ರಷ್ಯಾ-ಉಕ್ರೇನ್ ಯುದ್ಧದಲ್ಲಿ ಸಾವನ್ನಪ್ಪಿದ್ದ ಕನ್ನಡಿಗ ನವೀನ್ ಕನಸು ನನಸು

Updated on: Feb 19, 2023 | 9:23 PM

ರಷ್ಯಾ-ಉಕ್ರೇನ್ ಯುದ್ಧದಲ್ಲಿ (Russia-Ukraine War) ಸಾವನ್ನಪ್ಪಿದ್ದ ಕನ್ನಡಿಗ ನವೀನ್ (Naveen) ಕನಸು ನನಸಾಗಿದೆ. ನವೀನ್ ವೈದ್ಯನಾದ (Doctor) ಮೇಲೆ ಹೆತ್ತವರಿಗಾಗಿ ಮನೆ ಕಟ್ಟಿಸಬೇಕೆಂಬ ಕನಸು ಹೊಂದಿದ್ದರು. ಇದೀಗ ಅದು ನೆರವೇರಿದೆ.

1 / 9
ರಷ್ಯಾ-ಉಕ್ರೇನ್ ಯುದ್ಧದಲ್ಲಿ  ಸಾವನ್ನಪ್ಪಿದ್ದ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಚಳಗೇರಿ ಮೂಲದ ನವೀನ್ ಕನಸು ನನಸಾಗಿದೆ.

ರಷ್ಯಾ-ಉಕ್ರೇನ್ ಯುದ್ಧದಲ್ಲಿ ಸಾವನ್ನಪ್ಪಿದ್ದ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಚಳಗೇರಿ ಮೂಲದ ನವೀನ್ ಕನಸು ನನಸಾಗಿದೆ.

2 / 9

ನವೀನ್ ವೈದ್ಯನಾದ ಮೇಲೆ ಹೆತ್ತವರಿಗಾಗಿ ಮನೆ ಕಟ್ಟಿಸಬೇಕೆಂಬ ಕನಸು ಹೊಂದಿದ್ದರು. ಮಗನ ಆಸೆ ಈಡೇರಿಸಲು ಅವನ ವಿದ್ಯಾಭ್ಯಾಸಕ್ಕಾಗಿ ಕೂಡಿಟ್ಟಿದ್ದ ಹಣದಿಂದ ಮನೆ ಕಟ್ಟಿದ್ದಾರೆ.

3 / 9

ಸುಮಾರು 30 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಲಾಗಿದ್ದು, ಮಗನ ನೆನಪು ಶಾಶ್ವತವಾಗಿರಲಿ ಎಂದು ಗ್ರ್ಯಾನೈಟ್ ಕಲ್ಲಿನಲ್ಲಿ ನವೀನ್ ಭಾವಚಿತ್ರ ಕೆತ್ತಿಸಲಾಗಿದೆ.

4 / 9

ಮನೆ ಪ್ರವೇಶ ದ್ವಾರದ ಬಳಿ ನವೀನ್ ಫೋಟೋ ಸಹ ಹಾಕಲಾಗಿದೆ.

5 / 9

ಮಗನ ಮೊದಲ ವರ್ಷದ ಪುಣ್ಯ ತಿಥಿಯಂದು ಮನೆಯ ಗೃಹ ಪ್ರವೇಶ ಕಾರ್ಯಕ್ರಮ ಮಾಡಲಾಗಿದೆ.

6 / 9

ತಂದೆ ಶೇಖರಗೌಡ, ತಾಯಿ ವಿಜಯಲಕ್ಷ್ಮಿ ಮತ್ತು ಸಹೋದರ ಹರ್ಷ, ಮೃತ ನವೀನನ ಕನಸು ನನಸು ಮಾಡಿದ್ದಾರೆ. ‘ನವೀನ್ ನಿವಾಸ’ (Naveen Nivas) ಎಂದು ನಾಮಕರಣ ಮಾಡಿದ್ದಾರೆ.

7 / 9

ನವೀನ್ ತಂದೆ ತಾಯಿ ಬಡತನದಲ್ಲಿ ಕಷ್ಟಪಟ್ಟು ವೈದ್ಯಕೀಯ ಶಿಕ್ಷಣಕ್ಕಾಗಿ ಉಕ್ರೇನ್ ಗೆ ತಮ್ಮ ಮಗನನ್ನು ಕಳುಹಿಸಿದ್ದರು. ಅದರೆ ಉಕ್ರೇನ್ ಮತ್ತು ರಷ್ಯಾ ವಾರ್ ನಮ್ಮ ಕನ್ನಡದ ಕುವರ ನವೀನನ್ನು ಬಲಿ ಪಡೆಯಿತು. ಆ ಕುಟುಂಬದ ಕನಸು ಕಮರುವಂತೆ ಮಾಡಿತ್ತು.

8 / 9

ಈಗ ಮಗನ ಕನಸು ನನಸು ಮಾಡಿ ನೂತನ ಮನೆ ನಿರ್ಮಿಸಿ, ಮನೆಗೆ ನವೀನ್ ನಿವಾಸ ನಾಮಕರಣ ಮಾಡಿ ಮಗನ ನೆರಳಿನಲ್ಲಿ ತಂದೆತಾಯಿ ಜೀವನ ಮಾಡುತ್ತಿದ್ದಾರೆ.

9 / 9

ಅದು ಮಾರ್ಚ್ 1 2022 ರಂದು ಉಕ್ರೇನ್ ಮತ್ತು ರಷ್ಯಾ ಯುದ್ದದಲ್ಲಿ ಕನ್ನಡಿಗ ನವೀನ ಬಲಿಯಾಗಿದ್ದ. ಇದರಿಂದ ಕರುನಾಡಿಗೆ ಬರಸಿಡಿಲು ಬಡಿದಂತಾಗಿತ್ತು

Published On - 9:21 pm, Sun, 19 February 23

Loading...
Unable to load recommendations.
Follow Us