ಮೂವರನ್ನು ಕೊಂದು ನೇಣಿಗೆ ಶರಣಾದ ಚೇತನ್ ಮಾವ ಸೇತುರಾಮನ್ ನನ್ನ ಸ್ನೇಹಿತರು: ಎಂಕೆ ಸೋಮಶೇಖರ್, ಮಾಜಿ ಶಾಸಕ
ಹರೆಯದ ಮಗನನ್ನು ಚೇತನ್ ಕೊಂದಿರುವುದಕ್ಕೆ ಸೋಮಶೇಖರ್ ಬಹಳ ವ್ಯಥೆ ಪಡುತ್ತಾರೆ, ಅವನೇ ಸಾಲ ತೀರಿಸಲು ನೆರವಾಗುತ್ತಿದ್ದನೇನೋ ಎಂದು ಅವರು ಹೇಳುತ್ತಾರೆ. ಮೂವರನ್ನು ಕೊಂದ ಬಳಿಕ ಚೇತನ್ ಅಮೆರಿಕಾದಲ್ಲಿರುವ ತಮ್ಮನಿಗೆ ಫೋನ್ ಮಾಡಿದ್ದಾನೆ, ಅವನು ಸೇತುರಾಮನ್ ಅವರಿಗೆ ಫೋನ್ ಮಾಡುವ ಬದಲು ಬೇರೆ ಯಾರೋ ವಯಸ್ಸಾದವರಿಗೆ ಫೋನ್ ಮಾಡಿದ್ದಾನೆ ಎಂದು ಸೋಮಶೇಖರ್ ಹೇಳಿದರು.
ಮೈಸೂರು: ನಗರದ ವಿಶ್ವೇಶ್ವರನಗರದ ಸಂಕಲ್ಪ್ ಸಿರೀನ್ ಅಪಾರ್ಟ್ಮೆಂಟ್ ನಲ್ಲಿ ತಾಯಿ, ಹೆಂಡತಿ ಮತ್ತು ಮಗನನ್ನು ಕೊಂದು ನೇಣಿಗೆ ಶರಣಾಗಿರುವ ಚೇತನ್ ಅವರ ಮಾವ ಸೇತುರಾಮನ್ ತನಗೆ ಹಳೆಯ ಪರಿಚಯ, ಆಗಾಗ್ಗೆ ಅವರನ್ನು ಭೇಟಿಯಾಗುತ್ತಿರುತ್ತೇನೆ ಎಂದು ಮಾಜಿ ಶಾಸಕ ಎಂಕೆ ಸೋಮಶೇಖರ್ ಹೇಳಿದರು. ಆದರೆ ಚೇತನ್ ಮಾಡಿದ್ದು ಘೋರ ಅಪರಾಧ, ಸಾಲ ಎಲ್ಲರಿಗೂ ಇರುತ್ತದೆ, ಹಾಗಂತ ಅವನು ತನ್ನ ಹದಿಹರೆಯದ ಮಗ, ವಯಸ್ಸಾದ ತಾಯಿ ಮತ್ತು ಹೆಂಡತಿಯನ್ನು ಕೊಲ್ಲುವುದು ತಪ್ಪು, ಅವರಿದ್ದ ಫ್ಲ್ಯಾಟ್ ಗಳನ್ನು ಮಾರಿದರೆ ಪ್ರಾಯಶಃ ಸಾಲ ತೀರಿಸಬಹುದಿತ್ತ್ತು ಅಥವಾ ತನ್ನ ಕಷ್ಟವನ್ನು ಸೇತುರಾಮನ್ ಅವರಿಗೆ ಹೇಳಿಕೊಂಡಿದ್ದರೆ ಸಹಾಯ ಮಾಡಿರೋರು ಎಂದು ಸೋಮಶೇಖರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಚೇತನ್ ಮೆಕ್ಯಾನಿಕಲ್ ಇಂಜಿನೀಯರ್, ಕಾರ್ಮಿಕ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದರು: ಸೀಮಾ ಲಾಟ್ಕರ್, ಪೊಲೀಸ್ ಆಯುಕ್ತರು