AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಬಂತು ಮತ್ತೊಂದು ಹೊಸ ಟ್ರೇನ್: ಹೆಬ್ಬಗೋಡಿ ಡಿಪೋ ತಲುಪಿದ 14ನೇ ಡ್ರೈವರ್ ಲೆಸ್ ರೈಲು

Namma Metro Yellow Line: ನಮ್ಮ ಮೆಟ್ರೋದ ಹಳದಿ ಮಾರ್ಗಕ್ಕೆ 14ನೇ ಚಾಲಕರಹಿತ (ಡ್ರೈವರ್‌ಲೆಸ್) ರೈಲು ಬೆಂಗಳೂರಿನ ಹೆಬ್ಬಗೋಡಿ ಡಿಪೋ ತಲುಪಿದೆ. ಸದ್ಯ ಹಳದಿ ಮಾರ್ಗದಲ್ಲಿ 10 ಮೆಟ್ರೋ ರೈಲುಗಳು ಸಂಚಾರ ಮಾಡುತ್ತಿದ್ದು, ಒಟ್ಟು 15 ಡ್ರೈವರ್ ಲೆಸ್ ರೈಲುಗಳನ್ನು ಆರ್ಡರ್​ ನೀಡಲಾಗಿದೆ. 11 ಮತ್ತು 12ನೇ ಮೆಟ್ರೋ ರೈಲು ವಾಣಿಜ್ಯ ಸಂಚಾರ ಶುರು ಮಾಡಿದ ಬಳಿಕ, ಪ್ರಯಾಣಿಕರ ಕಾಯುವಿಕೆ ಅವಧಿ ಮತ್ತು ದಟ್ಟಣೆ ಮತ್ತಷ್ಟು ಕಡಿತವಾಗುವ ಸಾಧ್ಯತೆ ಇದೆ.

ಕಿರಣ್​ ಸೂರ್ಯ
| Edited By: |

Updated on: Jul 16, 2026 | 4:14 PM

Share
ನಮ್ಮ ಮೆಟ್ರೋದ ಹಳದಿ ಮಾರ್ಗದ ರೈಲುಗಳ ಸಂಖ್ಯೆ ಹೆಚ್ಚಾಗಿದ್ದು, ಮತ್ತೊಂದು ಹೊಸ ಟ್ರೇನ್​​ ಬೆಂಗಳೂರು ತಲುಪಿದೆ. 14ನೇ ಡ್ರೈವರ್ ಲೆಸ್ ಟ್ರೈನ್ ಈಗಾಗಲೇ ಹೆಬ್ಬಗೋಡಿ ಡಿಪೋಗೆ ಬಂದಿದ್ದು, ಆರ್ ವಿ ರಸ್ತೆಯಿಂದ- ಬೊಮ್ಮಸಂದ್ರದವರೆಗಿನ‌ ಹಳದಿ ಮಾರ್ಗಕ್ಕೆ ಒಟ್ಟು 15 ಡ್ರೈವರ್ ಲೆಸ್ ರೈಲುಗಳನ್ನು ಆರ್ಡರ್​ ನೀಡಲಾಗಿದೆ.

1 / 5
ಒಟ್ಟು 19.15 ಕಿಲೋ ಮೀಟರ್​​ ಉದ್ದದ ವ್ಯಾಪ್ತಿಯ, 16 ನಿಲ್ದಾಣಗಳನ್ನು ಹೊಂದಿರುವ ಈ ಹಳದಿ ಮಾರ್ಗದಲ್ಲಿ ಸದ್ಯ ಪೀಕ್ ಅವರ್​​ನಲ್ಲಿ 7 ನಿಮಿಷಕ್ಕೊಂದು ಮೆಟ್ರೋ ರೈಲು ಸಂಚಾರ ಮಾಡುತ್ತಿದೆ. ನಾನ್ ಪೀಕ್ ಅವರ್​​ನಲ್ಲಿ ರೈಲುಗಳ ನಡುವಿನ ಅಂತರದ ಸಮಯ 10 ನಿಮಿಷಗಳಾಗಿವೆ.

2 / 5
ಸದ್ಯ ಹಳದಿ ಮಾರ್ಗದಲ್ಲಿ 10 ಮೆಟ್ರೋ ರೈಲುಗಳು ಸಂಚಾರ ಮಾಡುತ್ತಿದ್ದು, ಆರ್ಡರ್​​ ಆಧಾರದಲ್ಲಿ ಇನ್ನೂ 5 ಟ್ರೇನ್​​ಗಳ ವಾಣಿಜ್ಯ ಸಂಚಾರ ಆರಂಭವಾಗಬೇಕಿದೆ. ನಮ್ಮ ಮೆಟ್ರೋದ ಬಹು ಬೇಡಿಕೆಯ ಈ ಮಾರ್ಗದಲ್ಲಿ ಪ್ರಯಾಣಿಕರ ಸಂಚಾರ ದೊಡ್ಡ ಪ್ರಮಾಣದಲ್ಲಿರುವ ಕಾರಣ, ಎಲ್ಲ ರೈಲುಗಳ ಶೀಘ್ರ ಸಂಚಾರವನ್ನು ಸಾರ್ವಜನಿಕರು ಎದುರು ನೋಡುತ್ತಿದ್ದಾರೆ.

3 / 5
ಈ ಮಾರ್ಗದಲ್ಲಿ 11 ಮತ್ತು 12ನೇ ಮೆಟ್ರೋ ರೈಲು ವಾಣಿಜ್ಯ ಸಂಚಾರ ಶುರು ಮಾಡಿದ ಬಳಿಕ, ಪ್ರಯಾಣಿಕರ ಕಾಯುವಿಕೆ ಅವಧಿ ಮತ್ತು ದಟ್ಟಣೆ ಮತ್ತಷ್ಟು ಕಡಿತವಾಗುವ ಸಾಧ್ಯತೆ ಇದೆ. ಹೆಚ್ಚುವರಿ ಮೆಟ್ರೋ ಸಂಚಾರದಿಂದ ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲ‌ವಾಗುವ ನಿರೀಕ್ಷೆ ಇದೆ.

4 / 5
ಎಲೆಕ್ಟ್ರಾನಿಕ್ ಸಿಟಿ ಮತ್ತು ಸಿಲ್ಕ್ ಬೋರ್ಡ್ ಜಂಕ್ಷನ್‌ನಂತಹ ಪ್ರಮುಖ ಪ್ರದೇಶಗಳಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಹೆಚ್ಚು ಸಹಾಯಕಾರಿಯಾಗಿರುವ ಈ ಮೆಟ್ರೋ ಮಾರ್ಗವನ್ನು 2025ರ ಆಗಸ್ಟ್​​ 10ರಂದು ಉದ್ಘಾಟಿಸಲಾಗಿತ್ತು. ಆಗಸ್ಟ್​​ 11ರಿಂದ ಮೆಟ್ರೋ ರೈಲುಗಳು ವಾಣಿಜ್ಯ ಸಂಚಾರ ಆರಂಭಿಸಿದ್ದವು.

5 / 5
Follow Us
ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ BJP ಟೀಕೆಗೆ ಹರಿಪ್ರಸಾದ್ ಕೌಂಟರ್​​

ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ ಶಾಸಕ ಸುಬ್ಬಾರೆಡ್ಡಿ

ರಾಜೀನಾಮೆ ವಾಪಸ್ ಪಡೆದ ಯಶವಂತರಾಯಗೌಡ ಪಾಟೀಲ್
ರಾಜೀನಾಮೆ ವಾಪಸ್ ಪಡೆದ ಯಶವಂತರಾಯಗೌಡ ಪಾಟೀಲ್
ಮೇಕೆದಾಟು ಯೋಜನೆ ತಡೆಯಲು ತಮಿಳುನಾಡಿಗೆ ಅಧಿಕಾರವಿಲ್ಲ

ಎರಡು ವರ್ಷಗಳ ಬಳಿಕ ಹಾಸನದಲ್ಲಿ ರಾರಾಜಿಸಿದ ಪ್ರಜ್ವಲ್ ರೇವಣ್ಣ ಫ್ಲೆಕ್ಸ್ ಗಳು

ಸಚಿವ ಸ್ಥಾನ ಹರಾಜು: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಆಡಿಯೋ

ನಾಗೇಂದ್ರಗೆ ಮಂತ್ರಿ ಸ್ಥಾನ ಹೈಕಮಾಂಡ್ ತೀರ್ಮಾನ

ಸಚಿವರ ಪ್ರಮಾಣವಚನಕ್ಕೆ ಸಿದ್ದು ಗೈರಾಗಿದ್ಯಾಕೆ? ಜಾರಕಿಹೊಳಿ ಹಿಂಗ್ಯಾಕಂದ್ರು?

ರಾಜೀನಾಮೆ ನೀಡುವ ಮಟ್ಟಕ್ಕೆ ಹೋಗಿದ್ದ ಶಾಸಕ ಶ್ರೀನಿವಾಸ್ ದಿಢೀರ್ ಯುಟರ್ನ್

ಸಂಪುಟ ವಿಸ್ತರಣೆ ಬೆನ್ನಲ್ಲೇ ಖಾತೆಗಳಿಗಾಗಿ ಹೆಚ್ಚಿದ ಪೈಪೋಟಿ