Updated on: May 11, 2022 | 12:21 PM
ಬಹುಭಾಷಾ ತಾರೆ ನಮಿತಾ ಅವರ ಬಾಳಿನಲ್ಲಿ ಹೊಸ ಅಧ್ಯಾಯ ಆರಂಭ ಆಗಿದೆ. ಅವರು ತಾಯಿ ಆಗುವ ಸಂಭ್ರಮದಲ್ಲಿದ್ದಾರೆ. ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿರುವ ಅವರು ಗುಡ್ ನ್ಯೂಸ್ ನೀಡಿದ್ದಾರೆ. ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.
ಮೇ 10ರಂದು ನಮಿತಾ ಅವರು 41ನೇ ವಸಂತಕ್ಕೆ ಕಾಲಿಟ್ಟರು. ಈ ಸಂದರ್ಭದಲ್ಲಿ ತಾವು ಪ್ರೆಗ್ನೆಂಟ್ ಎಂಬ ವಿಷಯವನ್ನು ಬಹಿರಂಗ ಮಾಡಿದರು. ಪ್ರೆಗ್ನೆನ್ಸಿ ಫೋಟೋಶೂಟ್ ಮಾಡಿಸುವ ಮೂಲಕ ಅವರು ಸಿಹಿ ಸುದ್ದಿ ನೀಡಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಯ ಸಿನಿಮಾಗಳಲ್ಲಿ ನಟಿಸಿರುವ ನಮಿತಾ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಸಿನಿಮಾ ಆಯ್ಕೆಯಲ್ಲಿ ಅವರು ಹೆಚ್ಚು ಚ್ಯೂಸಿ ಆಗಿದ್ದರು. ಈಗ ಮಗು ಪಡೆಯುವ ಸಲುವಾಗಿ ನಟನೆಯಿಂದ ಇನ್ನಷ್ಟು ತಿಂಗಳ ಕಾಲ ದೂರ ಉಳಿಯಲಿದ್ದಾರೆ.
2002ರಿಂದ 2016ರ ತನಕ ನಮಿತಾ ಅವರು ಬಹುಬೇಡಿಕೆಯ ನಟಿಯಾಗಿ ಸಕ್ರಿಯರಾಗಿದ್ದರು. 2017ರಲ್ಲಿ ವೀರೇಂದ್ರ ಚೌಧರಿ ಜೊತೆ ಮದುವೆ ಮಾಡಿಕೊಂಡ ಬಳಿಕ ಅವರು ನಟನೆಯಿಂದ ಸ್ವಲ್ಪ ಅಂತರ ಕಾಯ್ದುಕೊಂಡರು. ಸಂಸಾರದ ಕಡೆಗೆ ಹೆಚ್ಚು ಗಮನ ಹರಿಸಿದರು. ಈಗ ತಾಯಿ ಆಗುತ್ತಿರುವ ಖುಷಿಯ ಸುದ್ದಿಯನ್ನು ನೀಡಿದ್ದಾರೆ.
‘ನೀಲಕಂಠ’, ‘ಇಂದ್ರ’, ‘ಹೂ’, ‘ಬೆಂಕಿ ಬಿರುಗಾಳಿ’ ಸಿನಿಮಾಗಳ ಮೂಲಕ ನಮಿತಾ ಅವರು ಕನ್ನಡದ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಚಂದನವನದ ಸ್ಟಾರ್ ಕಲಾವಿದರ ಜೊತೆ ನಟಿಸಿರುವ ಅವರು ಈಗ ಚಿತ್ರರಂಗದಲ್ಲಿ ಅಷ್ಟೇನೂ ಸಕ್ರಿಯವಾಗಿಲ್ಲ. ತಾಯಿ ಆಗುತ್ತಿರುವ ಸಂತೋಷದ ಕುರಿತು ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.