Updated on: Jun 02, 2021 | 4:29 PM
ಸುಮಾರು 6 ಕೋಟಿ ರೂ.ಗಳ ವೆಚ್ಚದಲ್ಲಿ ಧೋನಿ ತಮ್ಮ ಅಭಿರುಚಿಗೆ ತಕ್ಕಂತೆ ರಾಂಚಿಯಲ್ಲಿ ದುಬಾರಿ ಫಾರ್ಮ್ ಹೌಸ್ನಿರ್ಮಿಸಿಕೊಂಡಿದ್ದಾರೆ. ಈ ಮನೆಯನ್ನು ಮಹೇಂದ್ರ ಸಿಂಗ್ ಧೋನಿ ಅವರೇ ವಿನ್ಯಾಸಗೊಳಿಸಿದ್ದಾರೆ. ಪತ್ನಿ ಸಾಕ್ಷಿ ಕೂಡ ಧೋನಿಯೊಂದಿಗೆ ಮನೆಯನ್ನು ರಿಪೇರಿ ಮಾಡಿ, ಕೆಲವು ಬದಲಾವಣೆಗಳನ್ನು ಮತ್ತು ಸೇರ್ಪಡೆಗಳನ್ನು ಮಾಡಿದರು.
ರಾಂಚಿಯ ಫಾರ್ಮ್ ಹೌಸ್ನಲ್ಲಿ ಹೆಚ್ಚು ಕಾಲ ಉಳಿಯಲು ಧೋನಿ ಆದ್ಯತೆ ನೀಡುತ್ತಾರೆ. ಆರು ಎಕರೆ ವಿಸ್ತೀರ್ಣದಲ್ಲಿ ಧೋನಿಯ ಫಾರ್ಮ್ ಹೌಸ್ ಇದೆ. ಮಹಿ ತಮ್ಮ ತೋಟದ ಮನೆಗೆ "ಕೈಲಾಸ್ಪತಿ" ಎಂದು ಹೆಸರಿಟ್ಟಿದ್ದಾರೆ.
ಫಾರ್ಮ್ ಹೌಸ್ನಲ್ಲಿ ಜಿಮ್, ಈಜುಕೊಳ, ಐಷಾರಾಮಿ ಹುಲ್ಲುಹಾಸು ಮತ್ತು ಉದ್ಯಾನವಿದೆ. ಧೋನಿ ತನ್ನ ಮಗಳು ಜೀವ ಜೊತೆ ಇಲ್ಲಿ ಕಾಲ ಕಳೆಯುತ್ತಿದ್ದಾರೆ. ಜೊತೆಗೆ ಇಲ್ಲಿ ಧೋನಿ ತಮ್ಮ ನೆಚ್ಚಿನ ಕೆಲವು ಸಾಕುಪ್ರಾಣಿಗಳನ್ನು ಸಹ ಸಾಕಿಕೊಂಡಿದ್ದಾರೆ.
"ಕೈಲಸ್ಪತಿ" ನಿರ್ಮಿಸಲು ಮೂರು ವರ್ಷಗಳು ಬೇಕಾಯಿತು. ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ನಂತರ ಧೋನಿ ಈ ಕೆಲಸದಲ್ಲಿ ನಿರತರಾದರು. ಫಾರ್ಮ್ ಹೌಸ್ನಿಂದ ರಾಂಚಿಯಲ್ಲಿರುವ ಮಹೇಂದ್ರ ಸಿಂಗ್ ಧೋನಿ ಅವರ ಮೊದಲ ಮನೆಗೆ 20 ನಿಮಿಷಗಳಲ್ಲಿ ತಲುಪಬಹುದು. ಮಾಹಿಯ ಪೋಷಕರು ಈ ಮನೆಯಲ್ಲಿ ವಾಸಿಸುತ್ತಿದ್ದಾರೆ.
ಇದರ ಜೊತೆಗೆ ಧೋನಿ ಪುಣೆಯ ಜೊತೆಗೆ ರಾಷ್ಟ್ರ ರಾಜಧಾನಿ ಮುಂಬೈಯಲ್ಲಿ ಅತ್ಯಂತ ದುಬಾರಿ ಪ್ರದೇಶದಲ್ಲಿ ಮನೆ ನಿರ್ಮಿಸುತ್ತಿದ್ದಾರೆ. ಕಳೆದ ವರ್ಷಕ್ಕಿಂತ ಸ್ವಲ್ಪ ಮೊದಲು ಈ ಸ್ಥಳವನ್ನು ಖರೀದಿಸಿದರು.
ಪಿಂಪ್ರಿ ಪುಣೆಯ ಚಿಂದವಾಡ್ ಪ್ರದೇಶದಲ್ಲಿ ಭೂಮಿಯನ್ನು ಖರೀದಿಸಿದ ಧೋನಿ, 30 ಕೋಟಿ ರೂ.ಗಳ ವೆಚ್ಚದಲ್ಲಿ ಅದೇ ಸ್ಥಳದಲ್ಲಿ ಮನೆ ನಿರ್ಮಿಸುತ್ತಿದ್ದಾರೆ. ಈ ಮನೆಯ ಜೊತೆಗೆ ಒಟ್ಟು ನಾಲ್ಕು ಮನೆಗಳಿವೆ. ಈ ಎಲ್ಲದರ ಮೌಲ್ಯ ರೂ. 110 ಕೋಟಿ ರೂ. ಆಗಿದೆ.
virat kohli reveals his bonding with ms dhoni psr