- Kannada News Photo gallery Mystery Behind Missing Rupees 2000 Notes Revealed RTI Application answer said not printed a New Single Currency in three years business news in Kannada
Rs 2000 Currency Notes: ಚಲಾವಣೆಗೆ ಸಿಗುತ್ತಿಲ್ಲ 2,000 ರೂ. ನೋಟು! ಕಾರಣ ಇಲ್ಲಿದೆ ನೋಡಿ
ನೋಟು ರದ್ದತಿಯ ಮಹತ್ವದ ನಿರ್ಧಾರದ ಬಳಿಕ ಚಲಾವಣೆಗೆ ಬಂದಿದ್ದ 2000 ರೂ. ಮುಖಬೆಲೆಯ ಕರೆನ್ಸಿ ನೋಟುಗಳು ಈಗ ಬಹುತೇಕ ಕಣ್ಮರೆಯಾಗಿವೆ. ಇದಕ್ಕೆ ಕಾರಣ ಕಳೆದ ಮೂರು ವರ್ಷಗಳಿಂದ ಒಂದೇ ಒಂದು 2000 ರೂ. ಮುಖಬೆಲೆಯ ನೋಟನ್ನೂ ಪ್ರಿಂಟ್ ಮಾಡದಿರುವುದು ಎಂಬುದು ಆರ್ಟಿಐ ಅಡಿ ಸಲ್ಲಿಸಿದ ಅರ್ಜಿಗೆ ಆರ್ಬಿಐ ನೀಡಿದ ಉತ್ತರದಿಂದ ತಿಳಿದುಬಂದಿದೆ.
Updated on: Nov 10, 2022 | 5:52 PM

Mystery Behind Missing Rupees 2000 Notes Revealed RTI Application answer said not printed a New Single Currency in three years business news in Kannada

RBI made a big change in rules related to bank locker check new rules here Latest business news in Kannada

2016-17ರಲ್ಲಿ 2,000 ರೂ. ಮುಖಬೆಲೆಯ 3,542.991 ದಶಲಕ್ಷ ನೋಟುಗಳನ್ನು ಮುದ್ರಿಸಲಾಗಿತ್ತು. 2017-18ರಲ್ಲಿ 111.507 ದಶಲಕ್ಷ ನೋಟುಗಳನ್ನು ಮುದ್ರಿಸಲಾಗಿತ್ತು. 2018-19ರಲ್ಲಿ 46.690 ದಶಲಕ್ಷ ನೋಟುಗಳನ್ನು ಮುದ್ರಿಸಲಾಗಿತ್ತು.

2019-20, 2020-21 ಹಾಗೂ 2021-22ರಲ್ಲಿ 2,000 ರೂ. ಮುಖಬೆಲೆಯ ಒಂದೇ ಒಂದು ನೋಟನ್ನು ಸಹ ಮುದ್ರಿಸಿಲ್ಲ ಎಂದು ಆರ್ಬಿಐನ ಬ್ಯಾಂಕ್ ನೋಟು ಮುದ್ರಣ್ ಲಿಮಿಟೆಡ್ ತಿಳಿಸಿದೆ.

2016ರ ನವೆಂಬರ್ 8ರ ನೋಟು ರದ್ದತಿ ನಿರ್ಧಾರದ ಬಳಿಕ ಆರ್ಬಿಐ ಹೊಸ 500, 1000 ಹಾಗೂ 2000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತಂದಿತ್ತು.

2016ರಿಂದ 2020ರ ಅವಧಿಯಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾದ 2,000 ರೂ. ಮುಖಬೆಲೆಯ ನಕಲಿ ನೋಟುಗಳ ಸಂಖ್ಯೆ 2,272 ರಿಂದ 2,44,834 ತಲುಪಿತ್ತು ಎಂದು ಆಗಸ್ಟ್ 1ರಂದು ಸರ್ಕಾರ ಸಂಸತ್ನಲ್ಲಿ ಮಾಹಿತಿ ನೀಡಿತ್ತು.



















