Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೇತನ್ ಮೆಕ್ಯಾನಿಕಲ್ ಇಂಜಿನೀಯರ್, ಕಾರ್ಮಿಕ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದರು: ಸೀಮಾ ಲಾಟ್ಕರ್, ಪೊಲೀಸ್ ಆಯುಕ್ತರು

ಚೇತನ್ ಮೆಕ್ಯಾನಿಕಲ್ ಇಂಜಿನೀಯರ್, ಕಾರ್ಮಿಕ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದರು: ಸೀಮಾ ಲಾಟ್ಕರ್, ಪೊಲೀಸ್ ಆಯುಕ್ತರು

ಅರುಣ್​ ಕುಮಾರ್​ ಬೆಳ್ಳಿ
|

Updated on:Feb 17, 2025 | 11:57 AM

ಮೆಕ್ಯಾನಿಕಲ್ ಇಂಜಿನೀಯರ್ ಆಗಿದ್ದ ಚೇತನ್ ಮೊದಲು ಕೊಲ್ಲಿ ರಾಷ್ಟ್ರವೊಂದರಲ್ಲಿ ಕೆಲಸ ಮಾಡುತ್ತಿದ್ದರು ಮತ್ತು 2019 ರಲ್ಲಿ ಭಾರತಕ್ಕೆ ವಾಪಸ್ಸಾಗಿದರು. ವೃತ್ತಿಯಿಂದ ಅವರೊಬ್ಬ ಕಾರ್ಮಿಕರ ಗುತ್ತಿಗೆದಾರ ಮತ್ತು ಅನ್ಲೈನ್ ಮುಖಾಂತರ ಕಾರ್ಮಿಕರ ನೇಮಕಾತಿ ಮಾಡಿಸಿ ಅವರನ್ನು ಕೊಲ್ಲಿ ರಾಷ್ಟ್ರಗಳಿಗೆ ಕಳಿಸುತ್ತಿದ್ದರಂತೆ. ರೂಪಾಲಿ ಅವರು ಮೈಸೂರಿನವರಾಗಿದ್ದರು ಮತ್ತು ಅವರ ತಂದೆ ತಾಯಿ ನಗರದಲ್ಲೇ ವಾಸವಾಗಿದ್ದಾರೆ.

ಮೈಸೂರು: ನಗರದ ಸಂಕಲ್ಪ್ ಅಪಾರ್ಟ್​ಮೆಂಟ್​ನಲ್ಲಿ ಒಂದೇ ಕುಟುಂಬದ ನಾಲ್ವರು ಸಾವಿಗೆ ಶರಣಾಗಿರುವುದಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಮೀಶನರ್ ಸೀಮಾ ಲಾಟ್ಕರ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿರುವುದರಿಂದ ಹೆಚ್ಚಿನ ವಿಷಯಗಳನ್ನ ಡೈವರ್ಟ್ ಮಾಡಲಾಗಲ್ಲ ಎಂದು ಸೀಮಾ ಹೇಳುತ್ತಾರೆ. ಸಾವಿಗೆ ಶರಣಾಗುವ ಮೊದಲು ಕುಟಂಬದ ಯಜಮಾನ ಚೇತನ್ ಅಮೇರಿಕದಲ್ಲಿರುವ ತಮ್ಮ ಸಹೋದರ ಭರತ್​ಗೆ ಫೋನ್ ಮಾಡಿದ್ದರಂತೆ. ಭರತ್ ಅವರ ಚೇತನ್ ಅವರ ಪತ್ನಿ ರೂಪಾಲಿ ಅವರ ತಂದೆತಾಯಿಗಳಿಗೆ ಫೋನ್ ಮಾಡಿ ಮನೆಗೆ ಹೋಗಿ ನೋಡುವಂತೆ ತಿಳಿಸಿದ್ದರಂತೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಮೈಸೂರು: ಅಪಾರ್ಟ್ಮೆಂಟ್​ನಲ್ಲಿ ಒಂದೇ ಕುಟುಂಬದ ನಾಲ್ವರ ಸಾವು

Published on: Feb 17, 2025 11:27 AM