- Kannada News Photo gallery Naveen Gyanagoudar’s parents build house in his memory in Haveri Who demised In Russia-Ukraine War
ರಷ್ಯಾ-ಉಕ್ರೇನ್ ಯುದ್ಧದಲ್ಲಿ ಸಾವನ್ನಪ್ಪಿದ್ದ ಕನ್ನಡಿಗ ನವೀನ್ ಕನಸು ನನಸು
ರಷ್ಯಾ-ಉಕ್ರೇನ್ ಯುದ್ಧದಲ್ಲಿ (Russia-Ukraine War) ಸಾವನ್ನಪ್ಪಿದ್ದ ಕನ್ನಡಿಗ ನವೀನ್ (Naveen) ಕನಸು ನನಸಾಗಿದೆ. ನವೀನ್ ವೈದ್ಯನಾದ (Doctor) ಮೇಲೆ ಹೆತ್ತವರಿಗಾಗಿ ಮನೆ ಕಟ್ಟಿಸಬೇಕೆಂಬ ಕನಸು ಹೊಂದಿದ್ದರು. ಇದೀಗ ಅದು ನೆರವೇರಿದೆ.
Updated on:Feb 19, 2023 | 9:23 PM

ರಷ್ಯಾ-ಉಕ್ರೇನ್ ಯುದ್ಧದಲ್ಲಿ ಸಾವನ್ನಪ್ಪಿದ್ದ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಚಳಗೇರಿ ಮೂಲದ ನವೀನ್ ಕನಸು ನನಸಾಗಿದೆ.

ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿ ನಿರ್ಮಾಣವಾಗಿರುವ ಮನೆಗೆ 'ನವೀನ್ ನಿವಾಸ' ಎಂದು ಹೆಸರಿಡಲಾಗಿದೆ.

ಸುಮಾರು 30 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಲಾಗಿದ್ದು, ಮಗನ ನೆನಪು ಶಾಶ್ವತವಾಗಿರಲಿ ಎಂದು ಗ್ರ್ಯಾನೈಟ್ ಕಲ್ಲಿನಲ್ಲಿ ನವೀನ್ ಭಾವಚಿತ್ರ ಕೆತ್ತಿಸಲಾಗಿದೆ.

ಮನೆ ಪ್ರವೇಶ ದ್ವಾರದ ಬಳಿ ನವೀನ್ ಫೋಟೋ ಸಹ ಹಾಕಲಾಗಿದೆ.

ಮಗನ ಮೊದಲ ವರ್ಷದ ಪುಣ್ಯ ತಿಥಿಯಂದು ಮನೆಯ ಗೃಹ ಪ್ರವೇಶ ಕಾರ್ಯಕ್ರಮ ಮಾಡಲಾಗಿದೆ.

ತಂದೆ ಶೇಖರಗೌಡ, ತಾಯಿ ವಿಜಯಲಕ್ಷ್ಮಿ ಮತ್ತು ಸಹೋದರ ಹರ್ಷ, ಮೃತ ನವೀನನ ಕನಸು ನನಸು ಮಾಡಿದ್ದಾರೆ. ‘ನವೀನ್ ನಿವಾಸ’ (Naveen Nivas) ಎಂದು ನಾಮಕರಣ ಮಾಡಿದ್ದಾರೆ.

ನವೀನ್ ತಂದೆ ತಾಯಿ ಬಡತನದಲ್ಲಿ ಕಷ್ಟಪಟ್ಟು ವೈದ್ಯಕೀಯ ಶಿಕ್ಷಣಕ್ಕಾಗಿ ಉಕ್ರೇನ್ ಗೆ ತಮ್ಮ ಮಗನನ್ನು ಕಳುಹಿಸಿದ್ದರು. ಅದರೆ ಉಕ್ರೇನ್ ಮತ್ತು ರಷ್ಯಾ ವಾರ್ ನಮ್ಮ ಕನ್ನಡದ ಕುವರ ನವೀನನ್ನು ಬಲಿ ಪಡೆಯಿತು. ಆ ಕುಟುಂಬದ ಕನಸು ಕಮರುವಂತೆ ಮಾಡಿತ್ತು.

ಈಗ ಮಗನ ಕನಸು ನನಸು ಮಾಡಿ ನೂತನ ಮನೆ ನಿರ್ಮಿಸಿ, ಮನೆಗೆ ನವೀನ್ ನಿವಾಸ ನಾಮಕರಣ ಮಾಡಿ ಮಗನ ನೆರಳಿನಲ್ಲಿ ತಂದೆತಾಯಿ ಜೀವನ ಮಾಡುತ್ತಿದ್ದಾರೆ.

ಅದು ಮಾರ್ಚ್ 1 2022 ರಂದು ಉಕ್ರೇನ್ ಮತ್ತು ರಷ್ಯಾ ಯುದ್ದದಲ್ಲಿ ಕನ್ನಡಿಗ ನವೀನ ಬಲಿಯಾಗಿದ್ದ. ಇದರಿಂದ ಕರುನಾಡಿಗೆ ಬರಸಿಡಿಲು ಬಡಿದಂತಾಗಿತ್ತು
Published On - 9:21 pm, Sun, 19 February 23
























