ಅಳ್ಳಿಟ್ಟು : ಉತ್ತರ ಕರ್ನಾಟಕದಲ್ಲಿ ನಾಗರಪಂಚಮಿ ಹಬ್ಬಕ್ಕೆ ಅಳ್ಳಿಟ್ಟು ಜನಪ್ರಿಯವಾದ ಸಿಹಿ ತಿನಿಸಾಗಿದ್ದು, ಇದನ್ನು ದೇವರಿಗೆ ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಈ ಭಾಗದಲ್ಲಿ ಅಳ್ಳಿಟ್ಟು ಇಲ್ಲದೇ ಶ್ರಾವಣ ಮಾಸದ ಮೊದಲ ಹಬ್ಬ ನಾಗರಪಂಚಮಿವು ಪೂರ್ಣವಾಗುವುದೇ ಇಲ್ಲ. ಜೋಳದ ಅರಳು, ಗೋಧಿ ಹಿಟ್ಟು, ಬೆಲ್ಲ, ಅಕ್ಕಿ, ಗಸಗಸೆ, ಏಲಕ್ಕಿ, ಲವಂಗ ಹಾಗೂ ಜಾಯಿಕಾಯಿಯಿಂದ ಮಾಡುವ ಈ ತಿನಿಸು ತಿನ್ನಲು ರುಚಿಕರವಾಗಿರುತ್ತದೆ.