ್ತಿದೆ. ಸಿನಿಮಾ ಮಾಡಲು ಮುಂದಾಗುವವರು ಪಡುವ ಪಾಡಿನ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾದ ಟ್ರೈಲರ್ ಗಮನ ಸೆಳೆದಿದೆ.

4 / 5
ಪ್ರತಿಭಾವಂತ ನಟ ರಾಜ್​ಕುಮಾರ್ ರಾವ್ ನಟಿಸಿರುವ ‘ಮಾಲಿಕ್’ ಹಿಂದಿ ಸಿನಿಮಾ ಈ ವಾರ ತೆರೆಗೆ ಬರಲಿದೆ. ಭೂಗತ ಜಗತ್ತಿನ ಕತೆಯನ್ನು ಸಿನಿಮಾ ಒಳಗೊಂಡಿದ್ದು, ರಾಜ್​ಕುಮಾರ್ ರಾವ್ ಖತರ್​ನಾಕ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ‘ಎ’ ಪ್ರಮಾಣ ಪತ್ರ ಪಡೆದಿದೆ. ವಿಕ್ರಾಂತ್ ಮಾಸ್ಸಿ ನಟನೆಯ ‘ಆಂಖೋಕಿ ಗುಸ್ತಾಕಿ’ ಸಿನಿಮಾ ಸಹ ಇದೇ ವಾರ ಬಿಡುಗಡೆ ಆಗಲಿದೆ.

5 / 5
ಶುಕ್ರವಾರದಂದು ಹಾಲಿವುಡ್ ಸಿನಿಮಾ ‘ಸೂಪರ್​ಮ್ಯಾನ್’ ಬಿಡುಗಡೆ ಆಗುತ್ತಿದೆ. ಬೆಂಗಳೂರಿನಲ್ಲಿ ಈ ಸಿನಿಮಾ ಇಂಗ್ಲೀಷ್, ಹಿಂದಿ, ತೆಲುಗು ಹಾಗೂ ತಮಿಳಿನಲ್ಲಿ ಮಾತ್ರವೇ ಬಿಡುಗಡೆ ಆಗುತ್ತಿದೆ. 2ಡಿ, 3ಡಿ, ಐಮ್ಯಾಕ್ಸ್,ಐಮ್ಯಾಕ್ಸ್ 3ಡಿ, 4ಡಿಎಕ್ಸ್​ ಸ್ಕ್ರೀನ್​​ಗಳಲ್ಲಿ ವೀಕ್ಷಣೆಗೆ ಲಭ್ಯವಿದೆ.