ಕಾಫಿ ಸವಿಯುತ್ತ ಪುಸ್ತಕ ಓದಬೇಕಾ? ಹಾಗಾದ್ರೆ ಪುಸ್ತಕ ಪ್ರಿಯರೊಮ್ಮೆ ಈ ಕೆಫೆಗಳಿಗೆ ಭೇಟಿ ನೀಡಿ
TV9 Web | Updated By: shruti hegde
Updated on:
Oct 05, 2021 | 7:54 AM
ಒಂದು ಕೈಯಲ್ಲಿ ಪುಸ್ತಕ ಹಿಡಿದು ಮತ್ತೊಂದು ಕೈಯಲ್ಲಿ ಬೆಚ್ಚನೆಯ ಕಪ್ನಿಂದ ಕಾಫಿ ಸವಿಯುತ್ತ ಓದುವುದು ಎಷ್ಟು ಮಜಾ ಅಲ್ವಾ. ಇಂತಹ ಮಜಾ ಕೇವಲ ಮನೆಯಲ್ಲಿ ಮಾತ್ರ ಸಿಗುತ್ತದೆ ಅಂದರೆ ತಪ್ಪಾಗಬಹುದು. ಏಕೆಂದರೆ ಬೆಂಗಳೂರಿನಲ್ಲಿ ಮನೆಗಿಂತಲೂ ನೆಮ್ಮದಿಯ ಹಾಗೂ ಸ್ವಚ್ಛಂದವಾದ ವಾತಾವರಣದ ಜೊತೆಗೆ ಕಾಫಿ ಕೊಡಿಯುತ್ತ ಓದುವ ಮಜಾವನ್ನು ಕೆಲವು ಕೆಫೆಗಳು ನೀಡುತ್ತಿವೆ. ನಿಮ್ಮ ಕನಸಿನ ಪುಸ್ತಕದೊಂದಿಗೆ ಕಾಫಿ ಕುಡಿಯುತ್ತ ಲೋಕವನ್ನು ಮರೆಯಲು ನಾವು ನಿಮ್ಮ ಮುಂದೆ ನಗರದ ಅತ್ಯುತ್ತಮ ಸ್ಥಳಗಳನ್ನು ಆರಿಸಿದ್ದೇವೆ.
1 / 7
ಅತ್ತ ಗಳತ್ತ (Atta Galatta) ಪುಸ್ತಕ ಪ್ರಿಯರಿಗೆ ಅತ್ತ ಗಳತ್ತ ಒಂದು ಸ್ವರ್ಗ. ಈ ಕೆಫೆಯು ರಹಸ್ಯ, ಪ್ರಣಯ ಮತ್ತು ಪ್ರಾದೇಶಿಕ ಭಾಷೆಗಳ ಪುಸ್ತಕಗಳಂತಹ ವಿವಿಧ ಪ್ರಕಾರಗಳ ಪುಸ್ತಕಗಳಿಗೆ ನೆಲೆಯಾಗಿದೆ. ಬೆಚ್ಚಗಿನ ವಾತಾವರಣದೊಂದಿಗೆ, ಶಾಂತವಾದ ಅತ್ತ ಗಳತ್ತ ಕೆಫೆಯು ಓದುಗರನ್ನು ಬೇರೊಂದು ಲೋಕಕ್ಕೆ ಕರೆದೊಯ್ಯುತ್ತದೆ. ಜೊತೆಗೆ ರುಚಿಕರವಾದ ಚೀಸ್ ಸ್ಯಾಂಡ್‌ವಿಚ್, ಫ್ರೆಂಚ್ ಫ್ರೈಸ್ ಮತ್ತು ಹಾಟ್ ಚಾಕೊಲೇಟ್ಗಳು ಸವಿಯೋದು ಚಂದ. ಸ್ಥಳ: ಅತ್ತ ಗಳತ್ತ, ಕೋರಮಂಗಲ ಸಮಯ: ಬೆಳಿಗ್ಗೆ 11 ರಿಂದ ರಾತ್ರಿ 8 ಬೆಲೆ: ಇಬ್ಬರಿಗೆ 200 ರೂ ಸಂಪರ್ಕ ಸಂಖ್ಯೆ: 8041600677
2 / 7
ಡೈಲಾಗ್ (Dialogues) ಡೈಲಾಗ್ ಕೆಫೆಯಲ್ಲಿ ಮೊದಲ ಬಂದು ಗಂಟೆಗೆ 220 ರೂಪಾಯಿಯನ್ನು ಚಾರ್ಚ್ ಮಾಡಲಾಗುತ್ತೆ. ಬಳಿಕ ಸಮಯಕ್ಕೆ ತಕ್ಕನಾಗಿ ಚಾರ್ಚ್ ಮಾಡುತ್ತಾರೆ. ಇಲ್ಲಿ ಅನಿಯಮಿತ ಊಟ ಮತ್ತು ಪಾನಿಯ ಸೇವಿಸಬಹುದು. ಜೊತೆಗೆ ನಿಮ್ಮ ಮೂಡ್ಗೆ ತಕ್ಕನಾಗಿ ಪುಸ್ತಕಗಳನ್ನು ಓದುತ್ತ ಎಂಜಾಯ್ ಮಾಡಬಹುದು. ಸ್ಥಳ: ಡೈಲಾಗ್ಸ್, ಜೆಪಿ ನಗರ ಸಮಯ: ಬೆಳಿಗ್ಗೆ 10 ರಿಂದ ರಾತ್ರಿ 10 ಸಂಪರ್ಕ: 8800946279
3 / 7
ಕೆಫೆ ಟೆರ್ರಾ(Cafe Terra) ನೀವು ಕಾಮಿಕ್ಗಳ ಅಭಿಮಾನಿಯಾಗಿದ್ದರೆ, ಕೆಫೆ ಟೆರ್ರಾ ನಿಮಗೆ ತುಂಬಾ ಇಷ್ಟವಾಗಬಹುದು. ಏಕೆಂದರೆ ಈ ಕೆಫೆಯ ಗೋಡೆಗಳ ಮೇಲೆ ವ್ಯಂಗ್ಯಚಿತ್ರ ಪೋಸ್ಟರ್ಗಳು ರಾರಾಜಿಸುತ್ತಿರುತ್ತವೆ. ಈ ಕೆಫೆ ಯುವಜನರಿಗೆ ಹೆಚ್ಚಾಗಿ ಇಷ್ಟವಾಗುತ್ತೆ. ಮಿನಿ-ಲೈಬ್ರರಿಯ ಜೊತೆ ರುಚಿಕರವಾದ ಊಟ ಸಿಗುವುದರಿಂದ ಜನ ಇಲ್ಲಿಗೆ ಬರಲು ಇಷ್ಟ ಪಡುತ್ತಾರೆ. ಸ್ಥಳ: ಕೆಫೆ ಟೆರ್ರಾ, ಕೋರಮಂಗಲ ಸಮಯ: ಬೆಳಿಗ್ಗೆ 8 ರಿಂದ ರಾತ್ರಿ 10 ಬೆಲೆ: ಇಬ್ಬರಿಗೆ 700 ರೂ ಸಂಪರ್ಕ: 8041313553
4 / 7
DYU ಆರ್ಟ್ ಕೆಫೆ (DYU Art Cafe) ಪ್ರತಿಯೊಬ್ಬ ಕಲಾ ಪ್ರೇಮಿಗಳು ಭೇಟಿ ನೀಡಲೇಬೇಕಾದ ಸ್ಥಳವಿದು. ಈ ಕೆಫೆಯನ್ನು ಹಳೆಯ ಕೇರಳದಲ್ಲಿ ಕಂಡು ಬರುವ ಮನೆಯಂತೆ ವಿನ್ಯಾಸಗೊಳಿಸಲಾಗಿದೆ. ಗೋಡೆಗಳ ಮೇಲಿನ ಕಲಾಕೃತಿಗಳ ಜನರನ್ನು ಆಕರ್ಷಿಸುತ್ತವೆ. ವಿವಿಧ ಅಭಿರುಚಿಯ ಪುಸ್ತಕಗಳ ಸಂಗ್ರಹವು ಓದುಗರಿಗೆ ರಸದೌತಣ ಬಡಿಸಿದಂತಿರುತ್ತದೆ. ಕಾಫಿಯನ್ನು ಹೀರುತ್ತ ನಮಗೆ ಇಷ್ಟವಾದ ಪುಸ್ತಕದ ಜೊತೆ ಸಮಯ ಕಳೆಯುವುದು ವಿಭಿನ್ನ ಫೀಲ್ ಕೊಡುತ್ತದೆ. ಸ್ಥಳ: DYU ಆರ್ಟ್ ಕೆಫೆ, ಕೋರಮಂಗಲ ಸಮಯ: ಬೆಳಿಗ್ಗೆ 10 ರಿಂದ ರಾತ್ರಿ 10:30 ರವರೆಗೆ ಬೆಲೆ: ಇಬ್ಬರಿಗೆ 800 ರೂ ಸಂಪರ್ಕ: 9895674244
5 / 7
ಚಾವಡಿ(Chavadi) ಇಲ್ಲಿ ಕಾದಂಬರಿಗಳು, ಕಥೆಗಳಂತಹ ರಾಶಿ ರಾಶಿ ಪುಸ್ತಕಗಳು ಹಾಗೂ ನೀವು ಓದಬೇಕು ಎಂದು ಕೊಂಡಿದ್ದರೂ ಓದಲು ಸಿಗದಂತಹ ಅಪರೂಪದ ಪುಸ್ತಕಗಳ ರಾಶಿ ಇಲ್ಲಿ ಸಿಗುತ್ತದೆ. ಜೊತೆಗೆ ನಿಮ್ಮ ಹಸಿವಿನ ಸಂಕಟಕ್ಕೆ ತಂದೂರಿ ಚಿಕನ್ ನಂತಹ ಭಾರಿ ಭಕ್ಷ್ಯಗಳು ಇಲ್ಲಿ ಲಭ್ಯವಿದೆ. ಸ್ಥಳ: ಚಾವಡಿ, ಬನ್ನೇರುಘಟ್ಟ ಸಮಯ: ಮಧ್ಯಾಹ್ನ 11 ರಿಂದ ರಾತ್ರಿ10 ಬೆಲೆ: ಇಬ್ಬರಿಗೆ 1,200 ರೂ ಸಂಪರ್ಕ: 8049653031
6 / 7
ಆರ್ಟ್ ವಿಲ್ಲೆ ಕೆಫೆ (Artville Cafe) ಈ ಕೆಫೆಯಲ್ಲಿ ಎಲ್ಲಾ ವಯಸ್ಸಿನವರಿಗೂ ಇಷ್ಟವಾಗುವಂತಹ ಪುಸ್ತಕಗಳ ಸಂಗ್ರಹವಿದೆ. ಇಲ್ಲಿ ಪುಸ್ತಕ ಪ್ರಿಯರು ಯಾವುದೇ ಚಿಂತೆ ಇಲ್ಲದೆ ತಮ್ಮ ಸಂಪೂರ್ಣ ದಿನವನ್ನು ಪುಸ್ತಕಗಳ ಜೊತೆ ಕಳೆಯಬಹುದು. ಕಾಫಿ ಮತ್ತು ಸ್ಯಾಂಡ್‌ವಿಚ್ ಜೊತೆ ಪುಸ್ತಕ ಲೋಕದಲ್ಲಿ ಸಂಚರಿಸಬಹುದು. ಸ್ಥಳ: ಆರ್ಟ್ ವಿಲ್ಲೆ ಕೆಫೆ, ಕಲ್ಯಾಣ್ ನಗರ ಸಮಯ: ಬೆಳಿಗ್ಗೆ 9:30 ರಿಂದ ರಾತ್ರಿ 10:30 ರವರೆಗೆ ಬೆಲೆ: ರೂ. ಇಬ್ಬರಿಗೆ 700 ಸಂಪರ್ಕ: 9742020666
7 / 7
ಹ್ಯಾಪಿ ಬೆಲ್ಲಿ ಬೇಕ್ಸ್ (Happy Belly Bakes) ಭಾರತೀಯ ಹಾಗೂ ಅಂತಾರಾಷ್ಟ್ರೀಯ ಲೇಖಕರ ಬೆಸ್ಟ್ ಸೆಲ್ಲರ್, ಫಿಕ್ಷನ್ ಮತ್ತು ನಾನ್ ಆ್ಯಕ್ಷನ್ ಪುಸ್ತಕಗಳು ಇಲ್ಲಿ ಸಿಗುತ್ತವೆ. ಜೊತೆಗೆ, ಇಲ್ಲಿ ಒಂದು ಪುಸ್ತಕವನ್ನು ಇಟ್ಟು ಒಂದು ಪುಸ್ತಕವನ್ನು ಮನೆಗೆ ತೆಗೆದುಕೊಂಡು ಹೋಗುವ ಪರಿಕಲ್ಪನೆಯನ್ನು ಅನುಸರಿಸಲಾಗುತ್ತೆ. ಸ್ಥಳ: ಹ್ಯಾಪಿ ಬೆಲ್ಲಿ ಬೇಕ್ಸ್, ಪ್ರಿಮ್ರೋಸ್ ರಸ್ತೆ(Primrose Road) ಯಾವಾಗ: ಬೆಳಿಗ್ಗೆ 10 ರಿಂದ ರಾತ್ರಿ 11 ಬೆಲೆ: ರೂ. ಇಬ್ಬರಿಗೆ 600 ಸಂಪರ್ಕ: 080 48654072