ಸ್ವೀಡನ್​ನಲ್ಲಿ ಓದುವಾಗ ಪ್ರೇಮಾಂಕುರ: ನೆದರ್​ಲ್ಯಾಂಡ್ ಸೊಸೆಯಾದ ಮೈಸೂರಿನ ಯುವತಿ

| Updated By: ವಿವೇಕ ಬಿರಾದಾರ

Updated on: Feb 18, 2025 | 7:17 AM

ಆತ ವಿದೇಶಿ ಪ್ರಜೆ..ಆಕೆ ಮೈಸೂರಿನ ಯುವತಿ. ಇಬ್ಬರು ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಾರೆ. ಇದೀಗಾ ಆ ಜೋಡಿ ಮೈಸೂರಿನಲ್ಲಿ ವಚನ ಮಾಂಗಲ್ಯದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರೀತಿಗೆ ಜಾತಿ ಧರ್ಮ ಯಾವುದು ಇಲ್ಲ ಎನ್ನುವುದಕ್ಕೆ ಈ ಮದವೆಯೇ ಸಾಕ್ಷಿ.ಈ ನಡುವೆ ಬಸವಣ್ಣರ ಆದರ್ಶದಂತೆ ವಚನಮಾಂಗಲ್ಯವಾಗಿದ್ದು, ಮುಂದೆಯು ಅವರ ಆದರ್ಶಗಳನ್ನ ಮೈಗೂಡಿಸಿಕೊಂಡು ಸುಖ ಜೀವನ ನಡೆಸಲಿ ಎಂಬುದೆ ನಮ್ಮ ಆಶಯ.

1 / 8
ಈತನ ಹೆಸರು ರುಟ್ಗೇರ್.. ಈತ ಮೂಲತಃ ನೆದರ್ ಲ್ಯಾಂಡ್ ಯುವಕ. ಈಕೆ ಹೆಸರು ವಿದ್ಯಾ ಈಕೆ ಮೈಸೂರಿನ ಯುವತಿ. 
ಇವರಿಬ್ಬರು ಪರಸ್ಪರ ಪ್ರೀತಿಸಿ ತಮ್ಮ ಕುಟುಂಬಸ್ಥರನ್ನ ಒಪ್ಪಿಸಿ ಇಂದು (ಫೆಬ್ರವರಿ 17) ಮೈಸೂರಿನಲ್ಲಿ ವಚನ ಮಾಂಗಲ್ಯದ ಮೂಲಕ  ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

ಈತನ ಹೆಸರು ರುಟ್ಗೇರ್.. ಈತ ಮೂಲತಃ ನೆದರ್ ಲ್ಯಾಂಡ್ ಯುವಕ. ಈಕೆ ಹೆಸರು ವಿದ್ಯಾ ಈಕೆ ಮೈಸೂರಿನ ಯುವತಿ. ಇವರಿಬ್ಬರು ಪರಸ್ಪರ ಪ್ರೀತಿಸಿ ತಮ್ಮ ಕುಟುಂಬಸ್ಥರನ್ನ ಒಪ್ಪಿಸಿ ಇಂದು (ಫೆಬ್ರವರಿ 17) ಮೈಸೂರಿನಲ್ಲಿ ವಚನ ಮಾಂಗಲ್ಯದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

2 / 8
ನೆದರ್ ಲ್ಯಾಂಡ್ ದೇಶದ ಬಾಬ್ ವಾನ್ ಜೋಇಜಿನ್, ಜಾಕ್ವಲೀನ್ ದಂಪತಿಗಳ 
ಪುತ್ರ ರುಟ್ಗೆರ್ ಹಾಗೂ ಮೈಸೂರಿನ ಹೂಟಗಳ್ಳಿಯ ಸೋಮಶೇಖರ್ ಮತ್ತು ಪ್ರೇಮ ದಂಪತಿಗಳ ಪುತ್ರಿ ಟಿ ಎಸ್ ವಿದ್ಯಾ ವಚನ 
ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ಮಾದರಿಯಾಗಿದ್ದಾರೆ.

ನೆದರ್ ಲ್ಯಾಂಡ್ ದೇಶದ ಬಾಬ್ ವಾನ್ ಜೋಇಜಿನ್, ಜಾಕ್ವಲೀನ್ ದಂಪತಿಗಳ ಪುತ್ರ ರುಟ್ಗೆರ್ ಹಾಗೂ ಮೈಸೂರಿನ ಹೂಟಗಳ್ಳಿಯ ಸೋಮಶೇಖರ್ ಮತ್ತು ಪ್ರೇಮ ದಂಪತಿಗಳ ಪುತ್ರಿ ಟಿ ಎಸ್ ವಿದ್ಯಾ ವಚನ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ಮಾದರಿಯಾಗಿದ್ದಾರೆ.

3 / 8
ಸ್ವೀಡನ್ ನಲ್ಲಿ ವಿದ್ಯಾಭ್ಯಾಸ ಮಾಡುವ ವೇಳೆ 
ಪ್ರೇಮಾಂಕುರವಾಗಿದೆ. ಬಳಿಕ ವಿದ್ಯಾ ತಮ್ಮ ತಂದೆ ತಾಯಿಗಳ ಗಮನಕ್ಕೆ ತಂದಿದ್ದಾರೆ. ಮೊದಲು ವಿರೋಧ ಮಾಡಿದ ವಿದ್ಯಾ 
ಪೋಷಕರು ಬಳಿಕ ತಮ್ಮ ಮಗಳ ಆಸೆಯಂತೆ ಮದುವೆ ಮಾಡಲು ಒಪ್ಪಿಗೆ ನೀಡಿದ್ದರು. ವಿದ್ಯಾ ತಂದೆ ಸೋಮಶೇಖರ್ ತಮ್ಮ 
ಮಗಳ ಮದುವೆಯನ್ನ ವಚನ ಮಾಂಗಲ್ಯ ಮೂಲಕ ಮದುವೆ ಮಾಡುವ ಅಸೆ ಹೊಂದಿದ್ದರು.

ಸ್ವೀಡನ್ ನಲ್ಲಿ ವಿದ್ಯಾಭ್ಯಾಸ ಮಾಡುವ ವೇಳೆ ಪ್ರೇಮಾಂಕುರವಾಗಿದೆ. ಬಳಿಕ ವಿದ್ಯಾ ತಮ್ಮ ತಂದೆ ತಾಯಿಗಳ ಗಮನಕ್ಕೆ ತಂದಿದ್ದಾರೆ. ಮೊದಲು ವಿರೋಧ ಮಾಡಿದ ವಿದ್ಯಾ ಪೋಷಕರು ಬಳಿಕ ತಮ್ಮ ಮಗಳ ಆಸೆಯಂತೆ ಮದುವೆ ಮಾಡಲು ಒಪ್ಪಿಗೆ ನೀಡಿದ್ದರು. ವಿದ್ಯಾ ತಂದೆ ಸೋಮಶೇಖರ್ ತಮ್ಮ ಮಗಳ ಮದುವೆಯನ್ನ ವಚನ ಮಾಂಗಲ್ಯ ಮೂಲಕ ಮದುವೆ ಮಾಡುವ ಅಸೆ ಹೊಂದಿದ್ದರು.

4 / 8
 ಅದರಂತೆ ಇಂದು ಮೈಸೂರಿನ  ಖಾಸಗಿ ಕಲ್ಯಾಣ ಮಂಟಪದಲ್ಲಿ ಡಾ ಗುರುಬಸವ ಮಹಾಸ್ವಾಮಿ ಹಾಗೂ ತಮ್ಮ ಸಂಬಂದಿಕರು, ಸ್ನೇಹಿತರ ಸಮ್ಮುಖದಲ್ಲಿ ವಚನ  ಮಾಂಗಲ್ಯ  ಮಾಡಿದ್ದಾರೆ.

ಅದರಂತೆ ಇಂದು ಮೈಸೂರಿನ ಖಾಸಗಿ ಕಲ್ಯಾಣ ಮಂಟಪದಲ್ಲಿ ಡಾ ಗುರುಬಸವ ಮಹಾಸ್ವಾಮಿ ಹಾಗೂ ತಮ್ಮ ಸಂಬಂದಿಕರು, ಸ್ನೇಹಿತರ ಸಮ್ಮುಖದಲ್ಲಿ ವಚನ ಮಾಂಗಲ್ಯ ಮಾಡಿದ್ದಾರೆ.

5 / 8
ನನಗೆ ಪ್ರಾರಂಭದಲ್ಲಿ ಒಪ್ಪಿಗೆ ಇರಲಿಲ್ಲ ಬಳಿಕ ನನ್ನ ಮಗಳು ಅವರ ಕುಟುಂಬದ ಬಗ್ಗೆ ತಿಳಿಸಿಕೊಟ್ಟಳು. ನಾವು ಕೂಡ ಒಪ್ಪಿಗೆ ನೀಡಿ  ಮದುವೆ ಮಾಡಿದ್ದೇವೆ. ಇಲ್ಲಿ ಯಾವುದೇ ಜಾತಿ ಧರ್ಮ ಭೇದ  ಭಾವ ಇಲ್ಲ ಕೇವಲ ಒಂದು ಹೆಣ್ಣು ಒಂದು ಗಂಡು  ಜಾತಿ ಮಾತ್ರ ಇರೋದು. ನನ್ನ ಮಗಳ ಮದುವೆಗೆ ಎಲ್ಲಾ ಸಮುದಾಯದ ಸ್ನೇಹಿತರು ಆಗಮಿಸಿದ್ದಾರೆ ಕುಟುಂಬಸ್ಥರು ಆಗಮಿಸಿದ್ದಾರೆ.  ವಚನ ಮಾಂಗಲ್ಯ ಮೂಲಕ ಮದುವೆ ಆಗಬೇಕು ಅನ್ನೋ ನಮ್ಮಾಸೆ ಈಡೇರಿದೆ ಅಂತಾರೆ ವಿದ್ಯಾ ಪೋಷಕರು ಹೇಳ್ತಿದ್ದಾರೆ.

6 / 8
ಇನ್ನು ಈ ಮದುವೆ ಬಗ್ಗೆ ಮಾತನಾಡಿದ ವಿದ್ಯಾ ತಾಯಿ ನನ್ನ ಮಗಳು ನನ್ನ ಬಳಿ ಏನು ಹೇಳಿರಲಿಲ್ಲ. ಬಳಿಕ ಮದುವೆ ಬಗ್ಗೆ 
ಹೇಳಿದಾಗ ಬೇಡ ಎಂದಿದ್ದೆ ನಂತರ ಹುಡುಗನ ಪೋಷಕರ ನಡವಳಿಕೆ ನೋಡಿ ಒಪ್ಪಿಕೊಂಡೆ. ವಿದೇಶದಲ್ಲಿ ಬೆಳೆದಿದ್ದರೂ ಸ್ವಲ್ಪವೂ  ಕೂಡ ಅಹಂಕಾರ ಇಲ್ಲದೆ ಸಭ್ಯತೆಯಿಂದ ನಡೆದುಕೊಳ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು ಈ ಮದುವೆ ಬಗ್ಗೆ ಮಾತನಾಡಿದ ವಿದ್ಯಾ ತಾಯಿ ನನ್ನ ಮಗಳು ನನ್ನ ಬಳಿ ಏನು ಹೇಳಿರಲಿಲ್ಲ. ಬಳಿಕ ಮದುವೆ ಬಗ್ಗೆ ಹೇಳಿದಾಗ ಬೇಡ ಎಂದಿದ್ದೆ ನಂತರ ಹುಡುಗನ ಪೋಷಕರ ನಡವಳಿಕೆ ನೋಡಿ ಒಪ್ಪಿಕೊಂಡೆ. ವಿದೇಶದಲ್ಲಿ ಬೆಳೆದಿದ್ದರೂ ಸ್ವಲ್ಪವೂ ಕೂಡ ಅಹಂಕಾರ ಇಲ್ಲದೆ ಸಭ್ಯತೆಯಿಂದ ನಡೆದುಕೊಳ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

7 / 8
ಆತನ ಪೋಷಕರು ಕೂಡ ನಮ್ಮ ಸಂಸ್ಕೃತಿಯಂತೆಯೇ ಬಟ್ಟೆ ಧರಿಸಿ ಪೂಜೆ ಸಲ್ಲಿಸಿ ಲಿಂಗ ಪೂಜೆ ಮಾಡಿದ್ದಾರೆ. ಇದೆಲ್ಲವನ್ನ ನೋಡಿದಾಗ ನನ್ನ ಮಗಳು ಅವರ ಮನೆಯಲ್ಲಿ ಸಂತೋಷದಿಂದ ಇರುತ್ತಾಳೆ ಎಂಬ ನಂಬಿಕೆ  ನನಗಿದೆ. ಇಬ್ಬರು ಇಲ್ಲೇ ಬ್ಯುಸಿನೆಸ್ ಮಾಡಿ ಎಂದಿದ್ದೇವೆ ಮುಂದಿನ ಅವರ ಜೀವನದ ದಾರಿಯನ್ನ ಅವರೇ ಆಯ್ಕೆ ಮಾಡಿಕೊಳ್ಳುತ್ತಾರೆ ಅಂತಾರೆ ವಿದ್ಯಾ ತಾಯಿ ಪ್ರೇಮ.

8 / 8
ಪ್ರೀತಿಗೆ ಜಾತಿ ಧರ್ಮ ಯಾವುದು ಇಲ್ಲ ಎನ್ನುವುದಕ್ಕೆ ಈ ಮದವೆಯೇ ಸಾಕ್ಷಿ.ಈ ನಡುವೆ ಬಸವಣ್ಣರ ಆದರ್ಶದಂತೆ ವಚನಮಾಂಗಲ್ಯವಾಗಿದ್ದು, ಮುಂದೆಯು ಅವರ ಆದರ್ಶಗಳನ್ನ ಮೈಗೂಡಿಸಿಕೊಂಡು ಸುಖ ಜೀವನ ನಡೆಸಲಿ ಎಂಬುದೆ ನಮ್ಮ ಆಶಯ.

ಪ್ರೀತಿಗೆ ಜಾತಿ ಧರ್ಮ ಯಾವುದು ಇಲ್ಲ ಎನ್ನುವುದಕ್ಕೆ ಈ ಮದವೆಯೇ ಸಾಕ್ಷಿ.ಈ ನಡುವೆ ಬಸವಣ್ಣರ ಆದರ್ಶದಂತೆ ವಚನಮಾಂಗಲ್ಯವಾಗಿದ್ದು, ಮುಂದೆಯು ಅವರ ಆದರ್ಶಗಳನ್ನ ಮೈಗೂಡಿಸಿಕೊಂಡು ಸುಖ ಜೀವನ ನಡೆಸಲಿ ಎಂಬುದೆ ನಮ್ಮ ಆಶಯ.

Published On - 8:59 pm, Mon, 17 February 25