ರಾಯಚೂರು: ಅನೈತಿಕ ಚಟುವಟಿಕೆಗಳ ತಾಣವಾದ ಸರ್ಕಾರಿ ಆಸ್ಪತ್ರೆ
ರಾಯಚೂರಿನ ಮಸ್ಕಿ ತಾಲ್ಲೂಕಿನ ಹಂಪನಾಳದ ಸರ್ಕಾರಿ ಆಸ್ಪತ್ರೆ ಎರಡು ವರ್ಷಗಳಿಂದ ಬೀಗ ಹಾಕಿದೆ. ಸಿಬ್ಬಂದಿ ಹಾಜರಾತಿ ನಕಲಿ ದಾಖಲೆಗಳ ಮೂಲಕ ವೇತನ ಪಡೆಯುತ್ತಿದ್ದಾರೆ. ಆಸ್ಪತ್ರೆಯಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದು, ಇದರಿಂದ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ತೀವ್ರ ತೊಂದರೆಯಾಗುತ್ತಿದೆ. ಆಸ್ಪತ್ರೆಯ ಪುನಾರಂಭಕ್ಕಾಗಿ ಜನರು ಆಗ್ರಹಿಸುತ್ತಿದ್ದಾರೆ.
ರಾಯಚೂರು, ಫೆಬ್ರವರಿ 17: ಮಸ್ಕಿ (Maski) ತಾಕೂಕಿನ ಹಂಪನಾಳ ಗ್ರಾಮದ ಸರ್ಕಾರಿ ಆಸ್ಪತ್ರೆ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಆಸ್ಪತ್ರೆಯಲ್ಲಿ ಕಿಡಿಗೇಡಿಗಳು ಇಸ್ಪೀಟ್, ಪಲ್ಲಂಗದಾಟ, ಎಣ್ಣೆ ಪಾರ್ಟಿ ಮಾಡಿದ್ದಾರೆ. 15 ವರ್ಷಗಳ ಹಿಂದೆ ಲಕ್ಷ-ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಸರ್ಕಾರಿ ಆಸ್ಪತ್ರೆ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಇದೀಗ, ಅಧಿಕಾರಿಗಳು ಆಸ್ಪತ್ರೆಗೆ ಬೀಗ ಹಾಕಿದ್ದಾರೆ. ಎರಡು ವರ್ಷದಿಂದ ಆಸ್ಪತ್ರೆಗೆ ವೈದ್ಯರು, ಸಿಬ್ಬಂದಿಯೇ ಬಂದಿಲ್ಲ. ಆದರೆ, ದಾಖಲಾತಿಯಲ್ಲಿ ಮಾತ್ರ ಸಿಬ್ಬಂದಿ ಕೆಲಸ ಹಾಜರಾತಿ ಇದೆ. ಈ ದಾಖಲಾತಿ ಆಧಾರದಲ್ಲಿ ಪ್ರತಿ ತಿಂಗಳು ಸಿಬ್ಬಂದಿ ವೇತನ ಪಡೆಯುತ್ತಿದ್ದಾರೆ. ಆದರೆ, ಅಸಲಿಗೆ ಆಸ್ಪತ್ರೆಗೆ ಬೀಗ ಬಿದ್ದು ಎರಡು ವರ್ಷಗಳಾಗಿವೆ. ಆಸ್ಪತ್ರೆ ಬಾಗಿಲು ತೆರೆದರೆ ಹಂಪನಾಳ ಸೇರಿದಂತೆ ಸುತ್ತಲಿನ 4-5 ಗ್ರಾಮಗಳಿಗೆ ಅನಕೂಲವಾಗಲಿದೆ.
Published on: Feb 17, 2025 12:23 PM
Latest Videos

ಹೊಸ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ ಚಂದು ಗೌಡ-ಕಾವ್ಯಾ ಮಹಾದೇವ್

ಮಾಜಿ ಶಾಸಕರ ಭೇಟಿ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಗೊತ್ತಾಗುತ್ತಿಲ್ಲ!

ಸ್ಕೂಟಿಗೆ ಡಿಕ್ಕಿ ಹೊಡೆದು 11 ಕಿ.ಮೀ ಎಳೆದೊಯ್ದ ಕಾರು, ಭಯಾನಕ ವಿಡಿಯೋ

VIDEO: ಆಂಬ್ಯುಲೆನ್ಸ್ಗೆ ಕರೆ ಮಾಡಿ, ಆದರೆ ಅದು ನನಗಲ್ಲ..!
