Kannada News Photo gallery Navratri celebrations in Davangere, Shamanur Sivashankarappa of 94 gave support to the Dandiya Dance, Kannada News
ದಾವಣಗೆರೆಯಲ್ಲಿ ರಂಗೇರಿದ ನವರಾತ್ರಿ; ಮೈ ಮರೆತು ಕುಣಿಯುವ ದಾಂಡಿಯಾ ಡಾನ್ಸ್ಗೆ 94ರ ಶಾಮನೂರು ಶಿವಶಂಕರಪ್ಪ ಸಾಥ್
ದಸರಾ ಹಬ್ಬದ ಒಂಬತ್ತು ದಿನಗಳ ಕಾಲ ಒಂದಿಲ್ಲೊಂದು ಸಂಭ್ರಮ. ಅದರಲ್ಲೂ ಶಕ್ತಿ ದೇವತೆಯ ಆರಾಧಕರಿಗೆ ಇದೊಂದು ವಿಶೇಷ ಹಬ್ಬ. ವರ್ಷವಿಡಿ ಬಹುತೇಕರು ಈ ಹಬ್ಬಕ್ಕಾಗಿ ಕಾಯ್ದು ಕುಳಿತಿರುತ್ತಾರೆ. ಅದರಂತೆ ದಾವಣಗೆರೆ ನಗರದಲ್ಲಿ ಕೈಯಲ್ಲಿ ಕೋಲು ಹಿಡಿದು ಸಂಗೀತಕ್ಕೆ ತಕ್ಕಂತೆ ಹೆಜ್ಜೆ ಹಾಕುವ ಯುವತಿಯರು. ಜೊತೆಗೊಂದಿಷ್ಟು ಹಿರಿಯ ಕಿರಿಯರ ಸಾಥ್. ಇಂತಹ ಅದ್ಭುತ ನೃತ್ಯ ನಡೆಯುವುದು ಕೇವಲ ದಸರಾದಲ್ಲಿ ಮಾತ್ರ. ಇಲ್ಲಿದೆ ಮೈ ಮರೆತು ಕುಣಿಯುವ ದಾಂಡಿಯಾ ಡಾನ್ಸ್ಗೆ 94ರ ಶಾಮನೂರ ಸಾಥ್ ನೀಡಿದ ಸ್ಟೋರಿ.
1 / 6
ದಸರಾ ಹಬ್ಬ ಬಂದರೆ ಸಾಕು ದಾವಣಗೆರೆ ನಗರದ ರಾಮಂಡಕೋ ಸರ್ಕಲ್ ಬಳಿ ಸ್ವಟ್ ಪಾರ್ಕ್ನಲ್ಲಿ ಡ್ಯಾನ್ಸ್ ಕಮಾಲ್ ಶುರುವಾಗುತ್ತದೆ. ಬೆಳಿಗ್ಗೆ, ಸಂಜೆ ಎನ್ನದೆ ಒಂಬತ್ತು ದಿನಗಳ ಕಾಲ ಒಂದಿಲ್ಲೊಂದು ಕಾರ್ಯಕ್ರಮ ಇದ್ದೆ ಇರುತ್ತವೆ. ಈ ವೇಳೆ ಶಕ್ತಿ ದೇವತೆಯ ಆರಾಧಕರು ಕೋಲು ಹಿಡಿದು ಪರಸ್ಪರ ಎದುರು ಬದರು ನಿಂತು ನೃತ್ಯ ಮಾಡಿ ದೇವಿಯನ್ನ ಸಂತುಷ್ಟು ಪಡಿಸುತ್ತಾರೆ., ಈ ಸೇವೆಯೇ ದಾಂಡಿಯಾ ಡಾನ್ಸ್.
2 / 6
ಕೈಯಲ್ಲಿ ದಂಡ ಇರುವುದರಿಂದ ಇದಕ್ಕೆ ದಾಂಡಿಯಾ ಎಂಬ ಹೆಸರು ಬಂದಿದ್ದು, ವಿಶೇಷವಾಗಿ ದಾಂಡಿಯಾ ನೃತ್ಯಕ್ಕಾಗಿ ನೂರಾರು ಮಾರವಾಡಿ ಯುವತಿಯರು, ಸ್ಥಳೀಯರು ಸೇರಿ ಈ ರೀತಿಯಾದ ನೃತ್ಯ ಆಯೋಜನೆ ಮಾಡುತ್ತಾರೆ. ಇದರಿಂದ ಐಎಂಎ ಆವರಣದದಲ್ಲಿ ಸಂಭ್ರಮ ಮನೆ ಮಾಡಿತ್ತು. ಮಹಿಳೆಯರು ಮಕ್ಕಳು ಬಣ್ಣ ಬಣ್ಣದ ಬಟ್ಟೆ ಧರಿಸಿ ಕಾರ್ಯಕ್ರಮಕ್ಕೆ ಬರುತ್ತಿದ್ದರು. ವಿಶೇಷವಾಗಿ ಇಂತಹ ಸಮಾರಂಭಕ್ಕೆ ರಾಜಸ್ತಾನಿ ಯುವ ಬಳಗ ಸಹ ಸಾಥ್ ನೀಡಿದರು.
3 / 6
ದಸರಾ ಪ್ರಯುಕ್ತ ದಾಂಡಿಯಾ ಡಾನ್ಸ್ ಸೇರಿದಂತೆ ವಿವಿಧ ಕಾರ್ಯಕ್ರಮವನ್ನು ಸ್ಥಳೀಯ ಯುವಕ-ಯುವತಿಯರ ಪಡೆ ಆಯೋಜಿಸಿದ್ದರು. ಜೊತೆಗೆ ನವರಾತ್ರಿಯ ಆಕರ್ಷಣೆ ಅಂದರೆ ದೇವತೆ ದುರ್ಗಿ. ಹೀಗಾಗಿ ಬಾಲಕಿಯರು ವಿವಿಧ ಪ್ರಕಾರದಲ್ಲಿ ಬಟ್ಟೆ ಧರಿಸಿಕೊಂಡು ಹಾಜರಿದ್ದರು. ಜೊತೆಗೆ ಯುತಿಯವರು ಹಾಗೂ ವಿವಾಹಿತ ಮಹಿಳೆಯರು ಅದ್ಭುತವಾಗಿ ನೃತ್ಯದಲ್ಲಿ ತೊಡಗಿದ್ದರು.
4 / 6
ಇಲ್ಲಿ ಕೇವಲ ದಾಂಡಿಯಾ ಡಾನ್ಸ್ ಮಾತ್ರವಷ್ಟೇ ಅಲ್ಲ, ಇತ್ತೀಚಿನ ಪ್ರಸಿದ್ಧ ಚಿತ್ರಗೀತೆಗಳಿಗೆ ಹೆಜ್ಜೆ ಹಾಕುವ ನೃತ್ಯ ಸಹ ಇತ್ತು. ಹೀಗಾಗಿ ಕೋಲು ಹಿಡಿದು ತಾಳಕ್ಕೆ ತಕ್ಕಂತೆ ಡ್ಯಾನ್ಸ್ ಮಾಡುವುದರ ಜೊತೆಗೆ ಚಿತ್ರಗೀತೆಗಳಿಗೆ ಮೈ ಚಳಿ ಬಿಟ್ಟು ಯುವತಿಯರು ಕುಣಿದಿದ್ದು ವಿಶೇಷವಾಗಿತ್ತು. ದಸರಾ ಆರಂಭದ ಒಂಭತ್ತು ದಿನವು ಈ ನೃತ್ಯ ಇದ್ದೆ ಇರುತ್ತದೆ. ಒಂದು ಸ್ಪರ್ಧೆ ಕೂಡ ಇದ್ದು, ಕೊನೆಯ ದಿನ ಪ್ರಶಸ್ತಿ ನೀಡಿ ಗೌರವಿಸುವ ಸಂಪ್ರದಾಯ ಇಲ್ಲಿದೆ.
5 / 6
ಇಂತಹ ದಾಂಡಿಯಾ ಡ್ಯಾನ್ಸ್ಗೆ 94 ವರ್ಷ ವಯಸ್ಸಿನ ಕಾಂಗ್ರೆಸ್ಸಿನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಕೂಡ ಸಾಥ್ ನೀಡಿದ್ದು ವಿಶೇಷವಾಗಿತ್ತು. ಡಾಂಡಿಯಾ ಹಿಡಿದು ಮಹಿಳೆಯರು ಹಾಗೂ ಯುವತಿಯರ ಜೊತೆಗೆ ದಾಂಡಿಯಾಗೆ ಸಾಥ್ ನೀಡಿ ಹುರಿದುಂಬಿಸಿದರು.
6 / 6
ಒಟ್ಟಾರೆ ಹತ್ತಾರು ದಿನಗಳಿಂದ ದಸರಾ ಹಬ್ಬಕ್ಕಾಗಿಯೇ ನೃತ್ಯ ಕಲಿತು ಬಂದಿದ್ದ ಯುವತಿಯರು ಮೊದಲ ಸಲ ತಮ್ಮ ನೃತ್ಯ ಪ್ರದರ್ಶನ ಮಾಡಿದರು. ಇದರಲ್ಲಿ ಉತ್ತಮವಾಗಿ ಡಾನ್ಸ್ ಮಾಡಿದವರಿಗೆ ಬಹುಮಾನ ಸಹ ನೀಡಲಾಯಿತು. ಈ ಹಿಂದೆ ಇಲ್ಲಿನ ರಾಜಸ್ತಾನಿ ನವರಾತ್ರಿ ಉತ್ಸವ ಸಮಿತಿ ಸಂಸ್ಥೆ ಇಂತಹ ನೃತ್ಯ ಕಲೆ ಪ್ರದರ್ಶನ ಮತ್ತು ನವರಾತ್ರಿ ಆಚರಣೆಗೆ ಆರಂಭಿಸಿದ್ದವು. ಆದ್ರೆ ಈಗ ಸ್ಥಳೀಯರೇ ಹೆಚ್ಚಾಗಿ ದಾಂಡಿಯಾ ಡಾನ್ಸ್ ಗೆ ಮೊರೆ ಹೋಗುತ್ತಿದ್ದಾರೆ.
ಬಸವರಾಜ್ ದೊಡ್ಮನಿ ಟಿವಿ9 ದಾವಣಗೆರೆ.
Published On - 7:09 pm, Fri, 4 October 24